ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮುಂಬರುವ ಚಿತ್ರ ಕ್ರಾಂತಿ ಅಭಿಮಾನಿಗಳಲ್ಲಿ ಭಾರೀ ಕ್ರೇಜ್'ನ್ನು ಹುಟ್ಟಿಸಿದ್ದು, ಚಿತ್ರವು ಗಣರಾಜ್ಯೋತ್ಸವ (ಜನವರಿ 26)ದಿನದಂದು ಬಿಡುಗಡೆಯಾಗುತ್ತಿದೆ.
ಈಗಾಗಲೇ ಕ್ರಾಂತಿ ಚಿತ್ರದ ಮೂರು ಹಾಡುಗಳನ್ನು ಬಿಡುಗಡೆ ಮಾಡಿರುವ ದರ್ಶನ್ ಅವರು ಜನವರಿ 14 ರಂದು ನಾಲ್ಕನೇ ಹಾಡನ್ನು ತುಮಕೂರಿನಲ್ಲಿ ಬಿಡುಗಡೆ ಮಾಡಿದ್ದಾರೆ. ಡೋಂಟ್ ಮೆಸ್ ವಿತ್ ಹಿಮ್ ಹಾಡು ಬಿಡುಗಡೆ ಮಾಡಿದ್ದಾರೆ. ಕ್ರಾಂತಿಯ ಈ ಹಾಡು ಫುಲ್ ಮಾಸ್ ಆಗಿದ್ದು, ಹಾಡಿಗೆ ಡಿಬಾಸ್ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಅದರಲ್ಲೂ ದರ್ಶನ್ ಅವರ ರಗಡ್ ಲುಕ್'ಗೆ ಅಭಿಮಾನಿಗಳು ಖುಷ್ ಆಗಿದ್ದಾರೆ.
ಈ ಹಾಡನ್ನು ಚೇತನ್ ಕುಮಾರ್ ಬರೆದ್ದು, ಹರಿಕೃಷ್ಣ ಸಂಗೀತ ನಿರ್ದೇಶನ ಮಾಡಿದ್ದಾರೆ. ಟಿಪ್ಪು, ರಂಜಿತ್ ಹಾಗೂ ಅನಿರುದ್ಧ್ ಶಾಸ್ತ್ರಿ ಕಂಠಸಿರಿಯಲ್ಲಿ ಹಾಡು ಮೂಡಿಬಂದಿದೆ. ಈಗಾಗಲೇ ಧರಣಿ, ಪುಷ್ಪವತಿ, ಬೊಂಬೆ ಹಾಡು ಬಿಡುಗಡೆಯಾಗಿ ಸದ್ದು ಮಾಡಿದ್ದು, ಇದೀಗ ಡೋಂಟ್ ಮೆಸ್ ವಿತ್ ಹಿಮ್ ಹಾಡು ಕೂಡ ಫ್ಯಾನ್ಸ್‌ಗಳ ಕ್ರೇಜ್ ಹೆಚ್ಚಿಸಿದೆ.
