'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ನಮ್ಮ ಇಂಡಸ್ಟ್ರಿ ಹೆಮ್ಮೆ ಪಡುವಂತೆ ಮಾಡುತ್ತದೆ: ರಕ್ಷಿತ್ ಶೆಟ್ಟಿ
ನಿತಿನ್ ಕೃಷ್ಣಮೂರ್ತಿ ಅವರ ಚೊಚ್ಚಲ ನಿರ್ದೇಶನದ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ತನ್ನ ಶೀರ್ಷಿಕೆ ಕಾರಣದಿಂದಲೇ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಚಿತ್ರವು ನಟ-ನಿರ್ದೇಶಕ ರಕ್ಷಿತ್ ಶೆಟ್ಟಿ ಅವರ ಗಮನ ಸೆಳೆದಿದೆ. ಅವರು ತಮ್ಮ ಪರಂವಃ ಸ್ಟುಡಿಯೋಸ್‌ನಡಿ ಚಿತ್ರವನ್ನು ಪ್ರಸ್ತುತಪಡಿಸಲು ಸಿದ್ಧರಾಗಿದ್ದಾರೆ.
Published: 05th January 2023 01:12 PM | Last Updated: 05th January 2023 02:45 PM | A+A A-

ರಕ್ಷಿತ್ ಶೆಟ್ಟಿ
ನಿತಿನ್ ಕೃಷ್ಣಮೂರ್ತಿ ಅವರ ಚೊಚ್ಚಲ ನಿರ್ದೇಶನದ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ತನ್ನ ಶೀರ್ಷಿಕೆ ಕಾರಣದಿಂದಲೇ ನಿರೀಕ್ಷೆಯನ್ನು ಹುಟ್ಟುಹಾಕಿದೆ ಮತ್ತು ಚಿತ್ರದ ಪೋಸ್ಟರ್ ಅನ್ನು ಬಿಡುಗಡೆ ಮಾಡುವ ವಿನೂತನ ವಿಧಾನವೂ ಗಮನ ಸೆಳೆದಿದೆ. ಚಿತ್ರವು ನಟ-ನಿರ್ದೇಶಕ ರಕ್ಷಿತ್ ಶೆಟ್ಟಿ ಅವರ ಗಮನ ಸೆಳೆದಿದೆ. ಅವರು ತಮ್ಮ ಪರಂವಃ ಸ್ಟುಡಿಯೋಸ್‌ನಡಿ ಚಿತ್ರವನ್ನು ಪ್ರಸ್ತುತಪಡಿಸಲು ಸಿದ್ಧರಾಗಿದ್ದಾರೆ.
ಈ ಬಗ್ಗೆ ರಕ್ಷಿತ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಅಧಿಕೃತ ಘೋಷಣೆ ಮಾಡಿದ್ದಾರೆ. 'ಪರಂವಃ ಪಿಕ್ಚರ್ಸ್ ಕಳೆದ ವರ್ಷಗಳಲ್ಲಿ ಕೆಲವು ಅತ್ಯುತ್ತಮ ಚಲನಚಿತ್ರಗಳನ್ನು ಪ್ರಸ್ತುತಪಡಿಸುವ ಅವಕಾಶವನ್ನು ಪಡೆದಿತ್ತು. ನಾವು ಪ್ರಸ್ತುತಪಡಿಸಿದ್ದಕ್ಕಿಂತ ವಿಭಿನ್ನವಾದ ಪ್ರಕಾರದಿಂದ ಕೂಡಿರುವ ಮತ್ತೊಂದು ಅಸಾಧಾರಣ ಸಿನಿಮಾವನ್ನು ನಿರ್ಮಿಸುವ ಮೂಲಕ ಈ ಪಟ್ಟಿಗೆ ಸೇರಿಸಲು ನನಗೆ ಅತ್ಯಂತ ಸಂತೋಷ ಉಂಟಾಗಿದೆ ಎಂದಿದ್ದಾರೆ.
'ಯುವಕರ ಗುಂಪು ಈ ಉಲ್ಲಾಸದ ಮತ್ತು ತಂಗಾಳಿಯ ಚಲನಚಿತ್ರವನ್ನು ಸೃಜನಾತ್ಮಕವಾಗಿ ರಚಿಸಲು ಒಟ್ಟುಗೂಡಿದೆ. ಅದು ನಿಮ್ಮನ್ನು ಸಂತಸದ ಹಾದಿಯಲ್ಲಿ ನಡೆಸುವುದು ನಿಶ್ಚಿತ. ಈ ಚಿತ್ರವನ್ನು ಚಿತ್ರಿಸಿದ ರೀತಿಯಲ್ಲಿ, ಬೇರೆ ಯಾವುದೇ ಚಲನಚಿತ್ರವು ಈ ಶೈಲಿಯನ್ನು ಈ ಮೊದಲು ಅಳವಡಿಸಿಕೊಂಡಿಲ್ಲ ಎಂದು ನಾನು ವಿಶ್ವಾಸದಿಂದ ಹೇಳಿಕೊಳ್ಳಬಲ್ಲೆ. ನಮ್ಮ ಇಂಡಸ್ಟ್ರಿ ಹೆಮ್ಮೆ ಪಡುವ ಇನ್ನೊಂದು ಚಿತ್ರ ಇದಾಗಲಿದೆ. ಪರಂವಃ ಪಿಕ್ಚರ್ಸ್ ಹೆಮ್ಮೆಯಿಂದ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾವನ್ನು ಪ್ರಸ್ತುತಪಡಿಸಲಿದೆ' ಎಂದು ಅವರು ಬರೆದಿದ್ದಾರೆ.

