ನಟನೆಯನ್ನು ಗಂಭೀರ ಮತ್ತು ವೃತ್ತಿಯಾಗಿ ಪರಿಗಣಿಸಲು ನಿರ್ಧರಿಸಿದ್ದೇನೆ: 'ಫೈಟರ್' ನಾಯಕಿ ಲೇಖಾ ಚಂದ್ರ

'ನಾನು ನಟನೆಯನ್ನು ಗಂಭೀರವಾಗಿ ಮತ್ತು ವೃತ್ತಿಯಾಗಿ ತೆಗೆದುಕೊಳ್ಳಲು ನಿರ್ಧರಿಸಿದ್ದೇನೆ' ಎಂದು ಲೇಖಾ ಚಂದ್ರ ಹೇಳುತ್ತಾರೆ. ಕೊನೆಯದಾಗಿ ನಮೋ ಭೂತಾತ್ಮ 2 ನಲ್ಲಿ ಕಾಣಿಸಿಕೊಂಡಿದ್ದ ನಟಿ ಇದೀಗ ವಿನೋದ್ ಪ್ರಭಾಕರ್ ಅಭಿನಯದ ಮುಂಬರುವ ಚಿತ್ರ ಫೈಟರ್ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. 
ಲೇಖಾ ಚಂದ್ರ
ಲೇಖಾ ಚಂದ್ರ

'ಸಿನಿಮಾ ಜಗತ್ತಿನಲ್ಲಿ ನನ್ನನ್ನು ನೋಡಬೇಕು ಎಂಬುದು ನನ್ನ ಸಹೋದರಿಯ ಬಯಕೆಯಾಗಿತ್ತು. ನಾನು ನಟನೆಗೆ ಬರಲು ಆಕೆಯ ಪ್ರೋತ್ಸಾಹವೇ ಕಾರಣ. ಆದರೆ, ಕೆಲವು ಚಿತ್ರಗಳ ನಂತರ, ನಾನು ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದ್ದೇನೆ ಮತ್ತು ಇದೇ ಕ್ಷೇತ್ರದಲ್ಲಿ ಮುಂದುವರಿಯಬೇಕೋ ಬೇಡವೋ ಎನ್ನುವ ಭಾವನೆಗಳ ತೊಳಲಾಟದಲ್ಲಿದ್ದೇನೆ. ವಿರಾಮದ ಸಮಯದಲ್ಲಿ, ನಾನು ಕ್ಯಾಮೆರಾದ ಮುಂದೆ ನಿಲ್ಲುವುದನ್ನು ಎಷ್ಟು ಮಿಸ್ ಮಾಡಿಕೊಂಡೆ ಎಂಬುದನ್ನು ನಾನು ಅರಿತುಕೊಂಡೆ. ಈಗ ನಾನು ಹಿಂತಿರುಗಿದ್ದೇನೆ. ನಾನು ನಟನೆಯನ್ನು ಗಂಭೀರವಾಗಿ ಮತ್ತು ವೃತ್ತಿಯಾಗಿ ತೆಗೆದುಕೊಳ್ಳಲು ನಿರ್ಧರಿಸಿದ್ದೇನೆ' ಎಂದು ಲೇಖಾ ಚಂದ್ರ ಹೇಳುತ್ತಾರೆ.

ಕೊನೆಯದಾಗಿ ನಮೋ ಭೂತಾತ್ಮ 2 ನಲ್ಲಿ ಕಾಣಿಸಿಕೊಂಡಿದ್ದ ನಟಿ ಇದೀಗ ವಿನೋದ್ ಪ್ರಭಾಕರ್ ಅಭಿನಯದ ಮುಂಬರುವ ಚಿತ್ರ ಫೈಟರ್ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಈ ಚಿತ್ರವು ಅಕ್ಟೋಬರ್ 6ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ನೂತನ್ ಉಮೇಶ್ ನಿರ್ದೇಶನದ ಮತ್ತು ಪಾವನ ಗೌಡ ಕೂಡ ನಟಿಸಿರುವ ಚಿತ್ರದ ಟ್ರೈಲರ್ ಸೆಪ್ಟೆಂಬರ್ 31 ರಂದು ಬಿಡುಗಡೆಯಾಗಲಿದೆ.

