'ಅರ್ಧಂಬರ್ದ ಪ್ರೇಮಕಥೆ'ಯಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 7ರ ಜೋಡಿ ಹಕ್ಕಿ; ಚಿತ್ರದ ಮೊದಲ ಹಾಡು ರಿಲೀಸ್!

ಬಿಗ್ ಬಾಸ್ ಕನ್ನಡ ಸೀಸನ್ 7ರ ಮಾಜಿ ಸ್ಪರ್ಧಿಗಳಾದ ದಿವ್ಯಾ ಉರುಡುಗ ಮತ್ತು ಬೈಕ್ ರೇಸರ್ ಅರವಿಂದ್ ಕೆಪಿ ಒಟ್ಟಿಗೆ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಹುಲಿರಾಯ ಚಿತ್ರದ ನಿರ್ದೇಶಕ ಅರವಿಂದ್ ಕೌಶಿಕ್ ಅವರ ಮುಂಬರುವ ಚಿತ್ರ 'ಅರ್ಧಂಬರ್ದ ಪ್ರೇಮಕಥೆ'ಯಲ್ಲಿ ಇಬ್ಬರು ನಟಿಸುತ್ತಿದ್ದಾರೆ.
ದಿವ್ಯಾ ಉರುಡುಗ - ಅರವಿಂದ ಕೆಪಿ
ದಿವ್ಯಾ ಉರುಡುಗ - ಅರವಿಂದ ಕೆಪಿ
Updated on

ಬಿಗ್ ಬಾಸ್ ಕನ್ನಡ ಸೀಸನ್ 7ರ ಮಾಜಿ ಸ್ಪರ್ಧಿಗಳಾದ ದಿವ್ಯಾ ಉರುಡುಗ ಮತ್ತು ಬೈಕ್ ರೇಸರ್ ಅರವಿಂದ್ ಕೆಪಿ ಒಟ್ಟಿಗೆ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಹುಲಿರಾಯ ಚಿತ್ರದ ನಿರ್ದೇಶಕ ಅರವಿಂದ್ ಕೌಶಿಕ್ ಅವರ ಮುಂಬರುವ ಚಿತ್ರ 'ಅರ್ಧಂಬರ್ದ ಪ್ರೇಮಕಥೆ'ಯಲ್ಲಿ ಇಬ್ಬರು ನಟಿಸುತ್ತಿದ್ದಾರೆ.

ನವೆಂಬರ್‌ನಲ್ಲಿ ಚಿತ್ರ ಬಿಡುಗಡೆಯಾಗಲಿದೆ. ನಿರ್ದೇಶಕ ಅರವಿಂದ್ ಅವರ ಸಾಹಿತ್ಯವಿರುವ 'ಹುಚ್ಚು ಮನಸಿನ ಹುಡುಗಿ' ಎಂಬ ಮೊದಲ ಲಿರಿಕಲ್ ವಿಡಿಯೋವನ್ನು ಚಿತ್ರತಂಡ ಇತ್ತೀಚೆಗೆ ಬಿಡುಗಡೆ ಮಾಡಿದೆ. ಈ ಹಾಡನ್ನು ವಾಸುಕಿ ವೈಭವ್ ಮತ್ತು ಪೃಥ್ವಿ ಭಟ್ ಹಾಡಿದ್ದು, ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ ಇದೆ. 

ಹಾಡಿನ ಬಿಡುಗಡೆಯ ಸಂದರ್ಭದಲ್ಲಿ, ಬೈಕ್ ರೇಸರ್ ಅರವಿಂದ್ ಕೆಪಿ ಅವರು ಅರ್ಧಂಬರ್ದ ಪ್ರೇಮಕಥೆಯಲ್ಲಿ ತೆರೆಯ ಮೇಲೆ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ನಿರ್ದೇಶಕರು ಬಹಿರಂಗಪಡಿಸಿದರು.

