ಸಂಜು ವೆಡ್ಸ್ ಗೀತಾ 2 ಗೆ ಹೊಸ ನಾಯಕಿ; ರಚಿತಾ ರಾಮ್ ಜೊತೆಗೆ ನಿರ್ದೇಶಕ ನಾಗಶೇಖರ್ ಮಾತುಕತೆ; ರಮ್ಯಾ ಔಟ್?
ನಿರ್ದೇಶಕ ನಾಗಶೇಖರ್ ಇತ್ತೀಚೆಗೆ ಸಂಜು ವೆಡ್ಸ್ ಗೀತಾ 2 ಸಿನಿಮಾ ಮಾಡುವುದಾಗಿ ಘೋಷಿಸಿದರು. 'ಲೈಫ್ ಈಸ್ ಬ್ಯೂಟಿಫುಲ್' ಎಂಬ ಅಡಿಬರಹವಿರುವ ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಮೂಲ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ರಮ್ಯಾ ಎರಡನೇ ಭಾಗದಲ್ಲಿ ಪ್ರೆಸೆಂಟರ್ ಆಗಿರಲಿದ್ದಾರೆ.
Published: 18th July 2023 12:28 PM | Last Updated: 18th July 2023 04:40 PM | A+A A-

ಸಂಜು ವೆಡ್ಸ್ ಗೀತಾ 2 ಪೋಸ್ಟರ್- ರಚಿತಾ ರಾಮ್
ನಿರ್ದೇಶಕ ನಾಗಶೇಖರ್ ಇತ್ತೀಚೆಗೆ ಸಂಜು ವೆಡ್ಸ್ ಗೀತಾ 2 ಸಿನಿಮಾ ಮಾಡುವುದಾಗಿ ಘೋಷಿಸಿದರು. 'ಲೈಫ್ ಈಸ್ ಬ್ಯೂಟಿಫುಲ್' ಎಂಬ ಅಡಿಬರಹವಿರುವ ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಮೂಲ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ರಮ್ಯಾ ಎರಡನೇ ಭಾಗದಲ್ಲಿ ಪ್ರೆಸೆಂಟರ್ ಆಗಿರಲಿದ್ದಾರೆ.
ನಿರ್ದೇಶಕರು ಸದ್ಯ ತಾರಾಗಣವನ್ನು ಅಂತಿಮಗೊಳಿಸಲು ಮುಂದಾಗಿದ್ದು, ನಾಯಕಿಯಾಗಿ ನಟಿಸಲು ನಟಿ ರಚಿತಾ ರಾಮ್ ಅವರೊಂದಿಗೆ ನಾಗಶೇಖರ್ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ, ನಟಿ ಮತ್ತು ನಿರ್ದೇಶಕರು ಇತ್ತೀಚೆಗೆ ಭೇಟಿಯಾಗಿ ಮಾತುಕತೆ ನಡೆಸಿದ್ದು, ಚಿತ್ರದ ಬಗ್ಗೆ ಆರಂಭಿಕ ಚರ್ಚೆ ನಡೆಸಿದ್ದಾರೆ. ಅಂತಿಮ ದೃಢೀಕರಣಕ್ಕೂ ಮುನ್ನ ಮುಂದಿನ ಸುತ್ತಿನ ಮಾತುಕತೆ ನಡೆಯುವ ಸಾಧ್ಯತೆಯಿದ್ದರೂ, ರಚಿತಾ ರಾಮ್ ಈ ಪ್ರಾಜೆಕ್ಟ್‌ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ನಾಗಶೇಖರ್ ಅವರು ತಮ್ಮ ನಾಗಶೇಖರ್ ಮೂವೀಸ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಈ ಯೋಜನೆಯನ್ನು ನಿರ್ಮಿಸಲಿದ್ದಾರೆ ಮತ್ತು ಈ ಚಿತ್ರವನ್ನು 2024ರ ದಸರಾ ಸಂದರ್ಭದಲ್ಲಿ ಬಿಡುಗಡೆ ಮಾಡಲು ಯೋಜಿಸಿದ್ದಾರೆ.
ಇದನ್ನೂ ಓದಿ: ಸಂಜು ವೆಡ್ಸ್ ಗೀತಾ 2 ಸಿನಿಮಾ ಘೋಷಣೆ: ಶ್ರೀನಗರ ಕಿಟ್ಟಿ ಜೊತೆಗೆ ರಮ್ಯಾ? ನಿರ್ದೇಶಕ ನಾಗಶೇಖರ್ ಹೇಳಿದ್ದೇನು?
ಈಮಧ್ಯೆ, ರಚಿತಾ ರಾಮ್ ಸದ್ಯ ರಿಯಾಲಿಟಿ ಶೋ 'ಮಿಸ್ಟರ್ ಬ್ಯಾಚುಲರ್'ನಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ದರ್ಶನ್ ಅಭಿನಯದ ಕ್ರಾಂತಿ ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ನಟಿ, ಮುಂಬರುವ ಚಿತ್ರವಾದ ಮ್ಯಾಟಿನಿಯಲ್ಲಿ ಸತೀಶ್ ನೀನಾಸಂ ಜೊತೆಗೆ ನಟಿಸಿದ್ದಾರೆ. ರಚಿತಾ ಅವರ ಬಳಿ ಕೃಷ್ಣ ಅಭಿನಯದ 'ಲವ್ ಮಿ or ಹೇಟ್ ಮಿಟ ಮತ್ತು ನಿರ್ಮಾಣದ ವಿವಿಧ ಹಂತಗಳಲ್ಲಿರುವ ಮಹಿಳಾ ಕೇಂದ್ರಿತ ಚಿತ್ರವಾದ 'ಶಬರಿ' ಕೂಡ ಇದೆ.