ವಿನೋದ್ ಪ್ರಭಾಕರ್ ಮುಖ್ಯ ಭೂಮಿಕೆಯಲ್ಲಿರುವ ಫೈಟರ್ ಆಕ್ಷನ್ ಎಂಟರ್‌ಟೈನರ್ ಆಗಿದೆ. ಈ ಚಿತ್ರದಲ್ಲಿ ತಮ್ಮ ಪಾತ್ರದ ಪ್ರಾಮುಖ್ಯತೆ ಬಗ್ಗೆ ಕೇಳಿದಾಗ ಉತ್ತರಿಸುವ ಲೇಖಾ, 'ಹೌದು, ಫೈಟರ್ ಇದು ನಾಯಕನನ್ನೇ ಕೇಂದ್ರೀಕರಿಸಿದ ಚಿತ್ರವಾಗಿದ್ದು, ನಾಯಕಿಗೆ ಸ್ವಲ್ಪವೇ ತೆರೆಹಂಚಿಕೊಳ್ಳುವ ಅವಕಾಶವಿರುತ್ತದೆ. ಆದರೆ, ಈ ಚಿತ್ರದಲ್ಲಿ ನಾಯಕ ಒಂದು ಕಾರಣಕ್ಕಾಗಿ ಹೋರಾಡುತ್ತಾನೆ ಮತ್ತು ಕಥಾವಸ್ತುವು ನಮ್ಮ ಸುತ್ತ ಸುತ್ತುತ್ತದೆ. ನಾಯಕಿಯಾಗಿ ನಾನು ಕಥೆಗೆ ಟ್ವಿಸ್ಟ್ ಅನ್ನು ತರುತ್ತೇನೆ. ಚಿತ್ರದಲ್ಲಿನ ಹೆಚ್ಚಿನ ಸಂಭಾಷಣೆಗಳು ನನ್ನವಾಗಿವೆ. ನಾನು ಪೇಂಟರ್ ಪಾತ್ರವನ್ನು ನಿರ್ವಹಿಸುತ್ತೇನೆ. ಅದು ನನ್ನ ಪಾತ್ರವನ್ನು ತೆರೆಯ ಮೇಲೆ ರೋಮಾಂಚನಗೊಳಿಸುತ್ತದೆ. ಒಟ್ಟಾರೆಯಾಗಿ, ಪಾತ್ರವು ಭರವಸೆಯ ಮತ್ತು ವರ್ಣರಂಜಿತವಾಗಿ ಕಾಣುತ್ತದೆ' ಎನ್ನುತ್ತಾರೆ.

'ಕೇವಲ ಕಮರ್ಷಿಯಲ್ ಸಿನಿಮಾಗೆ ನಾಯಕಿಯಾಗಿರುವುದಕ್ಕಿಂತ ಕಲಾವಿದೆಯಾಗಿ ಗುರುತಿಸಿಕೊಳ್ಳುವ ಸಮಯ ಬಂದಿದೆ. 'ಇಂದು, ಕಂಟೆಂಟ್ ಪ್ರೇಕ್ಷಕರ ಗಮನ ಸೆಳೆಯುತ್ತಿದೆ ಮತ್ತು ಅಂತದ್ದನ್ನು ಪ್ರತಿಧ್ವನಿಸುವ ಪಾತ್ರಗಳಲ್ಲಿ ಕೆಲಸ ಮಾಡುವ ಗುರಿಯನ್ನು ನಾನು ಹೊಂದಿದ್ದೇನೆ' ಎನ್ನುತ್ತಾರೆ ಲೇಖಾ.

ಫೈಟರ್ ಜೊತೆಗೆ, 'ವೀರ ಪುತ್ರ' ಸಿನಿಮಾ ಬಗ್ಗೆಯೂ ಉತ್ಸುಕರಾಗಿರುವ ಲೇಖಾ, ಅಲ್ಲಿ ಅವರು ವಿಜಯ್ ಸೂರ್ಯ ಅವರಿಗೆ ಜೋಡಿಯಾಗಿದ್ದಾರೆ. 'ನನ್ನ ಬಳಿ ಇನ್ನೊಂದು ಯೋಜನೆ ಕೂಡ ಇದೆ ಮತ್ತು ಈ ಬಗ್ಗೆ ಪ್ರೊಡಕ್ಷನ್ ಕಡೆಯಿಂದ ಅಧಿಕೃತ ಪ್ರಕಟಣೆಗಾಗಿ ಕುತೂಹಲದಿಂದ ಕಾಯುತ್ತಿದ್ದೇನೆ' ಎಂದು ಅವರು ಹೇಳುತ್ತಾರೆ.

ಸೋಮಶೇಖರ್ ಕಟ್ಟಿಗೇನಹಳ್ಳಿ ಅವರ ಆಕಾಶ್ ಎಂಟರ್‌ಪ್ರೈಸಸ್ ಫೈಟರ್ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಗುರು ಕಿರಣ್ ಸಂಗೀತ ಸಂಯೋಜಿಸಿದ್ದಾರೆ. ಇನ್ನುಳಿದಂತೆ ಚಿತ್ರದಲ್ಲಿ ನಿರೋಷಾ, ಕುರಿ ಪ್ರತಾಪ್ ಮತ್ತು ಶರತ್ ಲೋಹಿತಾಶ್ವ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com