'ಸೂರ್ಯ 42' ಚಿತ್ರದಲ್ಲಿ ಸೀತಾ ರಾಮಂ ಖ್ಯಾತಿಯ ಮೃಣಾಲ್ ಠಾಕೂರ್ ನಟನೆ?
ಸೀತಾ ರಾಮಂ ಚಿತ್ರದ ಮೂಲಕ ದಕ್ಷಿಣ ಚಿತ್ರರಂಗದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದ್ದ ನಟಿ ಮೃಣಾಲ್ ಠಾಕೂರ್ ಸದ್ಯ ಅಕ್ಷಯ್ ಕುಮಾರ್ ಮತ್ತು ಇಮ್ರಾನ್ ಹಶ್ಮಿ ಅಭಿನಯದ ಸೆಲ್ಫಿ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Published: 30th January 2023 11:26 AM | Last Updated: 30th January 2023 11:26 AM | A+A A-

ಮೃಣಾಲ್ ಠಾಕೂರ್
ಸೀತಾ ರಾಮಂ ಚಿತ್ರದ ಮೂಲಕ ದಕ್ಷಿಣ ಚಿತ್ರರಂಗದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದ್ದ ನಟಿ ಮೃಣಾಲ್ ಠಾಕೂರ್ ಸದ್ಯ ಅಕ್ಷಯ್ ಕುಮಾರ್ ಮತ್ತು ಇಮ್ರಾನ್ ಹಶ್ಮಿ ಅಭಿನಯದ ಸೆಲ್ಫಿ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ನಾನಿ ಅವರ ಮುಂದಿನ ತಾತ್ಕಾಲಿಕ ಶೀರ್ಷಿಕೆಯ ನಾನಿ 30 ನಲ್ಲಿ ನಾಯಕಿಯಾಗಿ ನಟಿಸಲು ಆಕೆಯನ್ನು ಆಯ್ಕೆ ಮಾಡಲಾಗಿದೆ. ಆದರೆ, ಹೊಸ ಸುದ್ದಿ ಎಂದರೆ ಮೃಣಾಲ್ ಅವರು 'ಸೂರ್ಯ 42' ಸಿನಿಮಾದಲ್ಲಿ ಸೂರ್ಯ ಅವರೊಂದಿಗೆ ನಟಿಸುತ್ತಿದ್ದಾರೆ. ಈ ಮೂಲಕ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.
ಸಿರುತೈ ಶಿವ ನಿರ್ದೇಶನದ ಸೂರ್ಯ ಅವರ 42 ನೇ ಚಿತ್ರವು ಪೀರಿಯಾಡಿಕ್ ಸಿನಿಮಾ ಎಂದು ಹೇಳಲಾಗುತ್ತಿದೆ. ಚಿತ್ರದಲ್ಲಿ ಸೂರ್ಯ ಕಾಲಾಂತರದಲ್ಲಿ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನಲಾಗಿದೆ ಮತ್ತು ಈ ಭಾಗಗಳಲ್ಲಿ ಮೃಣಾಲ್ ಅವರು ಸೂರ್ಯ ಅವರ ಜೋಡಿಯಾಗಿ ನಟಿಸುವ ನಿರೀಕ್ಷೆಯಿದೆ.
ಚಿತ್ರತಂಡದಿಂದ ಅಧಿಕೃತ ದೃಡೀಕರಣ ಲಭ್ಯವಾಗಿಲ್ಲದಿದ್ದರೂ, ಫೆಬ್ರುವರಿಯಲ್ಲಿ ಮುಂಬರುವ ಚಿತ್ರೀಕರಣದ ವೇಳಾಪಟ್ಟಿಯಲ್ಲಿ ಮೃಣಾಲ್ ತನ್ನ ಭಾಗಗಳ ಚಿತ್ರೀಕರಣವನ್ನು ಪ್ರಾರಂಭಿಸುತ್ತಾರೆ ಎಂದು ವರದಿಯಾಗಿದೆ.
ಸೂರ್ಯ 42 ರ ಶೂಟಿಂಗ್ ಬಹುಶಃ ಮಾರ್ಚ್ ಅಥವಾ ಏಪ್ರಿಲ್ 2023ರ ವೇಳೆಗೆ ಮುಕ್ತಾಯಗೊಳ್ಳಲಿದೆ. ಈ ಚಿತ್ರವು 10 ಭಾಷೆಗಳಲ್ಲಿ ಬಿಡುಗಡೆಯಾಗುವ ಪೀರಿಯಾಡಿಕ್ ಸಿನಿಮಾವಾಗಿದ್ದು, ಎರಡು ಭಾಗಗಳಲ್ಲಿ ಚಿತ್ರ ತಯಾರಾಗುತ್ತಿದೆ.
ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜನೆ ಮಾಡಲಿದ್ದು, ದಿಶಾ ಪಟಾನಿ, ಕೋವೈ ಸರಳಾ, ಯೋಗಿ ಬಾಬು ಮತ್ತು ರೆಡಿನ್ ಕಿಂಗ್ಸ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.
ಮೃಣಾಲ್ ಹಿಂದಿಯಲ್ಲಿ ಪೂಜಾ ಮೇರಿ ಜಾನ್ ಮತ್ತು ಪಿಪ್ಪಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಆಂಖ್ ಮಿಚೋಲಿ ಮತ್ತು ಗುಮ್ರಾ ನಿರ್ಮಾಣದ ವಿವಿಧ ಹಂತಗಳಲ್ಲಿವೆ.