'ನಾನು ಕುಡಿದು ಮಾತಾಡ್ತಾ ಇದ್ದೀನಿ ಅನ್ಕೊಂಡ್ರೇನೋ? ಚಿತ್ರರಂಗ ನನ್ನ ಸ್ವತ್ತಲ್ಲ, ಕೆಸಿಸಿಗೆ ಎಲ್ಲರಿಗೂ ಆಹ್ವಾನವಿದೆ; ಇಷ್ಟ ಇರುವವರು ಆಡಲು ಬರ್ತಾರೆ'
ಕೆಸಿಸಿಯಲ್ಲಿ ಭಾಗವಹಿಸಲು ನಾವು ಚಿತ್ರರಂಗದ ಎಲ್ಲರಿಗೂ ಆಹ್ವಾನ ನೀಡುತ್ತಿದ್ದೇವೆ. ಕೆಲವರಿಗೆ ಈ ಟೂರ್ನಿಯಲ್ಲಿ ಆಡೋಕೆ ಇಷ್ಟ ಇರಲ್ಲ. ಅಂಥವರು ಬರಲ್ಲ. ಅವರು ಯಾಕೆ ಬಂದಿಲ್ಲ, ಇವರು ಯಾಕೆ ಬಂದಿಲ್ಲ ಅಂತ ಕೇಳಬೇಡಿ. ಚಿತ್ರರಂಗ ನನ್ನ ಸ್ವತ್ತಲ್ಲ.
Published: 24th January 2023 09:03 AM | Last Updated: 24th January 2023 01:46 PM | A+A A-

ಸುದೀಪ್
ಬೆಂಗಳೂರು: ಕೋವಿಡ್ ಕಾರಣಗಳಿಂದ ಕಳೆದ ಕೆಲವು ವರ್ಷಗಳಿಂದ ನಿಂತಿದ್ದ `ಕರ್ನಾಟಕ ಚಲನಚಿತ್ರ ಕಪ್ ಈಗ ಮತ್ತೊಮ್ಮೆ ಚಾಲನೆ ಸಿಕ್ಕಿದೆ. ಸಿನಿಮಾ ಕೆಲಸದಿಂದ ಬ್ರೇಕ್ ಪಡೆದು ಚಿತ್ರರಂಗದ ಕಲಾವಿದರು ಕ್ರಿಕೆಟ್ ಆಟಕ್ಕಾಗಿ 'ಕೆಸಿಸಿ'ಗಾಗಿ ಸಾಥ್ ನೀಡುತ್ತಿದ್ದರು. ಈಗ ಈ ವರ್ಷ ನಡೆಯಲಿರುವ ಕೆಸಿಸಿ ಮೂರನೇ ಆವೃತ್ತಿಯಲ್ಲಿ ಏನೆಲ್ಲ ಇರಲಿದೆ ಎನ್ನುವ ಬಗ್ಗೆ ಸುದೀಪ್ ಮಾತನಾಡಿದ್ದಾರೆ.
ಕಳೆದ ಎರಡು ಸೀಸನ್‌ಗಳಲ್ಲಿ ಹಲವರು ಕೆಸಿಸಿಯಲ್ಲಿ ಆಡಿದ್ದಾರೆ. ಇನ್ನೂ ಕೆಲವರು ಇದರಲ್ಲಿ ಪಾಲ್ಗೊಂಡಿಲ್ಲ. ಕೆಲವರಿಗೆ ಸುದೀಪ್ ಕಡೆಯಿಂದ ಆಹ್ವಾನ ಹೋಗಿಲ್ಲ ಎನ್ನುವ ಮಾತುಗಳು ಬಂದಿದ್ದವು. ಇದಕ್ಕೆ ಸುದೀಪ್ ಈ ವರ್ಷ ಆರಂಭದಲ್ಲೇ ಉತ್ತರ ನೀಡಿದ್ದಾರೆ. ನಾವು ಚಿತ್ರರಂಗದ ಎಲ್ಲರಿಗೂ ಆಹ್ವಾನ ನೀಡುತ್ತಿದ್ದೇವೆ ಎಂದರು.
