ರಷ್ಯಾದಲ್ಲೂ 'ಪುಷ್ಪ: ದಿ ರೈಸ್' ಮೋಡಿ: ಬಾಕ್ಸ್ ಆಫೀಸ್‌ನಲ್ಲಿ 13 ಕೋಟಿ ರೂ. ಸಂಗ್ರಹಿಸಿ ದಾಖಲೆ

ನಟ ಅಲ್ಲು ಅರ್ಜುನ್ ಅಭಿನಯದ 'ಪುಷ್ಪ: ದಿ ರೈಸ್' ಸಿನಿಮಾ ರಷ್ಯಾದಲ್ಲಿ ಬಿಡುಗಡೆಯಾಗಿದ್ದು, ಬಾಕ್ಸ್ ಆಫೀಸ್‌ನಲ್ಲಿ 10 ಮಿಲಿಯನ್ ರೂಬಲ್‌ಗಳನ್ನು (ಅಂದಾಜು 13 ಕೋಟಿ ರೂ.) ಸಂಗ್ರಹಿಸಿದೆ ಎಂದು ಚಿತ್ರತಂಡ ಸೋಮವಾರ ತಿಳಿಸಿದೆ.
ಪುಷ್ಪ ಸಿನಿಮಾ ಸ್ಟಿಲ್
ಪುಷ್ಪ ಸಿನಿಮಾ ಸ್ಟಿಲ್

ಮುಂಬೈ: ನಟ ಅಲ್ಲು ಅರ್ಜುನ್ ಅಭಿನಯದ 'ಪುಷ್ಪ: ದಿ ರೈಸ್' ಸಿನಿಮಾ ರಷ್ಯಾದಲ್ಲಿ ಬಿಡುಗಡೆಯಾಗಿದ್ದು, ಬಾಕ್ಸ್ ಆಫೀಸ್‌ನಲ್ಲಿ 10 ಮಿಲಿಯನ್ ರೂಬಲ್‌ಗಳನ್ನು (ಅಂದಾಜು 13 ಕೋಟಿ ರೂ.) ಸಂಗ್ರಹಿಸಿದೆ ಎಂದು ಚಿತ್ರತಂಡ ಸೋಮವಾರ ತಿಳಿಸಿದೆ.

ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಪಹಾದ್ ಫಾಸಿಲ್ ಮುಂತಾದವರು ನಟಿಸಿರುವ ತೆಲುಗು ಬ್ಲಾಕ್‌ಬಸ್ಟರ್ ಸಿನಿಮಾ 2022ರ ಡಿಸೆಂಬರ್ 8 ರಂದು ರಷ್ಯಾದ 774 ಸ್ಕ್ರೀನ್‌ಗಳಲ್ಲಿ ರಷ್ಯನ್ ಭಾಷೆಯಲ್ಲಿಯೇ ಬಿಡುಗಡೆಯಾಗಿದೆ ಎಂದು ಮೈತ್ರಿ ಮೂವಿ ಮೇಕರ್ಸ್ (Mythri Movie Makers) ತನ್ನ ಅಧಿಕೃತ ಟ್ವಿಟರ್ ಪುಟದಲ್ಲಿ ತಿಳಿಸಿದೆ.

'ರಷ್ಯಾದಲ್ಲಿ ಪುಷ್ಪಾ ದಿ ರೈಸ್ ಕ್ರೇಜ್‌ ಅನ್ನು ಹುಟ್ಟುಹಾಕಿದೆ. ಚಿತ್ರಬಿಡುಗಡೆಯಾಗಿ 25 ದಿನಗಳು ಕಳೆದಿದ್ದು, 10 ಮಿಲಿಯನ್ ರೂಬಲ್‌ಗಳ ಸಂಗ್ರಹದೊಂದಿಗೆ 774 ಸ್ಕ್ರೀನ್‌ಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ' ಎಂದು ಪ್ರೊಡಕ್ಷನ್ ಬ್ಯಾನರ್ ಟ್ವೀಟ್‌ನಲ್ಲಿ ತಿಳಿಸಿದೆ.

ಹತ್ತು ಮಿಲಿಯನ್ ರೂಬಲ್‌ಗಳು ಎಂದರೆ ಸರಿಸುಮಾರು ಭಾರತದ 13 ಕೋಟಿ ರೂ. ಆಗಿರುತ್ತದೆ.
ಪುಷ್ಪ: ದಿ ರೈಸ್ ಸಿನಿಮಾವು ಆಂಧ್ರಪ್ರದೇಶ ರಾಜ್ಯದ ಶೇಷಾಚಲಂ ಬೆಟ್ಟಗಳಲ್ಲಿ ಮಾತ್ರ ಬೆಳೆಯುವ ಅಪರೂಪದ ರಕ್ತ ಚಂದನ ಮರದ ಕಳ್ಳಸಾಗಣೆಯಲ್ಲಿ ತೊಡಗುವು ಕಾರ್ಮಿಕನೊಬ್ಬರನ ಕಥೆಯನ್ನು ಒಳಗೊಂಡಿದೆ.

ಪುಷ್ಪ ಸಿನಿಮಾವು 2021ರ ಡಿಸೆಂಬರ್ 17 ರಂದು ಮುತ್ತಂಸೆಟ್ಟಿ ಮೀಡಿಯಾದ ಸಹಯೋಗದೊಂದಿಗೆ ಭಾರತದಲ್ಲಿ ಬಿಡುಗಡೆಯಾಯಿತು ಮತ್ತು ಬಾಕ್ಸ್‌ ಆಫೀಸ್‌ನಲ್ಲಿ 350 ಕೋಟಿ ರೂ.ಗೂ ಹೆಚ್ಚು ಗಳಿಸಿದ ವರ್ಷದ ಅತಿದೊಡ್ಡ ಚಿತ್ರಗಳಲ್ಲಿ ಒಂದಾಗಿದೆ.

ಅಲ್ಲು ಅರ್ಜುನ್, ರಶ್ಮಿಕಾ, ನಿರ್ದೇಶಕ ಸುಕುಮಾರ್ ಬಂಡ್ರೆಡ್ಡಿ, ನಿರ್ಮಾಪಕ ರವಿಶಂಕರ್ ಮತ್ತು ಸಂಗೀತ ಸಂಯೋಜಕ ಡಿಎಸ್ಪಿ ರಷ್ಯಾದಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿದ್ದರು.

'ಪುಷ್ಪ: ದಿ ರೂಲ್' ಎಂಬ ಶೀರ್ಷಿಕೆಯ ಮುಂದುವರಿದ ಭಾಗವು ನಿರ್ಮಾಣ ಹಂತದಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com