ಮುಂಬೈ: 'ಆರ್‌ಆರ್‌ಆರ್' ಚಿತ್ರದ 'ನಾಟು ನಾಟು' ಹಾಡಿನ ಸ್ಟೆಪ್ಸ್‌ಗಳು ಕಠಿಣವಾಗಿರಲಿಲ್ಲ. ಆದರೆ, ಆ ಹಾಡಿಗೆ ಸಿಂಕ್ ಮಾಡುವುದು ಕಠಿಣವಾಗಿತ್ತು. ಹಾಡಿನ ಚಿತ್ರೀಕರಣದಿಂದ ಅವರ 'ಕಾಲುಗಳು ಇನ್ನೂ ನೋಯುತ್ತಿವೆ'. ಅದಕ್ಕಾಗಿ ಅವರು ಮತ್ತು ಅವರ ಸಹ ನಟ ಪ್ರತಿದಿನ ಮೂರು ಗಂಟೆಗಳ ಕಾಲ ಅಭ್ಯಾಸ ಮಾಡಿದ್ದಾಗಿ ಸೂಪರ್‌ಸ್ಟಾರ್ ಜೂನಿಯರ್ ಎನ್‌ಟಿಆರ್ ತಿಳಿಸಿದ್ದಾರೆ.
ಎಂಟರ್‌ಟೈನ್‌ಮೆಂಟ್ ಟುನೈಟ್‌ಗೆ ನೀಡಿದ ಸಂದರ್ಶನದಲ್ಲಿ, ಈ ಚಿತ್ರವು ಎಲ್ಲಾ ಜಾಗತಿಕ ಗಡಿಗಳನ್ನು ದಾಟುತ್ತಿದೆ ಮತ್ತು ಪ್ರತಿಯೊಬ್ಬರೂ ಅದನ್ನು ಪ್ರೀತಿಸುತ್ತಿದ್ದಾರೆಯೇ? ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜೂನಿಯರ್ ಎನ್‌ಟಿಆರ್, 'ನಮಗೆ ಯಾವುದೇ ಕಲ್ಪನೆ ಇರಲಿಲ್ಲ. ಆ ಹಾಡಿನ ಚಿತ್ರೀಕರಣದ ಅನುಭವದಿಂದ ನಾನು ಈ ಮಾತನ್ನು ಹೇಳುತ್ತಿದ್ದೇನೆ. ನನ್ನ ಕಾಲುಗಳು ಇನ್ನೂ ನೋವುಂಟುಮಾಡುತ್ತಿವೆ' ಎಂದರು.
'ನೃತ್ಯ ಮಾಡುವುದು ಕಠಿಣವಾಗಿರಲಿಲ್ಲ. ಆದರೆ, ಸಿಂಕ್ ಮಾಡುವುದು ಹೆಚ್ಚು ಕಷ್ಟಕರವಾಗಿತ್ತು. ನಾವು ಪ್ರತಿದಿನ ಮೂರು ಗಂಟೆಗಳ ಕಾಲ ಅಭ್ಯಾಸ ಮಾಡುತ್ತಿದ್ದೆವು. ಆ ಹಾಡಿನ ಚಿತ್ರೀಕರಣದ ವೇಳೆಯೂ ನಾವು ರಿಹರ್ಸಲ್ ಮಾಡುತ್ತಿದ್ದೆವು... ಆ ಹಾಡಿನ ಚಿತ್ರೀಕರಣಕ್ಕೆ ಒಂದು ವಾರ ಮುಂಚೆಯೇ ರಿಹರ್ಸಲ್ ಮಾಡಿ ಸೆಟ್‌ನಲ್ಲೂ ಅಭ್ಯಾಸ ಮಾಡುತ್ತಿದ್ದೆವು. ಇದು ಸಿಂಕ್ರೊನೈಸೇಶನ್‌ಗಾಗಿ ಮಾತ್ರ' ಎಂದಿದ್ದಾರೆ.
ಆಸ್ಕರ್ ಪ್ರಶಸ್ತಿ ನೀಡುವ ಅಕಾಡೆಮಿ ಅವಾರ್ಡ್ಸ್‌ಗೆ ನಾಮನಿರ್ದೇಶನಗೊಂಡಿರುವ ಬಗ್ಗೆ ಏನನಿಸುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 'ಒಬ್ಬ ನಟ ಇನ್ನೇನನ್ನು ಬಯಸಬಹುದು. ಜಾಗತಿಕವಾಗಿ ಸಿನಿಮಾದ ಅತಿದೊಡ್ಡ ಆಚರಣೆಯಾದ ಆಸ್ಕರ್‌ನ ಭಾಗವಾಗುವುದನ್ನು ಬಿಟ್ಟು ನಿರ್ದೇಶಕರು ಇನ್ನೇನನ್ನು ಕೇಳುತ್ತಾರೆ. ಆ ದೊಡ್ಡ ದಿನದಂದು ನಾನು ನಟನಾಗಿ ರೆಡ್ ಕಾರ್ಪೆಟ್ ಮೇಲೆ ನಡೆಯುವುದಿಲ್ಲ. ಆದರೆ, ಭಾರತೀಯನಾಗಿ ಹೋಗುತ್ತೇನೆ' ಎಂದರು.
'ಆ ದಿನಕ್ಕೆ... ನಾವು 'RRR' ನ ನಟರಾಗಿ ಹೋಗುವುದಿಲ್ಲ ಎಂದು ನಾನು ಭಾವಿಸುತ್ತೇನೆ. ನಾನು ಭಾರತೀಯ ಚಿತ್ರರಂಗದಿಂದ ನಟನಾಗಿ ನಡೆಯಲು ಹೋಗುವುದಿಲ್ಲ. ನನ್ನ ಹೃದಯದಲ್ಲಿ ನನ್ನ ರಾಷ್ಟ್ರವನ್ನು ಹೊತ್ತುಕೊಂಡು ಹೆಮ್ಮೆಯೊಂದಿಗೆ ನಾನು ಆ ಕಾರ್ಪೆಟ್ ಮೇಲೆ ಭಾರತೀಯನಾಗಿ ನಡೆಯಲಿದ್ದೇನೆ' ಎಂದರು.
ಎಸ್ಎಸ್ ರಾಜಮೌಳಿ ಅವರ 'RRR'ನ 'ನಾಟು ನಾಟು' ಹಾಡು 95ನೇ ಆಸ್ಕರ್ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ. ಮಾರ್ಚ್ 12 ರಂದು ಅದ್ಧೂರಿ ಕಾರ್ಯಕ್ರಮ ನಡೆಯಲಿದೆ.
ಎಂಎಂ ಕೀರವಾಣಿ ಸಂಯೋಜಿಸಿದ ಈ ಹಾಡು, ಜನವರಿಯಲ್ಲಿ ನಡೆದ 80ನೇ ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಮೂಲ ಗೀತೆ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಮತ್ತು ಏಷ್ಯನ್ ಹಾಡು ಎಂಬ ಕೀರ್ತಿಗೆ ಪಾತ್ರವಾಗಿದೆ.
Advertisement