ನಾನಿ-ಕೀರ್ತಿ ಸುರೇಶ್ ಅಭಿನಯದ ದಸರಾ ಒಟಿಟಿ ಬಿಡುಗಡೆಗೆ ದಿನಾಂಕ ಫಿಕ್ಸ್, ಕನ್ನಡದಲ್ಲೂ ಲಭ್ಯ!
ತೆಲುಗು ಸ್ಟಾರ್ ನಾನಿ ಅವರ ಪ್ಯಾನ್ ಇಂಡಿಯಾ ಸಿನಿಮಾ 'ದಸರಾ' ಏಪ್ರಿಲ್ 27 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಸ್ಟ್ರೀಮಿಂಗ್ ಸೇವೆಯ ಕುರಿತು ತನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ವಿವರಗಳನ್ನು ಹಂಚಿಕೊಂಡಿದೆ.
Published: 20th April 2023 11:54 AM | Last Updated: 20th April 2023 04:48 PM | A+A A-

ದೀಕ್ಷಿತ್ ಶೆಟ್ಟಿ-ಕೀರ್ತಿ ಸುರೇಶ್-ನಾನಿ
ಮುಂಬೈ: ತೆಲುಗು ಸ್ಟಾರ್ ನಾನಿ ಅವರ ಪ್ಯಾನ್ ಇಂಡಿಯಾ ಸಿನಿಮಾ 'ದಸರಾ' ಏಪ್ರಿಲ್ 27 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ.
ಸ್ಟ್ರೀಮಿಂಗ್ ಸೇವೆಯ ಕುರಿತು ತನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ವಿವರಗಳನ್ನು ಹಂಚಿಕೊಂಡಿದೆ.
'ಈ ವರ್ಷ ದಸರಾ ಬೇಗ ಬರಲಿರುವುದರಿಂದ ಪಟಾಕಿಗಳನ್ನು ಹೊರತರುವ ಸಮಯ! ಏಪ್ರಿಲ್ 27 ರಂದು 'ದಸರಾ' ನೆಟ್‌ಫ್ಲಿಕ್ಸ್‌ಗೆ ಬರಲಿದೆ' ಎಂದು ನೆಟ್‌ಫ್ಲಿಕ್ಸ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದೆ.
ಇದೇ ಮೊದಲ ಬಾರಿಗೆ ಸಿನಿಮಾ ನಿರ್ದೇಶಿಸಿರುವ ಶ್ರೀಕಾಂತ್ ಒಡೆಲಾ ಅವರ 'ದಸರಾ' ಸಿನಿಮಾವು ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯ ಸಿಂಗರೇಣಿ ಕಲ್ಲಿದ್ದಲು ಗಣಿಯ ಬಳಿಯಲ್ಲಿರುವ ಹಳ್ಳಿಯಲ್ಲಿ ನಡೆಯುವ ಕಥೆಯನ್ನು ಒಳಗೊಂಡಿದೆ.
ಇದನ್ನೂ ಓದಿ: 'ದಸರಾ' ಸಿನಿಮಾ ಚಿತ್ರತಂಡದ 130 ಜನರಿಗೆ ಚಿನ್ನದ ನಾಣ್ಯ ಕೊಟ್ಟ ನಟಿ ಕೀರ್ತಿ ಸುರೇಶ್!
ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಮಾರ್ಚ್ 30 ರಂದು ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಬಾಷೆಯಲ್ಲಿ ದೇಶದಾದ್ಯಂತ ಬಿಡುಗಡೆಯಾಗಿದೆ. ಇದು ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ 100 ಕೋಟಿ ರೂ. ಗಳಿಕೆ ಕಂಡಿದೆ.
ಇದನ್ನೂ ಓದಿ: ನಾನಿ ಅಭಿನಯದ 'ದಸರಾ' ಟೀಸರ್ ಬಿಡುಗಡೆ, ಕನ್ನಡ ಸೇರಿದಂತೆ ಬಹು ಭಾಷೆಗಳಲ್ಲಿ ತೆರೆಗೆ
'ದಸರಾ'ದಲ್ಲಿ ನಟಿ ಕೀರ್ತಿ ಸುರೇಶ್, ಕನ್ನಡದ ದೀಕ್ಷಿತ್ ಶೆಟ್ಟಿ, ಶೈನ್ ಟಾಮ್ ಚಿಕ್ಕೋ, ಸಮುದ್ರಕನಿ, ಸಾಯಿ ಕುಮಾರ್ ಮತ್ತು ಪೂರ್ಣಾ ಕೂಡ ನಟಿಸಿದ್ದಾರೆ.