ರಕ್ಷಿತ್ ಶೆಟ್ಟಿ ಜೊತೆಗಿನ ಒಡನಾಟದ ಬಗ್ಗೆ ಉತ್ಸುಕತೆಯನ್ನು ವ್ಯಕ್ತಪಡಿಸಿದ ನಿತಿನ್, 'ತನ್ನ ತಾಳ್ಮೆ ಅಂತಿಮವಾಗಿ ಫಲ ನೀಡಿದೆ ಮತ್ತು ಚಿತ್ರ ನಿರ್ಮಾಪಕರ ಬೆಂಬಲವು ಚಿತ್ರಕ್ಕೆ ಉತ್ತಮವಾದ ಉತ್ತೇಜನವಾಗಿದೆ. ಪರಂವಃ ಪಿಕ್ಚರ್ಸ್‌ನಂತಹ ಜನಪ್ರಿಯ ನಿರ್ಮಾಣ ಸಂಸ್ಥೆಯಿಂದ ದೊರಕುತ್ತಿರುವ ಬಾಹ್ಯ ಬೆಂಬಲವು ದೊಡ್ಡ ಡೀಲ್ ಆಗಿದೆ. ರಕ್ಷಿತ್ ಅವರು ಚಿತ್ರ ವೀಕ್ಷಿಸಿದ ನಂತರ ಮೆಚ್ಚಿಕೊಂಡರು. 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ಹಾರಲು ಈಗ ರೆಕ್ಕೆಗಳು ಸಿಕ್ಕಿವೆ ಮತ್ತು ಚಿತ್ರವು ಥಿಯೇಟರ್‌ಗಳಲ್ಲಿ ಹೆಚ್ಚಿನ ಪ್ರೇಕ್ಷಕರನ್ನು ತಲುಪುತ್ತದೆ' ಎಂದರು.
ಇದನ್ನೂ ಓದಿ: ರಕ್ಷಿತ್ ಶೆಟ್ಟಿ ಅವರ ಪರಂವಃ ಸ್ಟುಡಿಯೋಸ್ ಬ್ಯಾನರ್ ಅಡಿಯ ಚಿತ್ರಕ್ಕೆ ಹೆಸರು 'ಇಬ್ಬನಿ ತಬ್ಬಿದ ಇಳೆಯಲಿ'
ಈಮಧ್ಯೆ, ಆಡಿಯೋ ಬಿಡುಗಡೆಯೊಂದಿಗೆ ಚಿತ್ರದ ಪ್ರಚಾರವನ್ನು ಪ್ರಾರಂಭಿಸಲು ಚಿತ್ರತಂಡ ಯೋಜಿಸಿದೆ ಮತ್ತು ಮೊದಲ ಹಾಡನ್ನು ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಧ್ರುವ ಸರ್ಜಾ ಮತ್ತು ಧನಂಜಯ್ ಬಿಡುಗಡೆ ಮಾಡಲಿದ್ದಾರೆ.
ಈ ಹಿಂದೆ ಕಿರುತೆರೆಯಲ್ಲಿ ಕೆಲಸ ಮಾಡಿದ್ದ ನಿತಿನ್, ಪವನ್ ಕುಮಾರ್ ಅವರ ಲೂಸಿಯಾದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
ವರನ್ ಸ್ಟುಡಿಯೋಸ್ ಸಹಯೋಗದಲ್ಲಿ ಗುಲ್‌ಮೊಹರ್ ಫಿಲಂಸ್ ಬ್ಯಾನರ್‌ನಡಿಯಲ್ಲಿ ನಿರ್ಮಿಸಲಾದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ, ಕ್ರಮವಾಗಿ ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣ ಮತ್ತು ಅಜನೀಶ್ ಲೋಕನಾತ್ ಅವರ ಸಂಗೀತವನ್ನು ಹೊಂದಿದೆ. ನಿರ್ದೇಶಕ ನಿತಿನ್ ಈ ಚಿತ್ರದಲ್ಲಿ 100 ಹೊಸ ಮುಖಗಳನ್ನು ಪರಿಚಯಿಸಲಿದ್ದಾರೆ. ಇದಕ್ಕಾಗಿ ಮೊದಲ ಬಾರಿಗೆ ನಿರ್ದೇಶಕರು ಕನಿಷ್ಠ 7,000 ಕಲಾವಿದರನ್ನು ಆಡಿಷನ್ ಮಾಡಿದ್ದಾರೆ.
ಕುತೂಹಲಕಾರಿಯಾಗಿ, ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದಲ್ಲಿ ರಿಷಬ್ ಶೆಟ್ಟಿ, ಪವನ್ ಕುಮಾರ್, ಶೈನ್ ಶೆಟ್ಟಿ ಮತ್ತು ಸತೀಶ್ ನೀನಾಸಂ ಅವರು ಅತಿಥಿ ಪಾತ್ರವನ್ನು ಹೊಂದಿರುತ್ತಾರೆ. ಚಿತ್ರವು ಈಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಬೇಸಿಗೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಲ್ಲಿದೆ.