ಚಿತ್ರದ ನಾಲ್ಕನೇ ಹಾಡನ್ನು ತುಮಕೂರಿನ ಬಿಎಚ್ ರಸ್ತೆ, ಶಿವಕುಮಾರ ಸ್ವಾಮಿ ವೃತ್ತದಲ್ಲಿ ಬಿಡುಗಡೆ ಮಾಡಲಾಗಿದ್ದು, ಕಾರ್ಯಕ್ರಮದ ಆ್ಯಂಕರಿಂಗ್ ಹೊಣೆಯನ್ನು ದರ್ಶನ್ ಅವರೇ ಹೊತ್ತಿದ್ದರು, ದರ್ಶನ್ ಅವರು ನೋಡಲು ಅಭಿಮಾನಿಗಳು ರಸ್ತೆಗಳ ಇಕ್ಕೆಲಗಳು, ಮರಗಳು ಹಾಗೂ ಕಂಬಗಳ ಮೇಲೆ ಕುಳಿತು ನೋಡುತ್ತಿರುವುದು ಕಂಡು ಬಂದಿತ್ತು. ಸ್ಥಳದಲ್ಲಿ ಸಾಕಷ್ಟು ಜನರು ನೆರೆದಿದ್ದರಿಂದ ಕ್ರಾಂತಿ ಚಿತ್ರದ ತಂಡ ವೇದಿಕೆಗೆ ತೆರಳಲು ಬಸ್ಸಿನಿಂದ ಕೆಳಗೆ ಇಳಿಯಲು ಕೂಡ ಸಾಧ್ಯವಾಗಲಿಲ್ಲ. ಅಂತಿಮವಾಗಿ ದರ್ಶನ್ ಅವರು ಬಸ್'ನ ಮೇಲ್ಭಾಗಕ್ಕೆ ಹತ್ತಿ ಕಾರ್ಯಕ್ರಮವನ್ನು ನಿರ್ವಹಿಸಿದರು.
ಈ ಘಟನೆಯನ್ನು ಸಂಗೀತ ನಿರ್ದೇಶಕ ಹರಿಕೃಷ್ಣ ಅವರು, ಮಾಸ್ ಹಿಸ್ಟೀರಿಯಾ ಎಂದು ಬಣ್ಣಿಸಿದ್ದಾರೆ. ಕಾರ್ಯಕ್ರಮದಲ್ಲಿ ಹಾಜರಿದ್ದ ಪ್ರತಿಯೊಬ್ಬ ವ್ಯಕ್ತಿಯೂ ಒಬ್ಬ ವ್ಯಕ್ತಿಯನ್ನು ಮಾತ್ರ ನೋಡುತ್ತಿದ್ದರು... ಅದು ದರ್ಶನ್. ತಾನೊಬ್ಬ ಅಭಿಮಾನಿಗಳ ಹೀರೋ ಎಂಬುದನ್ನು ಮತ್ತೊಮ್ಮೆ ದರ್ಶನ್ ಸಾಬೀತುಪಡಿಸಿದ್ದಾರೆ. ಪ್ರತಿ ಹಾಡಿನ ಕಾರ್ಯಕ್ರಮವೂ ನಮಗೆ ಒಂದು ದೊಡ್ಡ ಮೆರವಣಿಗೆಯಂತಿತ್ತು. ಕ್ರಾಂತಿಯೊಂದು ಆಲ್ಬಂ ಹಿಟ್ ಚಿತ್ರವಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ, ಚಿತ್ರದಲ್ಲಿ ದರ್ಶನ್ ಅವರಂತಹವರಿಗೆ ಪರಿಚಯಾತ್ಮಕ ಗೀತೆಯನ್ನು ರಚಿಸುವುದು ಎಂದರೆ ಏನು? ಎಂದು ಪ್ರಶ್ನಿಸಿದ್ದಾರೆ.
“ದರ್ಶನ್ ಅವರ ಹಾಡುಗಳನ್ನು ರಚಿಸುವುದು ಯಾವಾಗಲೂ ವಿಶೇಷವಾಗಿರುತ್ತದೆ. ಅವರು ಲೈಫ್ ಸ್ಟಾರ್ಗಿಂತ ದೊಡ್ಡವರು ಎಂದು ತಿಳಿಸಿದ್ದಾರೆ.
