ಬಾಕ್ಸ್‌ ಆಫೀಸ್‌ನಲ್ಲಿ ಓಟ ಮುಂದುವರಿಸಿದ ಸಲಾರ್; ಬಿಡುಗಡೆಯಾದ ಎರಡೇ ದಿನಕ್ಕೆ 295.7 ಕೋಟಿ ರೂ. ಗಳಿಕೆ

ನಟ ಪ್ರಭಾಸ್ ಅಭಿನಯದ 'ಸಲಾರ್: ಭಾಗ 1 - ಕದನ ವಿರಾಮ' ಬಿಡುಗಡೆಯಾದ ಎರಡೇ ದಿನಗಳಲ್ಲಿ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 295. 7 ಕೋಟಿ ರೂ. ಗಳಿಸಿದೆ ಎಂದು ಚಿತ್ರತಂಡ ಭಾನುವಾರ ತಿಳಿಸಿದ್ದಾರೆ. 'ಕೆಜಿಎಫ್' ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದೆ. 
ಬಾಕ್ಸ್‌ ಆಫೀಸ್‌ನಲ್ಲಿ ಓಟ ಮುಂದುವರಿಸಿದ ಸಲಾರ್; ಬಿಡುಗಡೆಯಾದ ಎರಡೇ ದಿನಕ್ಕೆ 295.7 ಕೋಟಿ ರೂ. ಗಳಿಕೆ

ಮುಂಬೈ: ನಟ ಪ್ರಭಾಸ್ ಅಭಿನಯದ 'ಸಲಾರ್: ಭಾಗ 1 - ಕದನ ವಿರಾಮ' ಬಿಡುಗಡೆಯಾದ ಎರಡೇ ದಿನಗಳಲ್ಲಿ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 295. 7 ಕೋಟಿ ರೂ. ಗಳಿಸಿದೆ ಎಂದು ಚಿತ್ರತಂಡ ಭಾನುವಾರ ತಿಳಿಸಿದ್ದಾರೆ.

'ಕೆಜಿಎಫ್' ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದೆ. ಚಿತ್ರದಲ್ಲಿ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಕೂಡ ನಟಿಸಿದ್ದಾರೆ.

'ಸಲಾರ್' ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಚಿತ್ರತಂಡ ಚಿತ್ರದ ಇತ್ತೀಚಿನ ಬಾಕ್ಸ್ ಆಫೀಸ್ ಸಂಗ್ರಹವನ್ನು ಹಂಚಿಕೊಂಡಿದೆ.
'ಬೇಟೆಯ ಸೀಸನ್ ಪ್ರಾರಂಭವಾಗಿದೆ. ಸಲಾರ್- ಕದನ ವಿರಾಮ ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ ಪ್ರಾಬಲ್ಯ ಸಾಧಿಸುತ್ತಿದೆ. ಬಿಡುಗಡೆಯಾದ 2 ದಿನಗಳಲ್ಲಿ ವಿಶ್ವದಾದ್ಯಂತ 295.7 ಕೋಟಿ ರೂ. ಗಳಿಸಿದೆ' ಎಂದು ಹೇಳಿದೆ.

ಹೊಂಬಾಳೆ ಫಿಲ್ಮ್ಸ್ ಪ್ರಕಾರ, ಎಪಿಕ್ ಆ್ಯಕ್ಷನ್ ಸಲಾರ್ ಚಿತ್ರದ ಮೊದಲ ಭಾಗವು 2023ರಲ್ಲಿ ಬಿಡುಗಡೆಯಾದ ಆರಂಭಿಕ ದಿನಗಳಲ್ಲಿ ಯಾವುದೇ ಭಾರತೀಯ ಚಿತ್ರ ಮಾಡದ ದಾಖಲೆ ಮಾಡಿದೆ. ಈ ಮೂಲಕ ಮೊದಲ ದಿನವೇ 178.7 ಕೋಟಿ ರೂ. ಸಂಗ್ರಹಿಸಿದೆ ಎಂದಿದೆ.

ಕಾಲ್ಪನಿಕ ನಗರವಾದ ಖಾನ್‌ಸಾರ್‌ನಲ್ಲಿ ನಡೆಯುವ ಕಥೆಯನ್ನು ಹೊಂದಿರುವ 'ಸಲಾರ್: ಭಾಗ 1 - ಕದನ ವಿರಾಮ' ಇಬ್ಬರು ಗೆಳೆಯರಾದ ದೇವ (ಪ್ರಭಾಸ್) ಮತ್ತು ವರ್ಧ (ಪೃಥ್ವಿರಾಜ್) ಸುತ್ತ ಸುತ್ತುತ್ತದೆ.

ಚಿತ್ರವು ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಶುಕ್ರವಾರ (ಡಿಸೆಂಬರ್ 22) ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಿದೆ.

ಈ ವರ್ಷ ತೆರೆಕಂಡ ನಟ ಶಾರುಖ್ ಖಾನ್ ಅವರ ಎರಡು ಬ್ಲಾಕ್‌ಬಸ್ಟರ್ ಸಿನಿಮಾಗಳಾದ 'ಪಠಾಣ್' ಮತ್ತು 'ಜವಾನ್' ಗಳಿಕೆಯನ್ನು ಸಲಾರ್ ಚಿತ್ರ ಮೀರಿಸಿದೆ. ಈ ಎರಡೂ ಚಿತ್ರಗಳು ಬಿಡುಗಡೆಯಾದ ಮೊದಲ ದಿನ ವಿಶ್ವದಾದ್ಯಂತ ಕ್ರಮವಾಗಿ 106 ಕೋಟಿ ರೂ. ಮತ್ತು 129.6 ಕೋಟಿ ರೂ. ಗಳಿಸಿತ್ತು. ರಣಬೀರ್ ಕಪೂರ್ ಅವರ ಅನಿಮಲ್ ಚಿತ್ರವು ಮೊದಲ ದಿನ 116 ಕೋಟಿ ರೂ. ಗಳಿಸಿತ್ತು.

ಸಲಾರ್ ಚಿತ್ರದಲ್ಲಿ ಶ್ರುತಿ ಹಾಸನ್, ಈಶ್ವರಿ ರಾವ್, ಜಗಪತಿ ಬಾಬು ಮತ್ತು ಶ್ರೀಯಾ ರೆಡ್ಡಿ ಕೂಡ ನಟಿಸಿದ್ದಾರೆ. ಚಿತ್ರದ ಮುಂದುವರಿದ ಭಾಗಕ್ಕೆ 'ಸಲಾರ್: ಭಾಗ 2 - ಶೌರ್ಯಾಂಗ ಪರ್ವಂ' ಎಂದು ಹೆಸರಿಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com