ರಜನಿಕಾಂತ್ ಅಭಿನಯದ 'ಜೈಲರ್'ಗೆ ಜಾಕಿ ಶ್ರಾಫ್ ಎಂಟ್ರಿ
ಬಾಲಿವುಡ್ ಸ್ಟಾರ್ ಜಾಕಿ ಶ್ರಾಫ್ ಅವರು ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರ ಬಹು ನಿರೀಕ್ಷಿತ ಚಿತ್ರ 'ಜೈಲರ್'ನಲ್ಲಿ ಅಭಿನಯಿಸಲಿದ್ದಾರೆ ಎಂದು ಚಿತ್ರ ತಯಾರಕರು ಭಾನುವಾರ ಘೋಷಿಸಿದ್ದಾರೆ.
Published: 05th February 2023 08:30 PM | Last Updated: 05th February 2023 08:30 PM | A+A A-

ಜಾಕಿ ಶ್ರಾಫ್
ಚೆನ್ನೈ: ಬಾಲಿವುಡ್ ಸ್ಟಾರ್ ಜಾಕಿ ಶ್ರಾಫ್ ಅವರು ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರ ಬಹು ನಿರೀಕ್ಷಿತ ಚಿತ್ರ 'ಜೈಲರ್'ನಲ್ಲಿ ಅಭಿನಯಿಸಲಿದ್ದಾರೆ ಎಂದು ಚಿತ್ರ ತಯಾರಕರು ಭಾನುವಾರ ಘೋಷಿಸಿದ್ದಾರೆ.
ಮುಂಬರುವ ತಮಿಳು 'ಜೈಲರ್' ಚಲನಚಿತ್ರವನ್ನು ನೆಲ್ಸನ್ ದಿಲೀಪ್‌ಕುಮಾರ್ ಅವರು ನಿರ್ದೇಶಿಸಿದ್ದಾರೆ ಮತ್ತು ಸನ್ ಪಿಕ್ಚರ್ಸ್ ನಿರ್ಮಿಸಿದೆ.
ಸನ್ ಟಿವಿ ನೆಟ್‌ವರ್ಕ್ ಲಿಮಿಟೆಡ್‌ನ ಒಂದು ವಿಭಾಗವಾದ ಪ್ರೊಡಕ್ಷನ್ ಬ್ಯಾನರ್ ತನ್ನ ಅಧಿಕೃತ ಟ್ವಿಟ್ಟರ್ ಜಾಕಿ ಶ್ರಾಫ್ ಅವರು 'ಜೈಲರ್' ಚಿತ್ರದಲ್ಲಿ ಅಭಿನಯಿಸುತ್ತಿರುವ ವಿಚಾರವನ್ನು ಹಂಚಿಕೊಂಡಿದೆ.
ಇದನ್ನು ಓದಿ: ಒಪ್ಪಿಗೆಯಿಲ್ಲದೆ ಹೆಸರು, ಪೋಟೊ, ಧ್ವನಿ ಬಳಕೆ; ಕಾನೂನು ಕ್ರಮದ ಎಚ್ಚರಿಕೆ ನೀಡಿದ ನಟ ರಜನಿಕಾಂತ್
ಜಾಕಿ ಶ್ರಾಫ್ ಅವರು ಈ ಹಿಂದೆ 2014ರಲ್ಲಿ ತೆರೆಕಂಡ ರಜನಿಕಾಂತ್ ಅವರ ಅನಿಮೇಟೆಡ್ ಆಕ್ಷನ್ ಚಿತ್ರ ಕೊಚ್ಚಡೈಯಾನ್ ನಲ್ಲೂ ಅಭಿನಯಿಸಿದ್ದರು.
ಜೈಲರ್‌ನಲ್ಲಿ ತಮನ್ನಾ ಭಾಟಿಯಾ, ಸುನಿಲ್, ಡಾ ಶಿವ ರಾಜ್‌ಕುಮಾರ್, ರಮ್ಯಾ ಕೃಷ್ಣನ್, ಯೋಗಿ ಬಾಬು, ವಸಂತ ರವಿ ಮತ್ತು ವಿನಾಯಕನ್ ಅವರು ಸಹ ಅಭಿನಯಿಸಿದ್ದಾರೆ.