ಬಳಿಕ ರವಿಚಂದ್ರನ್ ಮತ್ತು ಹಂಸಲೇಖ, ರಾಜ್ ಕಪೂರ್ ಮತ್ತು ಶಂಕರ್ ಜೈಕಿಶನ್ ಅವರಂತಹ ಯಶಸ್ವಿ ನಟ ಸಂಯೋಜಕರ ಸಹಯೋಗವನ್ನು ಉಲ್ಲೇಖಿಸಿ ಮಾತನಾಡಿದ ಹರಿಕೃಷ್ಣ ಅವರು, ನಮ್ಮ ಕೆಲಸದಲ್ಲಿ ಪ್ರತಿಫಲಿಸುವ ಅದ್ಭುತ ಬಾಂಧವ್ಯವನ್ನು ನಾವು ಹಂಚಿಕೊಳ್ಳುತ್ತೇವೆ. ಕ್ರಾಂತಿ ಆಡಿಯೋ ಲಾಂಚ್ ತಂಡಕ್ಕೆ ವಿಭಿನ್ನ ಅನುಭವ ನೀಡಿದೆ. ಇಲ್ಲಿಯವರೆಗೆ ನಾವು ಮುಚ್ಚಿದ ಬಾಗಿಲುಗಳ ಒಂದು ಕೊಠಡಿಯಲ್ಲಿ ಆಲ್ಬಮ್ ಅನ್ನು ಬಿಡುಗಡೆ ಮಾಡುತ್ತಿದ್ದೆವು. ಆದರೆ ಕ್ರಾಂತಿಯೊಂದಿಗೆ, ಪ್ರತಿ ಹಾಡನ್ನು ಅಭಿಮಾನಿಗಳ ನಡುವೆ, ಪ್ರೇಕ್ಷಕರ ಮುಂದೆ ಬಿಡುಗಡೆ ಮಾಡಲಾಗುತ್ತಿದೆ. ಇದರಿಂದ ನಮಗೆ ತ್ವರಿಗತಿಯ ಪ್ರತಿಕ್ರಿಯೆಗಳು ಜನರಿಂದ ಸಿಗುತ್ತದ ಎಂದಿದ್ದಾರೆ.
“ಕ್ರಾಂತಿ ಆಲ್ಬಂ ಒಂದು ಹಿಟ್ ಚಿತ್ರವಾಗಿದೆ. ಸಾಮಾನ್ಯವಾಗಿ ಸಿನಿಮಾದಲ್ಲಿ ಒಂದು ಅಥವಾ ಎರಡು ಹಾಡುಗಳು ಹಿಟ್ ಆಗುತ್ತವೆ. ಆದರೆ, ಕ್ರಾಂತಿಯಲ್ಲಿ ಪ್ರತಿಯೊಂದು ಹಾಡುಗಳು ಟ್ರೆಂಡಿಂಗ್ ಆಗುತ್ತಿದೆ. ನಟ ಮತ್ತು ಸಂಗೀತ ನಿರ್ದೇಶಕರಾಗಿ ನಮ್ಮ ಹಿಟ್ ಕಾಂಬಿನೇಷನ್ ಮುಂದುವರಿಯುತ್ತದೆ ಎಂದು ತಿಳಿಸಿದ್ದಾರೆ.
ಕೊನೆಯದಾಗಿ ಯಜಮಾನ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದ ಹರಿಕೃಷ್ಣ, ನಿರ್ದೇಶನದತ್ತ ಗಮನಹರಿಸಲು ಸಮಯ ತೆಗೆದುಕೊಂಡಿದ್ದು, ಮೂರು ವರ್ಷಗಳ ನಂತರ ಕ್ರಾಂತಿಯೊಂದಿಗೆ ಸಂಗೀತ ಸಂಯೋಜನೆಗೆ ಮರಳಿದ್ದಾರೆ.
ಶೈಲಜಾ ನಾಗ್ ಮತ್ತು ಬಿ ಸುರೇಶ ಅವರ ಮೀಡಿಯಾ ಹೌಸ್ ಸ್ಟುಡಿಯೋಸ್ ನಿರ್ಮಿಸಿರುವ ಕ್ರಾಂತಿಯಲ್ಲಿ ರಚಿತಾ ರಾಮ್, ರವಿಚಂದ್ರನ್, ರವಿಶಂಕರ್, ಸಂಯುಕ್ತ ಹೊರ್ನಾಡ್ ಮತ್ತು ನಿಮಿಕಾ ರತ್ನಾಕರ್ ನಟಿಸಿದ್ದಾರೆ.
Advertisement