ಅಭಿಷೇಕ್ ಅಂಬರೀಶ್‌ ನಟನೆಯ 'ಬ್ಯಾಡ್ ಮ್ಯಾನರ್ಸ್' ಟ್ರೇಲರ್ ಬಿಡುಗಡೆ ಮಾಡಲಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್

ನಿರ್ದೇಶಕ ಸೂರಿ ಅವರ ಮುಂಬರುವ ಚಿತ್ರ 'ಬ್ಯಾಡ್ ಮ್ಯಾನರ್ಸ್' ನವೆಂಬರ್ 24 ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ. ಚರಣ್ ರಾಜ್ ಸಂಗೀತ ಸಂಯೋಜಿಸಿರುವ ಚಿತ್ರದ ಹಾಡುಗಳಿಗೆ ಈಗಾಗಲೇ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನವೆಂಬರ್ 12 ರಂದು ಅದ್ಧೂರಿ ಸಮಾರಂಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ರೇಲರ್ ಬಿಡುಗಡೆ ಮಾಡಲಿದ್ದಾರೆ.
ದರ್ಶನ್ - ಅಭಿಷೇಕ್ ಅಂಬರೀಶ್
ದರ್ಶನ್ - ಅಭಿಷೇಕ್ ಅಂಬರೀಶ್

ನಿರ್ದೇಶಕ ಸೂರಿ ಅವರ ಮುಂಬರುವ ಚಿತ್ರ 'ಬ್ಯಾಡ್ ಮ್ಯಾನರ್ಸ್' ನವೆಂಬರ್ 24 ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ. ಚರಣ್ ರಾಜ್ ಸಂಗೀತ ಸಂಯೋಜಿಸಿರುವ ಚಿತ್ರದ ಹಾಡುಗಳಿಗೆ ಈಗಾಗಲೇ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಿಡುಗಡೆಗೂ ಮುನ್ನ ಚಿತ್ರತಂಡ ನವೆಂಬರ್‌ನಲ್ಲಿ ಚಿತ್ರದ ಟ್ರೇಲರ್ ಅನ್ನು ಬಿಡುಗಡೆ ಮಾಡಲು ತಯಾರಿ ನಡೆಸಿದೆ. ನವೆಂಬರ್ 12 ರಂದು ಅದ್ಧೂರಿ ಸಮಾರಂಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ರೇಲರ್ ಬಿಡುಗಡೆ ಮಾಡಲಿದ್ದಾರೆ.

ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಚಿತ್ರ ಈಗಾಗಲೇ ವ್ಯಾಪಕ ನಿರೀಕ್ಷೆ ಹುಟ್ಟುಹಾಕಿದೆ. ಸೂರಿ ಅವರಿಗೆ ಅಭಿಮಾನಿ ಬಳಗವಿದ್ದು, ಅಭಿಷೇಕ್ ಅಂಬರೀಶ್ ಮತ್ತು ಸೂರಿ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಮೊದಲ ಚಿತ್ರ ಇದಾಗಿದೆ. ಈ ಚಿತ್ರವು ಅಭಿಷೇಕ್ ಅವರಿಗೆ ಹೊಸ ಇಮೇಜ್ ನೀಡುವ ನಿರೀಕ್ಷೆಯಿದೆ.

ಈ ಚಿತ್ರವನ್ನು ಕೆಎಂ ಸುಧೀರ್ ಅವರ ಸ್ಟುಡಿಯೋ 18 ನಿರ್ಮಿಸಿದೆ ಮತ್ತು ಜಯಣ್ಣ ಫಿಲ್ಮ್ಸ್ ಚಿತ್ರದ ವಿತರಣೆಯ ಜವಾಬ್ದಾರಿ ಹೊತ್ತುಕೊಂಡಿದೆ. ಸೂರಿ ಜೊತೆಗೆ ಸುರೇಂದ್ರನಾಥ್ ಮತ್ತು ಅಮ್ರಿ ಅವರು ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ.

ಶೇಖರ್ ಎಸ್ ಮತ್ತು ದೀಪು ಎಸ್ ಕುಮಾರ್ ಅವರು ಕ್ರಮವಾಗಿ ಛಾಯಾಗ್ರಹಣ ಮತ್ತು ಸಂಕಲನದ ಹೊಣೆ ಹೊತ್ತಿದ್ದಾರೆ. ರವಿವರ್ಮ ಅವರು ಚಿತ್ರದ ಸಾಹಸ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚಿತ್ರದಲ್ಲಿ ರಚಿತಾ ರಾಮ್ ಮತ್ತು ಪ್ರಿಯಾಂಕಾ ಕುಮಾರ್ ನಾಯಕಿಯರಾಗಿ ನಟಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com