DeepFake Effect: ನಕಲಿ ಖಾತೆಗೂ ಬ್ಲೂಟಿಕ್..! 'ಪರೋಡಿ' ರದ್ದು ಮಾಡಿ ಎಂದ ಸಾರಾ ತೆಂಡೂಲ್ಕರ್

ಭಾರತ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ನಕಲಿ ಖಾತೆಗಳ ವಿರುದ್ದ ಸಿಡಿದೆದ್ದಿದ್ದು, ತಮ್ಮ ಹೆಸರಿನಲ್ಲಿರುವ ನಕಲಿ ಪರೋಡಿ ಖಾತೆಗಳನ್ನು ಕೂಡಲೇ ರದ್ದು ಮಾಡುವಂತೆ ಟ್ವಿಟರ್ ಮತ್ತು ಇತರೆ ಸಾಮಾಜಿಕ ಜಾಲತಾಣ ಪ್ಲಾಟ್ ಫಾರ್ಮ್ ಗಳಿಗೆ ಮನವಿ ಮಾಡಿದ್ದಾರೆ.
ಸಾರಾ ತೆಂಡೂಲ್ಕರ್
ಸಾರಾ ತೆಂಡೂಲ್ಕರ್
Updated on

ಮುಂಬೈ: ಭಾರತ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ನಕಲಿ ಖಾತೆಗಳ ವಿರುದ್ದ ಸಿಡಿದೆದ್ದಿದ್ದು, ತಮ್ಮ ಹೆಸರಿನಲ್ಲಿರುವ ನಕಲಿ ಪರೋಡಿ ಖಾತೆಗಳನ್ನು ಕೂಡಲೇ ರದ್ದು ಮಾಡುವಂತೆ ಟ್ವಿಟರ್ ಮತ್ತು ಇತರೆ ಸಾಮಾಜಿಕ ಜಾಲತಾಣ ಪ್ಲಾಟ್ ಫಾರ್ಮ್ ಗಳಿಗೆ ಮನವಿ ಮಾಡಿದ್ದಾರೆ.

ತಮ್ಮ ಹೆಸರಿನಲ್ಲಿ ಕಾರ್ಯಾಚರಿಸುತ್ತಿರುವ ಅಣಕು (Parody) ಖಾತೆಗಳನ್ನು ಕ್ಲೋಸ್‌ ಮಾಡುವಂತೆ ಸೋಶಿಯಲ್‌ ಮೀಡಿಯಾ ಎಕ್ಸ್‌ (ಟ್ವಿಟರ್)ಗೆ ಸಾರಾ ತೆಂಡೂಲ್ಕರ್‌ (Sara Tendulkar) ಮನವಿ ಮಾಡಿದ್ದು, ಹಾಗೇ ಡೀಪ್‌ಫೇಕ್‌ (Deepfake) ಫೋಟೋಗಳ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರೆ. 

ತಮ್ಮ ಹೆಸರಿನ ಅಣಕು ಎಕ್ಸ್‌ ಖಾತೆಯ ಬಗ್ಗೆ ಅಸಮಾಧಾನಗೊಂಡಿರುವ ಸಾರಾ ತೆಂಡೂಲ್ಕರ್ ಇನ್‌ಸ್ಟಾಗ್ರಾಂ ನಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, 'ಸೋಶಿಯಲ್‌ ಮೀಡಿಯಾ ನಮಗೆಲ್ಲರಿಗೂ ನಮ್ಮ ಸಂತಸ, ದುಃಖ ಹಾಗೂ ದಿನಚರಿಯನ್ನು ಹಂಚಿಕೊಳ್ಳಲು ಅದ್ಭುತ ಜಾಗ ಎಂಬುದರಲ್ಲಿ ಎರಡು ಮಾತಿಲ್ಲ. ಆದರೂ, ತಂತ್ರಜ್ಞಾನದ ದುರ್ಬಳಕೆಯು ವಿಷಾದಗೊಳಿಸುವಂಥದು. ಯಾಕೆಂದರೆ ಇದು ಇಂಟರ್‌ನೆಟ್‌ನ ವಿಶ್ವಾಸಾರ್ಹತೆ ಹಾಗು ಅಧಿಕೃತತೆಯನ್ನು ಕಿತ್ತುಕೊಳ್ಳುತ್ತದೆ. ನನ್ನ ಕೆಲವು ಡೀಪ್‌ಫೇಕ್‌ ಫೋಟೋಗಳು ಕಂಡುಬಂದಿವೆ. ಅವೆಲ್ಲವೂ ಸತ್ಯಕ್ಕೆ ದೂರವಾದುದು. @SaraTendulkar_ ಎಂಬ Xನ (ಮೊದಲಿನ ಟ್ವಿಟರ್‌) ಖಾತೆಯು ಪರೋಡಿ ಖಾತೆ, ಹಾಗೆಂದು ಅದು ಹೇಳಿಕೊಂಡಿದ್ದರೂ ನನ್ನ ಸೋಗಿನಲ್ಲಿ ಜನತೆಯನ್ನು ದಾರಿ ತಪ್ಪಿಸುವ ಉದ್ದೇಶವನ್ನು ಹೊಂದಿದೆ. ಟ್ವಿಟರ್ ನಲ್ಲಿ ನನ್ನ ಖಾತೆಯಿಲ್ಲ. ಟ್ವಿಟರ್ ಕೂಡ ಇಂಥ ಅಕೌಂಟ್‌ಗಳ ಬಗ್ಗೆ ಗಮನ ಹರಿಸಿ ಅವುಗಳನ್ನು ವಜಾ ಮಾಡಬೇಕು. ಮನರಂಜನೆ ಎಂಬುದು ಸತ್ಯವನ್ನು ಬಲಿಗೊಟ್ಟು ಬರಬಾರದು. ಸತ್ಯ ಮತ್ತು ವಾಸ್ತವದ ನೆಲೆಯಲ್ಲಿ ನಿಂತಿರುವ ಸಂವಹನವನ್ನು ಬೆಳೆಸೋಣ ಎಂದು ಬರೆದುಕೊಂಡಿದ್ದಾರೆ.

