ಕನ್ನಡ, ತೆಲುಗಿನಲ್ಲಿ ತಯಾರಾಗುವ ಬಿಗ್ ಬಜೆಟ್ ಚಿತ್ರಕ್ಕೆ ರಿಷಿ ನಾಯಕ, ಆ್ಯಕ್ಷನ್ ಸಿನಿಮಾಗೆ ಪದಾರ್ಪಣೆ

ಆಪರೇಷನ್ ಅಲಮೇಲಮ್ಮ ಮತ್ತು ಕವಲುದಾರಿಯಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾದ ನಟ ರಿಷಿ, ಸ್ಕ್ರಿಪ್ಟ್‌ಗಳ ಆಯ್ಕೆಗೆ ಹೆಸರುವಾಸಿಯಾಗಿದ್ದಾರೆ. 'ರಾಮನ ಅವತಾರ' ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದು, ಸದ್ಯ ಪ್ರಶಾಂತ್ ರಾಜಪ್ಪ ಅವರ ಮುಂದಿನ ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಪ್ರಕಾಶ್ ಬೆಳವಾಡಿ ಕೂಡ ನಟಿಸಿದ್ದಾರೆ. 
ರಿಷಿ - ನಂದೀಶ್
ರಿಷಿ - ನಂದೀಶ್

ಆಪರೇಷನ್ ಅಲಮೇಲಮ್ಮ ಮತ್ತು ಕವಲುದಾರಿಯಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾದ ನಟ ರಿಷಿ, ಸ್ಕ್ರಿಪ್ಟ್‌ಗಳ ಆಯ್ಕೆಗೆ ಹೆಸರುವಾಸಿಯಾಗಿದ್ದಾರೆ. 'ರಾಮನ ಅವತಾರ' ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದು, ಸದ್ಯ ಪ್ರಶಾಂತ್ ರಾಜಪ್ಪ ಅವರ ಮುಂದಿನ ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಪ್ರಕಾಶ್ ಬೆಳವಾಡಿ ಕೂಡ ನಟಿಸಿದ್ದಾರೆ. 

ಈಮಧ್ಯೆ, ಅವರ ಮುಂದಿನ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ದೊಡ್ಡ ಬಜೆಟ್‌ನಲ್ಲಿ ಕನ್ನಡ ಮತ್ತು ತೆಲುಗಿನಲ್ಲಿ ಸಿದ್ಧವಾಗಲಿದೆ. ಈ ಹಿಂದೆ ನೀನಾಸಂ ಸತೀಶ್ ನಟನೆಯ 'ಡಿಯರ್ ವಿಕ್ರಮ್' ಚಿತ್ರವನ್ನು ನಿರ್ದೇಶಿಸಿದ್ದ ಕೆಎಸ್ ನಂದೀಶ್ ಅವರು ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಈ ಯೋಜನೆಯು ಜೂನ್ 2 ರಂದು ಪ್ರಾರಂಭವಾಗಲಿದ್ದು, ಅದೇ ದಿನ ನಿರ್ಮಾಣ ಸಂಸ್ಥೆ ಮತ್ತು ಪಾತ್ರವರ್ಗವನ್ನು ಅನಾವರಣಗೊಳಿಸಲು ಚಿತ್ರತಂಡ ಯೋಜಿಸಿದೆ.

