ನೇಪಥ್ಯಕ್ಕೆ ಸರಿಯುತ್ತಿವೆ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು: ಕನ್ನಡ ಚಲನಚಿತ್ರಗಳೇ ಕಾರಣ ಎನ್ನುತ್ತಿದ್ದಾರೆ ಮಾಲೀಕರು!

ರಾಜ್ಯದಲ್ಲಿ ಕ್ರಮೇಣ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ನೇಪಥ್ಯಕ್ಕೆ ಸರಿಯುತ್ತಿದ್ದು, ಒಂದಲ್ಲ ಒಂದು ಕಾರಣದಿಂದ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಬಾಗಿಲು ಹಾಕುತ್ತಿವೆ. ಆದರೆ ಈ ಪರಿಸ್ಥಿತಿಗೆ ಕನ್ನಡ ಚಲನಚಿತ್ರಗಳೇ ಕಾರಣ ಎಂದು ಅವುಗಳ ಮಾಲೀಕರು ದೂಷಿಸುತ್ತಿದ್ದಾರೆ.
ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳು (ಸಂಗ್ರಹ ಚಿತ್ರ)
ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳು (ಸಂಗ್ರಹ ಚಿತ್ರ)

ಬೆಂಗಳೂರು: ರಾಜ್ಯದಲ್ಲಿ ಕ್ರಮೇಣ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ನೇಪಥ್ಯಕ್ಕೆ ಸರಿಯುತ್ತಿದ್ದು, ಒಂದಲ್ಲ ಒಂದು ಕಾರಣದಿಂದ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಬಾಗಿಲು ಹಾಕುತ್ತಿವೆ. ಆದರೆ ಈ ಪರಿಸ್ಥಿತಿಗೆ ಕನ್ನಡ ಚಲನಚಿತ್ರಗಳೇ ಕಾರಣ ಎಂದು ಅವುಗಳ ಮಾಲೀಕರು ದೂಷಿಸುತ್ತಿದ್ದಾರೆ.

ಹೌದು.. ಕೆಜಿಎಫ್, ಕಾಂತಾರ, ಚಾರ್ಲಿ 777 ನಂತಹ ಕನ್ನಡ ಚಿತ್ರಗಳ ಯಶಸ್ಸಿನ ಬೆನ್ನಲ್ಲೇ ಕನ್ನಡ ಚಿತ್ರರಂಗದ ಸುವರ್ಣ ಯುಗ ಮರಳುತ್ತಿದೆ ಎಂಬ ಗ್ರಹಿಕೆಯ ಹೊರತಾಗಿಯೂ, ಇಂದು ಕನ್ನಡ ಚಿತ್ರರಂಗ ಅಕ್ಷರಶಃ ಸೊರಗುತ್ತಿದೆ. ಜನವರಿಯಿಂದ 150 ಕ್ಕೂ ಹೆಚ್ಚು ಚಿತ್ರಮಂದಿರಗಳು ಮುಚ್ಚಿದ್ದು, ವರ್ಷಕ್ಕೆ 100 ಕ್ಕೂ ಹೆಚ್ಚು ಚಿತ್ರಮಂದಿರಗಳು ಮುಚ್ಚುವ ಅಂಚಿನಲ್ಲಿವೆ. ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳು ಮತ್ತು ಅದರ ಸಂಸ್ಕೃತಿಯ ಕುಸಿತಕ್ಕೆ ಪ್ರಮುಖ ಕಾರಣವೆಂದರೆ ಹೆಚ್ಚಿನ ದರ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (ಎಫ್‌ಕೆಸಿಸಿ) ಪ್ರಸ್ತುತ ಮತ್ತು ಹಿಂದಿನ ಅಧ್ಯಕ್ಷರು ಸೇರಿದಂತೆ ಕನ್ನಡ ಸಿನಿ ಉದ್ಯಮದ ಮುಖ್ಯಸ್ಥರು, ಥಿಯೇಟರ್ ಮಾಲೀಕರು ಮತ್ತು ಪ್ರದರ್ಶಕರು ಅಭಿಪ್ರಾಯಪಟ್ಟಿದ್ದಾರೆ. ಇದಲ್ಲದೇ ವಿಷಯದ ಕೊರತೆ ಮತ್ತು ಈಗ OTT ಪ್ಲಾಟ್‌ಫಾರ್ಮ್‌ಗಳ ಪ್ರವೇಶ ಇಂದು ಸಿಂಗಲ್ ಸ್ಕ್ರೀನ್ ಗಳಿಗೆ ಮಾರಕವಾಗುತ್ತಿವೆ ಎಂದು ಹೇಳಲಾಗಿದೆ. 