ಸಾರಾ ಆಕ್ರೋಶಕ್ಕೆ ಕಾರಣವಾದ ಡೀಪ್ ಫೇಕ್ ಫೋಟೋ
ಇತ್ತೀಚೆಗೆ ಸಾರಾ ತೆಂಡುಲ್ಕರ್‌ ಅವರ ಹೆಸರು ಕ್ರಿಕೆಟರ್‌ ಶುಭಮನ್‌ ಗಿಲ್‌ (Shubhman Gill) ಜತೆಯಲ್ಲಿ ಮತ್ತೆ ಮತ್ತೆ ಕೇಳಿಬಂದಿತ್ತು. ಅವರು ಗಿಲ್‌ ಜೊತೆಗಿರುವಂತೆ ತಿರುಚಲಾದ ಫೋಟೋ ಕೂಡ ವೈರಲ್‌ ಆಗಿತ್ತು. ಸ್ವತಃ ಸಾರಾ ಅವರು ಇನ್‌ಸ್ಟಾಗ್ರಾಂನಲ್ಲಿ ಖಾತೆ ಹೊಂದಿದ್ದು, ಅಲ್ಲಿ ತಮ್ಮ ಲೇಟೆಸ್ಟ್‌ ಫೋಟೋಗಳನ್ನು ಅಪ್ಲೋಡ್‌ ಮಾಡುತ್ತಿರುತ್ತಾರೆ. ಆದರೆ ಗಿಲ್‌ ಜತೆಗೆ ತಮ್ಮ ಲಿಂಕ್‌ ಹೊಂದಿರುವ ಯಾವುದೇ ಫೋಟೋ ಅಥವಾ ಪೋಸ್ಟ್‌ ಅಪ್ಲೋಡ್‌ ಮಾಡಿಲ್ಲ.

ಡೀಪ್ ಫೇಕ್ ಫೋಟೋದ ಅಸಲೀಯತ್ತು
ಇತ್ತೀಚೆಗೆ ಸಾರಾ ತೆಂಡೂಲ್ಕರ್ ಅವರ ಡೀಪ್‌ಫೇಕ್‌ ರಚಿತ ಫೋಟೋ ಕೂಡ ವೈರಲ್‌ ಆಗಿತ್ತು. ಅದರಲ್ಲಿ ಸಾರಾ, ಅವರ ಪ್ರಿಯಕರ ಎಂದು ಹೇಳಲಾದ ಶುಭ್‌ಮನ್ ಗಿಲ್ ಅವರನ್ನು ತಬ್ಬಿಕೊಳ್ಳುತ್ತಿರುವಂತೆ ಕಾಣಿಸಲಾಗಿತ್ತು. ಸಾರಾ ಅವರ ಸಹೋದರ ಅರ್ಜುನ್ ತೆಂಡೂಲ್ಕರ್ ಅವರೊಂದಿಗೆ ಕಾಣಿಸಿಕೊಂಡಿದ್ದ ಮೂಲ ಫೊಟೋ ಅದಾಗಿದ್ದು, ಎಐ ಮೂಲಕ ತಿರುಚಲಾಗಿತ್ತು. ರಶ್ಮಿಕಾ ಮಂದಣ್ಣ, ಕಾಜೋಲ್‌ ಅವರ ಬಳಿಕ ಸಾರಾ ತೆಂಡುಲ್ಕರ್‌ ಕೂಡ ಡೀಪ್‌ಫೇಕ್‌ ಸಂತ್ರಸ್ತೆಯಾಗಿದ್ದಾರೆ. 

ಸಾರಾ ಹೆಸರಿನಲ್ಲಿರುವ ನಕಲಿ ಖಾತೆಗೂ ಬ್ಲೂಟಿಕ್ ಕೊಟ್ಟ ಟ್ವಿಟರ್
ಇನ್ನು ಸಾರಾ ತೆಂಡೂಲ್ಕರ್ ಹೆಸರಿನಲ್ಲಿ ಸುಮಾರು 30ಕ್ಕೂ ಅಧಿಕ ಖಾತೆಗಳು ಸೃಷ್ಟಿಯಾಗಿದ್ದು, ಆಘಾತಕಾರಿ ವಿಚಾರವೆಂದರೆ ಈ ಪೈಕಿ 2 ಖಾತೆಗಳಿಗೆ ಟ್ವಿಟರ್ ಸಂಸ್ಥೆ ಬ್ಲೂಟಿಕ್ ನೀಡಿದೆ. @saratendulkar78 ಮತ್ತು @saratendulkar33 ಎಂಬ ಪರೋಡಿ ಖಾತೆಗಳಿಗೆ ಬ್ಲೂಟಿಕ್ ನೀಡಲಾಗಿದ್ದು, ಇವು ಸಾರಾ ತೆಂಡೂಲ್ಕರ್ ಅವರ ನಿಜವಾದ ಖಾತೆ ಎಂಬಂತೆ ಭಾಸವಾಗುತ್ತದೆ. ಹೀಗಾಗಿ ಇಲ್ಲಿ ಪೋಸ್ಟ್ ಆಗುವ ಪ್ರತೀ ಟ್ವೀಟ್ ಗಳು ಸಾರಾ ತೆಂಡೂಲ್ಕರ್ ಅವರದ್ದೇ ಎಂದು ಜನರನ್ನು ದಾರಿ ತಪ್ಪಿಸುತ್ತವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com