ಸಿನಿಮಾ ಸುದ್ದಿ'ಅರ್ಧಂಬರ್ದ ಪ್ರೇಮಕಥೆ'ಯಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 7ರ ಜೋಡಿ ಹಕ್ಕಿ; ಚಿತ್ರದ ಮೊದಲ ಹಾಡು ರಿಲೀಸ್!
ಬಿಗ್ ಬಾಸ್ ಕನ್ನಡ ಸೀಸನ್ 7ರ ಮಾಜಿ ಸ್ಪರ್ಧಿಗಳಾದ ದಿವ್ಯಾ ಉರುಡುಗ ಮತ್ತು ಬೈಕ್ ರೇಸರ್ ಅರವಿಂದ್ ಕೆಪಿ ಒಟ್ಟಿಗೆ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಹುಲಿರಾಯ ಚಿತ್ರದ ನಿರ್ದೇಶಕ ಅರವಿಂದ್ ಕೌಶಿಕ್ ಅವರ ಮುಂಬರುವ ಚಿತ್ರ 'ಅರ್ಧಂಬರ್ದ ಪ್ರೇಮಕಥೆ'ಯಲ್ಲಿ ಇಬ್ಬರು ನಟಿಸುತ್ತಿದ್ದಾರೆ.