ನಟ ಉಪೇಂದ್ರ
ನಟ ಉಪೇಂದ್ರ

ಕನಕದಾಸರ ಚರಿತ್ರೆ ಆಧರಿಸಿದ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ನಟನೆ

ಗೋಕರ್ಣ, ಕುಟುಂಬ, ದುಬೈ ಬಾಬು ಸಿನಿಮಾಗಳ ಬಳಿಕ ಮತ್ತೊಂದು ಚಿತ್ರದಲ್ಲಿ ನಿರ್ದೇಶಕ ನಾಗಣ್ಣ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಕೈಜೋಡಿಸಿದ್ದಾರೆ.
Published on

ಗೋಕರ್ಣ, ಕುಟುಂಬ, ದುಬೈ ಬಾಬು ಸಿನಿಮಾಗಳ ಬಳಿಕ ಮತ್ತೊಂದು ಚಿತ್ರದಲ್ಲಿ ನಿರ್ದೇಶಕ ನಾಗಣ್ಣ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಕೈಜೋಡಿಸಿದ್ದಾರೆ.

ನಿರ್ದೇಶಕ ನಾಗಣ್ಣ ಹಿಸ್ಟೋರಿಕಲ್ ಸಿನಿಮಾ ಮಾಡುವುದರಲ್ಲಿ ನಿಸ್ಸಿಮರು. ಈ ಹಿಂದೆ ದೊಡ್ಡ ಸಿನಿಮಾ ಮಾಡಿರುವ ಅನುಭವ ಇವರಿಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸಂಗೊಳ್ಳಿ ರಾಯಣ್ಣ ಮತ್ತು ಕುರುಕ್ಷೇತ್ರದಂತಹ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಇದೀಗ ಉಪ್ಪಿ ಜೊತೆಗೆ ಹಿಸ್ಟೋರಿಕಲ್ ಸಿನಿಮಾವೊಂದನ್ನು ಮಾಡಲು ಹೊರಟಿದ್ದಾರೆ.

ಕನಕದಾಸರ ಚರಿತ್ರೆಯನ್ನು ಆಧರಿಸಿ ನಾಗಣ್ಣ ಅವರು ಸ್ಕ್ರಿಪ್ಟ್ ಸಿದ್ಧಪಡಿಸಿದ್ದು, ಚಿತ್ರದಲ್ಲಿ ನಟಿಸಲು ಉಪೇಂದ್ರ ಅವರು ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಕನಕದಾಸರ ಸಿದ್ದಾಂತಗಳಿಂದ ಆದ ಪರಿಣಾಮಗಳು ಸೇರಿದಂತೆ ಹಲವು ವಿಚಾರಗಳ ಬಗ್ಗೆ ತೆರೆಮೇಲೆ ತರಲು ಡೈರೆಕ್ಟರ್ ನಾಗಣ್ಣ ಸಜ್ಜಾಗಿದ್ದಾರೆ. ಯುಐ ಸಿನಿಮಾ ಕೆಲಸ ಪೂರ್ಣಗೊಳ್ಳುತ್ತಿದ್ದಂತೆಯೇ ನಾಗಣ್ಣ ಅವರ ಚಿತ್ರದಲ್ಲಿ ಉಪೇಂದ್ರ ತೊಡಗಿಕೊಳ್ಳಲಿದ್ದಾರೆಂದು ತಿಳಿದುಬಂದಿದೆ.

ಬ್ಲಾಕ್‌ಬಸ್ಟರ್ ಎ ಚಿತ್ರ ನಿರ್ಮಾಣ ಮಾಡಿದ್ದ ಬಿ. ಜಗನ್ನಾಥ್ ಅವರ ಪುತ್ರ, ಬಿ. ಜಿ ಮಂಜುನಾಥ್ ಅವರೇ ಈ ಚಿತ್ರಕ್ಕೂ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಹಂಸಲೇಖ ಅವರು ಸಂಗೀತ ನೀಡುತ್ತಿದ್ದು, ಈಗಾಗಲೇ ಈ ನಿಟ್ಟಿನಲ್ಲಿ ಕೆಲಸ ಆರಂಭಿಸಿದ್ದಾರೆ.

ಚಿತ್ರದಲ್ಲಿ ಇತಿಹಾಸ ಮತ್ತು ಭಕ್ತಿಯನ್ನು ಸುಂದರವಾಗಿ ವಿಲೀನಗೊಳಿಸಲಾಗಿದೆ. ಈಗಾಗಲೇ ಉಪೇಂದ್ರ ಅವರೊಂದಿಗೆ ಗೋಕರ್ಣ, ಕುಟುಂಬ ಮತ್ತು ಗೌರಮ್ಮ ಸೇರಿದಂತೆ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದು, ಅವರ ಬಹುಮುಖ ನಟನೆಯ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದೇನೆ. ಯಾವುದೇ ಪಾತ್ರವನ್ನು ದೋಷರಹಿತವಾಗಿ ಸಾಕಾರಗೊಳಿಸುವ ಸಾಮರ್ಥ್ಯವನ್ನು ಉಪೇಂದ್ರ ಹೊಂದಿದ್ದಾರೆ. ಉಪೇಂದ್ರ ಅವರ ಪಾತ್ರವು ಎರಡು ವಿಭಿನ್ನ ನೋಟವನ್ನು ಹೊಂದಿರುತ್ತದೆ. ಚಿತ್ರದ ಇತರೆ ಪಾತ್ರಗಳ ಶೀಘ್ರದಲ್ಲೇ ಮಾಹಿತಿ ನೀಡಲಾಗುತ್ತದೆ. ಜುಲೈ ತಿಂಗಳಿನಲ್ಲಿ ಚಿತ್ರದ ಶೀರ್ಷಿಕೆ ಅನಾವರಣಗೊಳಿಸಲಾಗುತ್ತದೆ ಎಂದು ನಿರ್ದೇಶಕ ನಾಗಣ್ಣ ಅವರು ಹೇಳಿದ್ದಾರೆ.

ಉಪೇಂದ್ರ ಅವರಿಗೆ ಸ್ಕ್ರಿಪ್ಟ್ ಹೇಳಿದಾಗ ಥ್ರಿಲ್ ಆದರು, ನಂತರ ಚಿತ್ರದಲ್ಲಿ ನಟಿಸಲು ಒಪ್ಪಿಗೆ ನೀಡಿದರು. ಚಿತ್ರ ನಿರ್ಮಾಣಕ್ಕೆ ಸಿದ್ಧತೆಗಳು ಮುಂದುವರೆದಿವೆ. ಇತ್ತೀಚೆಗಷ್ಟೇ ಕನಕದಾಸರ ಜನ್ಮಸ್ಥಳ ಕಾಗಿನೆಲೆಗೂ ಭೇಟಿ ನೀಡಿ, ಶ್ರೀಗಳ ಆಶೀರ್ವಾದ ಪಡೆದುಕೊಳ್ಳಲಾಯಿತು ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com