
ಭೀಮಾ ಚಿತ್ರದ ಪೋಸ್ಟರ್
ಬೆಂಗಳೂರು: ನಟ ದುನಿಯಾ ವಿಜಯ್ ಜನ್ಮದಿನದ ನಿಮಿತ್ತ ಭೀಮಾ ಚಿತ್ರತಂಡ ವಿಶೇಷ ಪೋಸ್ಟರ್ ಬಿಡುಗಡೆ ಮಾಡಿದೆ.
ಇಂದು ಜನವರಿ 20ಕ್ಕೆ ದುನಿಯಾ ವಿಜಯ್ ಜನ್ಮ ದಿನವಾಗಿದ್ದು, ವಿಜಯ್ ಪಾಲಿಗೆ ಈ ಬಾರಿ ಹುಟ್ಟುಹಬ್ಬ ವಿಭಿನ್ನ ರೀತಿಯದ್ದಾಗಿದೆ. ಪ್ರಸ್ತುತ ಸಲಗ ನಟ ವಿಜಯ್ ತಮ್ಮ ಕುಂಬಾರನಹಳ್ಳಿಯಲ್ಲಿದ್ದು, ಅಲ್ಲಿ ಅವರು ನಿರ್ಮಿಸಿರುವ ಹೆತ್ತವರ ಸ್ಮಾರಕದಲ್ಲಿ ವಿಶೇಷ ದಿನವನ್ನು ಕಳೆಯಲಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು "ನನ್ನ ಹೆತ್ತವರು ನನ್ನ ಮನಸ್ಸಿನ ತುಂಬಾ ಇದ್ದಾರೆ. ನಾನು ಕುಟುಂಬ ಮತ್ತು ಸ್ನೇಹಿತರ ಜೊತೆಗೆ ಅವರೊಂದಿಗೆ ದಿನ ಕಳೆಯಲು ಬಯಸುತ್ತೇನೆ" ಎಂದು ವಿಜಯ್ ಹೇಳಿದ್ದಾರೆ.
ಇದನ್ನೂ ಓದಿ: ನಿರ್ದೇಶಕ ಜಡೇಶ್ ಹಂಪಿ ಜೊತೆ ದುನಿಯಾ ವಿಜಯ್ ಸಿನಿಮಾ ಘೋಷಣೆ
ಇನ್ನೂ ಇತ್ತೀಚೆಗಷ್ಟೇ ವಿಜಯ್ ತೆಲುಗು ಸೂಪರ್ ಸ್ಟಾರ್ ನಂದಮೂರಿ ಬಾಲಕೃಷ್ಣ ಅವರ ವೀರ ಸಿಂಹ ರೆಡ್ಡಿ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಆ ಚಿತ್ರ ಸಂಕ್ರಾಂತಿ ವೇಳೆ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ವಿಜಯ್ ಅಭಿನಯದ ಮುಂದಿನ ಚಿತ್ರ ಭೀಮಾ ಬಿಡುಗಡೆಗೆ ಸಿದ್ಧವಾಗಿದೆ. ಈಗಾಗಲೇ ಚಿತ್ರತಂಡ ಭೀಮಾ ಚಿತ್ರದ ಟೀಸರ್ ಬಿಡುಗಡೆ ಮಾಡಿದೆ. ನಟನ ಹುಟ್ಟುಹಬ್ಬದ ಅಂಗವಾಗಿ ಲುಕ್ ಅನ್ನು ಬಿಡುಗಡೆ ಮಾಡಲಾಗಿದೆ.
ಭೀಮಾ ಚಿತ್ರದ ಶೇಕಡ 50ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು, ವಿಜಯ್ ತನ್ನ ಭಾಗಗಳ ಚಿತ್ರೀಕರಣವನ್ನು ಪ್ರಾರಂಭಿಸಲು ಸಿದ್ಧರಾಗಿದ್ದಾರೆ. "ಮುಂಬರುವ ದಿನಗಳಲ್ಲಿ ನಾನು ನನ್ನ ಭಾಗದ ಚಿತ್ರೀಕರಣವನ್ನು ಪ್ರಾರಂಭಿಸುತ್ತೇನೆ" ಎಂದು ವಿಜಯ್ ಹೇಳಿದ್ದಾರೆ. ಸಲಗ ಮೂಲಕ ಅಭಿಮಾನಿಗಳು ನನ್ನನ್ನು ನಿರ್ದೇಶಕನಾಗಿಸಿದರು. ನಾನು ಪ್ರಸ್ತುತ ಭೀಮಾ ನಿರ್ದೇಶನದ ಪ್ರಕ್ರಿಯೆಯನ್ನು ಆನಂದಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಭೀಮಾ ಚಿತ್ರದ ಟೀಸರ್ ಗಾಗಿ ಇಲ್ಲಿ ಕ್ಲಿಕ್ ಮಾಡಿ
ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಗೌಡ ಅವರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ, ಭೀಮಾ ಅಪರಾಧ ಪ್ರಪಂಚವನ್ನು ಆಧರಿಸಿದ್ದು, ಬಹಳಷ್ಟು ಹೊಸಬರು ನಟಿಸಿದ್ದಾರೆ.