ನಿರ್ದೇಶಕನಾಗುವ ಕನಸು ಹೊತ್ತ ಯುವ ಪ್ರತಿಭೆ ಪಾತ್ರದಲ್ಲಿ ಅನೀಶ್, ಸೆನ್ಸಾರ್ ಪಾಸಾದ 'ಮಾಯಾನಗರಿ'

ನಟ ಅನೀಶ್ ನಟನೆಯ, ಇದೇ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್ ತೊಟ್ಟಿರುವ ಶಂಕರ್ ಆರಾಧ್ಯ ನಿರ್ದೇಶನದ 'ಮಾಯಾನಗರಿ' ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಚಿತ್ರದ ಬಿಡುಗಡೆಗೆ ಚಿತ್ರತಂಡ ಕುತೂಹಲದಿಂದ ಎದುರುನೋಡುತ್ತಿದೆ. ಈ ಚಿತ್ರವು ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣಪತ್ರವನ್ನು ಪಡೆದುಕೊಂಡಿದೆ.
ಮಾಯಾನಗರಿ ಚಿತ್ರದಲ್ಲಿ ನಟ ಅನೀಶ್

<strong>ಚಿತ್ರದ ಸ್ಟಿಲ್</strong>
ಚಿತ್ರದ ಸ್ಟಿಲ್

ಸಿನಿಮಾ ನಿರ್ದೇಶನದ ಕನಸನ್ನು ಹೊತ್ತು ಬರುವ ಯುವ ಪ್ರತಿಭೆಯ ಪಾತ್ರದಲ್ಲಿ ಅನೀಶ್ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಕಾಮಿಡಿ, ಲವ್, ಆ್ಯಕ್ಷನ್ ಮತ್ತು ಸೆಂಟಿಮೆಂಟ್ ಕಥಾಹಂದರವಿರುವ ಈ ಚಿತ್ರಕ್ಕೆ ಆರಾಧ್ಯ ಅವರು ನಿರ್ದೇಶನದ ಜೊತೆಗೆ ಚಿತ್ರದ ಕಥೆ ಮತ್ತು ಚಿತ್ರಕಥೆಯನ್ನು ತಾವೇ ಬರೆದಿದ್ದಾರೆ.

ಸ್ಯಾಂಡಲ್ ವುಡ್ ಪಿಕ್ಚರ್ಸ್ ಮತ್ತು ಶ್ವೇತಾ ಶಂಕರ್ ನಿರ್ಮಾಣದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆಯಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ವಿಕ್ರಮ್ ಮೋರ್ ಅವರು ಚಿತ್ರಕ್ಕೆ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ ಮತ್ತು ಶ್ರೀನಿವಾಸ್ ಅವರ ಛಾಯಾಗ್ರಹಣ ಇದೆ.

ಈ ಚಿತ್ರದಲ್ಲಿ ಅನೀಶ್ ಜೊತೆಗೆ ಶ್ರಾವ್ಯ ರಾವ್ ಮತ್ತು ತೇಜು ಜೋಡಿಯಾಗಿ ನಟಿಸಿದ್ದಾರೆ. ಇವರೊಂದಿಗೆ, ಶರತ್ ಲೋಹಿತಾಶ್ವ, ಅವಿನಾಶ್ ಮತ್ತು ಸುಚೇಂದ್ರ ಪ್ರಸಾದ್ ಮುಂತಾದ ಅನುಭವಿ ನಟರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com