ನಂದೀಶ್ ಅವರೊಂದಿಗಿನ ಸಹಯೋಗದ ಕುರಿತು ಮಾತನಾಡಿದ ರಿಷಿ, ಇದು ಸಾಕಷ್ಟು ಆ್ಯಕ್ಷನ್ ಹೊಂದಿರುವ ಸಾಮಾಜಿಕ ಸಂದೇಶವುಳ್ಳ ಚಿತ್ರವಾಗಿದೆ. ಈ ಸಿನಿಮಾ ಮೂಲಕ ತಾನು ಆ್ಯಕ್ಷನ್ ಹೀರೋ ಆಗಿ ಕಾಣಿಸಿಕೊಳ್ಳಲಿದ್ದೇನೆ. ಕಾಮಿಡಿ ಎಂದಿಗೂ ನನ್ನ ಕಂಫರ್ಟ್ ಝೋನ್ ಆಗಿರಲಿಲ್ಲ. ಆದಾಗ್ಯೂ, ನಾನು ಆಪರೇಷನ್ ಅಲಮೇಲಮ್ಮನಂತಹ ಸಿನಿಮಾದೊಂದಿಗೆ ನಟನೆ ಪ್ರಾರಂಭಿಸಿದೆ. ನನ್ನನ್ನು ನಾನು ನಿರ್ದಿಷ್ಟ ಪ್ರಕಾರಕ್ಕೆ ಸೀಮಿತಗೊಳಿಸಲು ಬಯಸುವುದಿಲ್ಲ. ಆರಂಭದಲ್ಲಿ ನನಗಾಗಿ ಕಥೆಯನ್ನು ಬರೆಯಲ್ಪಟ್ಟಿವೆಯೇ ಎಂಬುದನ್ನು ಲೆಕ್ಕಿಸದೆಯೇ ನಾನು, ವೀಕ್ಷಕರನ್ನು ರಂಜಿಸುವ ಸಾಮರ್ಥ್ಯವಿರುವ ಕಥೆಗಳಲ್ಲಿ ಹೊಂದಿಕೊಳ್ಳಲು ಬಯಸುತ್ತೇನೆ. ಈ ಪ್ರಕ್ರಿಯೆಯ ಮೂಲಕ, ನಾನು ಹಾಸ್ಯವನ್ನು ಸಹ ನಿಭಾಯಿಸಬಲ್ಲೆ ಎಂದು ಕಂಡುಕೊಂಡಿದ್ದೇನೆ ಎಂದು ಅವರು ಹೇಳುತ್ತಾರೆ.

'ಈಗ, ನಾನು ನನ್ನ ವಲಯಕ್ಕೆ ಬರುತ್ತಿದ್ದೇನೆ. ನಾನು ಇದನ್ನು ಆನಂದಿಸುತ್ತಿದ್ದೇನೆ. ನನ್ನ ಪಾತ್ರದ ಮೂಲಕ ಶಕ್ತಿ ಮತ್ತು ತೀವ್ರತೆಯನ್ನು ತಿಳಿಸಲು ಈ ಸಿನಿಮಾ ನನಗೆ ಅವಕಾಶ ನೀಡುತ್ತದೆ ಮತ್ತು ಇದು ನನಗೆ ಪ್ರಯೋಜನವಾಗಲಿದೆ. ಕಂಟೆಂಟ್ ಈಗಿನ ಕಾಲಕ್ಕೆ ಹೊಂದಿಕೆಯಾಗುತ್ತದೆ ಮತ್ತು ಹೆಚ್ಚಿನ ವಿವರಗಳನ್ನು ಜೂನ್ 2 ರಂದು ಬಹಿರಂಗಪಡಿಸಲಾಗುವುದು. ನಾವು ಶೀಘ್ರದಲ್ಲೇ ಚಿತ್ರವನ್ನು ಪ್ರಾರಂಭಿಸುತ್ತೇವೆ. ಆದರೆ, ರಾಮನ ಅವತಾರ ಬಿಡುಗಡೆಯ ನಂತರವೇ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ' ಎಂದು ಅವರು ಹೇಳುತ್ತಾರೆ.

ನಂದೀಶ್ ಅವರೊಂದಿಗೆ ಅಲ್ಲದೆ, ರಿಷಿ ಮೋಹನ್ ಸಿಂಗ್ ಅವರೊಂದಿಗೆ ಮತ್ತೊಂದು ಯೋಜನೆಯನ್ನು ಹೊಂದಿದ್ದಾರೆ. 'ನನ್ನ ತಂಡದ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ಪ್ರಕ್ರಿಯೆಯಲ್ಲಿ ಮಾತ್ರ ವಿಳಂಬವಾಗಿದೆ. ಇದೀಗ ನಾನು ಒಂದರ ನಂತರ ಮತ್ತೊಂದರಂತೆ ಸಿನಿಮಾಗಳೊಂದಿಗೆ ಕೆಲಸ ಮಾಡುತ್ತಿರುವುದು ಸಂತೋಷ ಉಂಟುಮಾಡಿದೆ' ಎಂದು ಅವರು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com