ಏಪ್ರಿಲ್ 5ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ ಜೂನಿಯರ್ ಎನ್‌ಟಿಆರ್ ಅವರ ಮುಂದಿನ ಚಿತ್ರ

ಆರ್‌ಆರ್‌ಆರ್ ಖ್ಯಾತಿಯ ಸ್ಟಾರ್ ನಟ ಜೂನಿಯರ್ ಎನ್‌ಟಿಆರ್ ಮುಂದಿನ ತಿಂಗಳು ತಮ್ಮ 30ನೇ ಸಿನಿಮಾದ ಚಿತ್ರೀಕರಣವನ್ನು ಪ್ರಾರಂಭಿಸಲಿದ್ದಾರೆ ಎಂದು ಚಿತ್ರತಂಡ ಭಾನುವಾರ ಘೋಷಿಸಿದೆ.
ಜ್ಯೂ. ಎನ್ ಟಿ ಆರ್
ಜ್ಯೂ. ಎನ್ ಟಿ ಆರ್

ಹೈದರಾಬಾದ್: ಆರ್‌ಆರ್‌ಆರ್ ಖ್ಯಾತಿಯ ಸ್ಟಾರ್ ನಟ ಜೂನಿಯರ್ ಎನ್‌ಟಿಆರ್ ಮುಂದಿನ ತಿಂಗಳು ತಮ್ಮ 30ನೇ ಸಿನಿಮಾದ ಚಿತ್ರೀಕರಣವನ್ನು ಪ್ರಾರಂಭಿಸಲಿದ್ದಾರೆ ಎಂದು ಚಿತ್ರತಂಡ ಭಾನುವಾರ ಘೋಷಿಸಿದೆ.

ಖ್ಯಾತ ತೆಲುಗು ನಟ ಎನ್‌ಟಿಆರ್‌ ಅವರು ತಮ್ಮ 'ಜನತಾ ಗ್ಯಾರೇಜ್' ಸಿನಿಮಾ ನಿರ್ದೇಶಕ ಕೊರಟಾಲ ಶಿವ ಅವರೊಂದಿಗೆ ಮತ್ತೆ ಈ ಸಿನಿಮಾದ ಮೂಲಕ ಒಂದಾಗಲಿದ್ದಾರೆ.

ಈ ಸಿನಿಮಾವನ್ನು ಏಪ್ರಿಲ್ 5ರಂದು ವಿಶ್ವದಾದ್ಯಂತ ಬಿಡುಗಡೆ ಮಾಡುವ ನಿರೀಕ್ಷೆಯಲ್ಲಿ ಚಿತ್ರತಂಡವಿದೆ. ಈ ಚಿತ್ರದ ಬ್ಯಾನರ್‌ಗಳಲ್ಲಿ ಒಂದಾದ ಎನ್‌ಟಿಆರ್ ಆರ್ಟ್ಸ್ ತನ್ನ ಅಧಿಕೃತ ಟ್ವಿಟರ್ ಪುಟದಲ್ಲಿ ಪ್ರಕಟಣೆಯನ್ನು ಹಂಚಿಕೊಂಡಿದೆ.

'ಮನುಷ್ಯನ ಕೋಪವು ಧೈರ್ಯ ಎಂಬ ಕಾಯಿಲೆಗೆ ಪರಿಹಾರವಾಗಿದೆ. NTR30 ಸಿನಿಮಾವು ಏಪ್ರಿಲ್ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಮುಂದಿನ ತಿಂಗಳು ಚಿತ್ರೀಕರಣ ಪ್ರಾರಂಭವಾಗುತ್ತದೆ. ಹೊಸ ವರ್ಷದ ಶುಭಾಶಯಗಳು' ಎಂದು ಪ್ರೊಡಕ್ಷನ್ ಹೌಸ್ ಟ್ವೀಟ್‌ನಲ್ಲಿ ತಿಳಿಸಿದೆ.

ಸದ್ಯ ಹೆಸರಿಡದ ಚಿತ್ರವನ್ನು ಎನ್‌ಟಿಆರ್ ಆರ್ಟ್ಸ್‌ನ ಹರಿ ಕೃಷ್ಣ ಕೆ ಮತ್ತು ಯುವಸುಧಾ ಆರ್ಟ್ಸ್ ಅಡಿಯಲ್ಲಿ ಸುಧಾಕರ್ ಮಿಕ್ಕಿಲಿನೇನಿ ನಿರ್ಮಿಸುತ್ತಿದ್ದಾರೆ.

ಆರ್ ರತ್ನವೇಲು ಅವರ ಛಾಯಾಗ್ರಹಣ, ಸಾಬು ಸಿರಿಲ್ ನಿರ್ಮಾಣ ವಿನ್ಯಾಸಕರಾಗಿದ್ದಾರೆ. ಶ್ರೀಕರ್ ಪ್ರಸಾದ್ ಅವರ ಸಂಕಲನ ಮತ್ತು ಅನಿರುದ್ಧ್ ರವಿಚಂದರ್ ಅವರು ಚಿತ್ರಕ್ಕೆ ಸಂಗೀತ ಸಂಯೋಜಿಸಲಿದ್ದಾರೆ.

ಇದಲ್ಲದೆ ಜೂನಿಯರ್ ಎನ್‌ಟಿಆರ್ ಅವರು 'ಕೆಜಿಎಫ್' ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಅವರೊಂದಿಗೂ ಸಿನಿಮಾ ಮಾಡಲು ಮುಂದಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com