"ಹಿಂದೆ, ಟಾಪ್ ಹೀರೋಗಳು ವರ್ಷಕ್ಕೆ ಕನಿಷ್ಠ ನಾಲ್ಕು ಚಿತ್ರಗಳನ್ನು ಮಾಡುತ್ತಿದ್ದರು ಮತ್ತು ಇದು ಜಿಲ್ಲೆ, ತಾಲೂಕು ಮತ್ತು ಹೋಬಳಿಗಳಲ್ಲಿನ ಚಿತ್ರಮಂದಿರಗಳಿಗೆ ಪ್ರೇಕ್ಷಕರನ್ನು ಸೆಳೆಯಲು ಸಹಾಯ ಮಾಡುತ್ತಿತ್ತು. ಈಗ ವರ್ಷಕ್ಕೆ ಒಂದೊಂದು ಸಿನಿಮಾ ಮಾಡುತ್ತಿದ್ದಾರೆ. ಅಲ್ಲದೆ, ಹೆಚ್ಚಿನ-ಬಜೆಟ್ ಚಲನಚಿತ್ರಗಳು ಹೆಚ್ಚಿನ ಪ್ರವೇಶ ದರವನ್ನು ನಿಗದಿಪಡಿಸುತ್ತವೆ, ಇದು ಮಲ್ಟಿಪ್ಲೆಕ್ಸ್‌ಗಳ ಪೈಪೋಟಿಯಲ್ಲಿ ಸಣ್ಣ ಚಿತ್ರಮಂದಿರಗಳು ಸೋಲುತ್ತಿವೆ. ಒಟಿಟಿ ಪ್ಲಾಟ್‌ಫಾರ್ಮ್‌ಗಳು ಸಾರ್ವಜನಿಕರನ್ನು ಥಿಯೇಟರ್‌ಗಳಿಗೆ ಹೋಗದಂತೆ ತಡೆಯುತ್ತಿವೆ ಎಂದು ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಎನ್‌ಎಂ ಸುರೇಶ್ ಹೇಳಿದ್ದಾರೆ.

ಇದೇ ಮಾತನ್ನು ಹೇಳಿರುವ 115 ಚಿತ್ರಮಂದಿರಗಳನ್ನು ಗುತ್ತಿಗೆ ಪಡೆದು 35 ಚಿತ್ರಗಳನ್ನು ನಿರ್ಮಿಸಿದ್ದ ಎನ್ ಕುಮಾರ್ ಅವರು, ಥಿಯೇಟರ್ ವ್ಯವಹಾರಕ್ಕೆ ಗುಡ್ ಬೈ ಹೇಳಿದ್ದಾರೆ. ಈ ಬಗ್ಗೆ ನೋವಿನಿಂದಲೇ ಮಾತನಾಡಿರುವ ಅವರು, “ನಾನು ಈಗ ಚಿತ್ರಮಂದಿರ ವ್ಯವಹಾರ ಮುನ್ನಡೆಸಲು ಸಾಧ್ಯವಿಲ್ಲ. ನಾನು ಚಿತ್ರಗಳ ನಿರ್ಮಾಣ ಮತ್ತು ಯೋಜನೆ ಮಾತ್ರ ಮಾಡುತ್ತಿದ್ದೇನೆ. ಸಿಬ್ಬಂದಿಗೆ ವಿದ್ಯುತ್ ಬಿಲ್, ನೀರಿನ ಬಿಲ್, ಸಂಬಳ, ಇಎಸ್‌ಐ ಮತ್ತು ಪಿಎಫ್ ಪಾವತಿ ಮಾಡುವುದು ಸವಾಲಾಗಿ ಪರಿಣಮಿಸಿತ್ತು. ಎಲ್ಲಿಯವರೆಗೆ ನಮಗೆ ಉತ್ತಮ ಕಂಟೆಂಟ್ ಸಿಗುವುದಿಲ್ಲವೋ ಅಲ್ಲಿಯವರೆಗೆ ನಟರು ಒಂದು ವರ್ಷದಲ್ಲಿ ಹೆಚ್ಚು ಚಿತ್ರಗಳನ್ನು ಮಾಡಲು ಪ್ರಾರಂಭಿಸುತ್ತಾರೆ ಮತ್ತು OTT ಪ್ಲಾಟ್‌ಫಾರ್ಮ್‌ಗಳು ಚಲನಚಿತ್ರಗಳ ಬಿಡುಗಡೆಯನ್ನು 60 ದಿನಗಳವರೆಗೆ ವಿಳಂಬಗೊಳಿಸುತ್ತವೆ, ಥಿಯೇಟರ್‌ಗಳ ಉಳಿವಿಗೆ ಯಾವುದೇ ಅವಕಾಶವಿಲ್ಲ ಎಂದು ಅವರು ಹೇಳಿದ್ದಾರೆ.

1990 ರ ದಶಕದ ಕೊನೆಯಲ್ಲಿ, ಕರ್ನಾಟಕದಲ್ಲಿ 1,000 ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳು ಇದ್ದವು. ಆದರೆ ಕಳೆದ 15 ವರ್ಷಗಳಲ್ಲಿ, ಸಂಖ್ಯೆ 650 ಕ್ಕೆ ಇಳಿದಿದೆ. ಜನವರಿಯಿಂದ ಸುಮಾರು 150 ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳು ಸ್ಥಗಿತಗೊಂಡಿವೆ. ಬೆಂಗಳೂರು ಒಂದರಲ್ಲೇ 50 ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳನ್ನು ಮುಚ್ಚಲಾಗಿದೆ. ಅದೇ ರೀತಿ ಮೈಸೂರಿನಲ್ಲಿ ಲಕ್ಷ್ಮಿ, ಒಪೆರಾ, ರಂಜಿತ್ ಸೇರಿದಂತೆ 10 ಥಿಯೇಟರ್ ಗಳನ್ನು ಮುಚ್ಚಲಾಗಿದೆ. ಹುಬ್ಬಳ್ಳಿಯಲ್ಲಿ ಸುಮಾರು 10 ಮುಚ್ಚಲಾಗಿತ್ತು. ಇತ್ತೀಚೆಗೆ, ಮಂಡ್ಯದಲ್ಲಿ ಮಹಾವೀರ್, ಗಿರಿಜಾ ಮತ್ತು ಸಿದ್ಧಾರ್ಥ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳು ಮತ್ತು ತುಮಕೂರಿನ ಪ್ರಶಾಂತ್ ಚಿತ್ರಮಂದಿರಗಳನ್ನು ಮುಚ್ಚಲಾಯಿತು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com