‘ಅರವಿಂದ್ ಕೆಪಿ ತಮ್ಮ ಪಾತ್ರದಲ್ಲಿ ಮಿಂಚಿದ್ದಾರೆ’

'ದಿವ್ಯಾ ಉರುಡುಗ ಅವರೊಂದಿಗೆ ಕಥೆಯನ್ನು ಚರ್ಚಿಸುವ ಸಮಯದಲ್ಲಿ ನಾನು ಅರವಿಂದ್ ಅವರನ್ನು ಗಮನಿಸಿದೆ. ಅರವಿಂದ್ ಅವರು ಆಕರ್ಷಕವಾಗಿದ್ದರಿಂದ ಅವರು ನನ್ನ ಚಿತ್ರದಲ್ಲಿ ನಟಿಸಲು ನಾನು ನಿರ್ಧರಿಸಿದೆ. ಅರವಿಂದ್ ಅವರು ನಟನೆಯ ಅನುಭವದ ಕೊರತೆಯನ್ನು ಆರಂಭದಲ್ಲಿ ವ್ಯಕ್ತಪಡಿಸಿದಾಗ, ನಾನು ಅವರಿಗೆ ಆತ್ಮವಿಶ್ವಾಸ ನೀಡಿದ್ದೇನೆ. ಅವರು ಖಂಡಿತವಾಗಿಯೂ ಅವರ ಪಾತ್ರದಲ್ಲಿ ಮಿಂಚಿದ್ದಾರೆ’ ಎನ್ನುತ್ತಾರೆ ನಿರ್ದೇಶಕರು.

<strong>ಅರವಿಂದ್ ಕೆಪಿ - ದಿವ್ಯಾ ಉರುಡುಗ</strong>
ಅರವಿಂದ್ ಕೆಪಿ - ದಿವ್ಯಾ ಉರುಡುಗ

ಪ್ರೀತಿಯಿಂದ ಸಂಬಂಧವೊಂದಕ್ಕೆ ಪರಿವರ್ತನೆಯಾಗುವ ಯುವ ಜೋಡಿಗಳು ಎದುರಿಸುವ ಸವಾಲುಗಳನ್ನು ಅನ್ವೇಷಿಸುವ ಚಿತ್ರವು ನಾಲ್ಕು ಹಾಡುಗಳನ್ನು ಒಳಗೊಂಡಿದೆ. 

ಅರವಿಂದ್ ಅವರು ಚಿತ್ರದ ಬಗ್ಗೆ ಮಾತನಾಡುತ್ತಾ, ನಟನೆ ಒಂದು ಬೇಡಿಕೆಯ ಕೆಲಸವಾಗಿದೆ ಎಂದ ಅವರು, ನಿರ್ದೇಶಕ ಅರವಿಂದ್ ಮತ್ತು ದಿವ್ಯಾ ಹೇಗೆ ತಮ್ಮನ್ನು ಬೆಂಬಲಿಸಿದರು ಮತ್ತು ಸಿನಿಮಾದ ಸವಾಲುಗಳನ್ನು ಜಯಿಸಲು ನೆರವಾದರು ಎಂಬುದನ್ನು ನೆನೆಸಿಕೊಂಡರು. 

Buxus Media, RAC Visuals ಮತ್ತು Lighthouse Media ನಿರ್ಮಿಸಿರುವ ಅರ್ಧಂಬರ್ಧ ಪ್ರೇಮಕಥೆಯನ್ನು ಮಂಜುನಾಥ ಗೌಡ ಅವರ ಶಾಲಿನಿ ಆರ್ಟ್ಸ್‌ ವಿತರಿಸಲಿದೆ. 25 ವರ್ಷಗಳ ನಂತರ ನಟ ಅಭಿಲಾಷ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಇವರೊಂದಿಗೆ, ಸಂತೋಷ್ ಉಪಾಧ್ಯಾಯ, ಅಲೋಕ್ ಆರ್, ಶ್ರೇಯಾ ಬಾಬು, ವೆಂಕಟೇಶ ಶಾಸ್ತ್ರಿ, ಪ್ರದೀಪ್ ರೋಷನ್, ಸೂರಜ್ ಹೂಗಾರ್ ಮತ್ತು ಸುಜಿಶ್ ಶೆಟ್ಟಿ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಸೂರ್ಯ ಅವರ ದ ಛಾಯಾಗ್ರಹಣವಿದ್ದು, ಶಿವರಾಜ್ ಮೇಹು ಅವರ ಸಂಕಲನವಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com