ದಾಂಪತ್ಯ ಜೀವನಕ್ಕೆ ಕಾಲಿಡಲು ಹೆಬ್ಬುಲಿ, ಪೈಲ್ವಾನ್, ಕಬ್ಜ ಖ್ಯಾತಿಯ ಕಬೀರ್ ದುಹಾನ್ ಸಿಂಗ್ ಸಜ್ಜು!

ವೇದಾಲಂ ಮತ್ತು ಡಿಕ್ಟೇಟರ್ ಚಿತ್ರಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ ನಟ ಕಬೀರ್ ದುಹಾನ್ ಸಿಂಗ್ ಅವರು ಜೂನ್ 23ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಕಬೀರ್ ಸಿಂಗ್ ಅವರು ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಸೀಮಾ ಚಹಾಲ್ ಅವರನ್ನು ವರಿಸಲಿದ್ದಾರೆ.
ಕಬೀರ್ ದುಹಾನ್ ಸಿಂಗ್

ವಿವಾಹ ಸಮಾರಂಭವು ಜೂನ್ 21 ರಂದು ಕೀರ್ತನೆಯೊಂದಿಗೆ ಪ್ರಾರಂಭವಾಗುತ್ತದೆ. ನಂತರ 22 ರಂದು ಮೆಹೆಂದಿ ಮತ್ತು 23 ರಂದು ದೆಹಲಿಯ ರೆಸಾರ್ಟ್‌ನಲ್ಲಿ ಆಪ್ತರ ಸಮ್ಮುಖದಲ್ಲಿ ವಿವಾಹ ನಡೆಯಲಿದೆ.

ಕಬೀರ್ ತಮಿಳು, ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲಿ ಚಿರಪರಿಚಿತ ಮುಖ. ಅವರು ಸರ್ದಾರ್ ಗಬ್ಬರ್ ಸಿಂಗ್, ಹೆಬ್ಬುಲಿ, ಪೈಲ್ವಾನ್, ಸಾಕ್ಷಿಂ, ಕಾಂಚನಾ 3 ಮತ್ತು ಕಬ್ಜದಂತಹ ಪ್ರಮುಖ ಸಿನಿಮಾಗಳ ಭಾಗವಾಗಿದ್ದಾರೆ. ಕಬೀರ್ ಇತ್ತೀಚೆಗೆ ಕಬ್ಜ ಮತ್ತು ಶಾಕುಂತಲಂನಂತಹ ಪ್ಯಾನ್-ಇಂಡಿಯನ್ ಪ್ರಾಜೆಕ್ಟ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.

ನಟ ಇಶಾನ್ ಖಟ್ಟರ್ ಮತ್ತು ಅನನ್ಯಾ ಪಾಂಡೆ ನಟಿಸಿದ ಖಾಲಿ ಪೀಲಿ ಚಿತ್ರದ ಮೂಲಕ ಹಿಂದಿಗೆ ಪದಾರ್ಪಣೆ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com