ಕೆಸಿಸಿಯಲ್ಲಿ ಭಾಗವಹಿಸಲು ನಾವು ಚಿತ್ರರಂಗದ ಎಲ್ಲರಿಗೂ ಆಹ್ವಾನ ನೀಡುತ್ತಿದ್ದೇವೆ. ಕೆಲವರಿಗೆ ಈ ಟೂರ್ನಿಯಲ್ಲಿ ಆಡೋಕೆ ಇಷ್ಟ ಇರಲ್ಲ. ಅಂಥವರು ಬರಲ್ಲ. ಅವರು ಯಾಕೆ ಬಂದಿಲ್ಲ, ಇವರು ಯಾಕೆ ಬಂದಿಲ್ಲ ಅಂತ ಕೇಳಬೇಡಿ. ಚಿತ್ರರಂಗ ನನ್ನ ಸ್ವತ್ತಲ್ಲ. ನಾವು ಎಲ್ಲರಿಗೂ ಆಹ್ವಾನ ನೀಡುತ್ತಿದ್ದೇವೆ. ಅವರವರ ಶೆಡ್ಯೂಲ್ ನೋಡಿಕೊಂಡು ಬರುತ್ತಾರೆ ಎಂದು ಸುದೀಪ್ ಖಡಕ್ ಆಗಿಯೇ ಹೇಳಿದ್ದಾರೆ.
ಕಳೆದ ವರ್ಷ ತಂಡದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಿದ ಕ್ರಿಕೆಟ್ ಆಟಗಾರರು ಕೂಡ ಇದ್ರು. ಹಾಗೆಯೇ ಈ ವರ್ಷ ಕೂಡ ಆರು ಅಂತಾರಾಷ್ಟ್ರೀಯ ಆಟಗಾರರು ಇರುತ್ತಾರೆ ಎಂದು ನಟ ಕಿಚ್ಚ ಸುದೀಪ್ ಮಾಹಿತಿ ನೀಡಿದ್ದಾರೆ. ಸಿನಿಮಾ ರಂಗದವರು ಕೂಡ ಇರುತ್ತಾರೆ. ಬೇರೆ ಬೇರೆ ಸಿನಿಮಾ ಇಂಡಸ್ಟ್ರಿಯವರು ಸಹ ಕ್ರಿಕೆಟ್ ಆಡೋಕೆ ಬರಬಹುದು. ರಾಜಕಾರಣಿಗಳು ಹಾಗೂ ಮಾಧ್ಯಮದವರು ಕೂಡ ಇದರಲ್ಲಿ ಭಾಗಿ ಆಗಬಹುದು ಎಂದು ಸುದೀಪ್ ಹೇಳಿದ್ದಾರೆ.
ಕೆಸಿಸಿ ಸೀಸನ್ 3ಕ್ಕೆ ತಂಡ ರಚನೆಯಾದ ಬಳಿಕ ಕ್ಯಾಪ್ಟನ್ ಆಯ್ಕೆ ಮಾಡಲಾಗುತ್ತದೆ. ಅವರವರ ತಂಡದ ಕ್ಯಾಪ್ಟನ್ನನ್ನು ಅವರೇ ಆಯ್ಕೆ ಮಾಡಿಕೊಳ್ಳಬೇಕು. ಒಮ್ಮತದಿಂದ ಕ್ಯಾಪ್ಟನ್ ಆಯ್ಕೆ ನಡೆಯುತ್ತದೆ. ಒತ್ತಾಯ ಪೂರ್ವಕವಾಗಿ ಯಾರೂ ಇಲ್ಲಿ ನಾಯಕ ಆಗೋಕೆ ಆಗಲ್ಲ ಎಂದು ಸುದೀಪ್ ಹೇಳಿದ್ದಾರೆ.
ಕೆಸಿಸಿ ಸೀಸನ್ 3 ಮ್ಯಾಚ್ ಲೈವ್ ಕೆಸಿಸಿ ಟಿವಿಯಲ್ಲಿ ಇರುತ್ತದೆ. ವೃತ್ತಿಪರ ಕ್ಯಾಮೆರಾಮೆನ್ಗಳು ಬರುತ್ತವೆ. ಮೈಸೂರಿನಲ್ಲಿ 2 ದಿನ ಮ್ಯಾಚ್ ಇರುತ್ತದೆ. ಫೆಬ್ರವರಿ 11 ಹಾಗೂ 12 ರಂದು ಮ್ಯಾಚ್ಗಳು ನಡೆಯಲಿದೆ ಎಂದು ಸುದೀಪ್ ಹೇಳಿದ್ದಾರೆ.