ಕೊರಟಾಲ ಶಿವ ನಿರ್ದೇಶನದ ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್ ಜೊತೆ ಬಾಲಿವುಡ್ ನಟಿ ಜಾಹ್ನವಿ ಕಪೂರ್
ನಿರ್ದೇಶಕ ಕೊರಟಾಲ ಶಿವ ಅವರ ಮುಂಬರುವ ಪ್ಯಾನ್-ಇಂಡಿಯಾ ಚಿತ್ರದಲ್ಲಿ ನಟಿ ಜಾಹ್ನವಿ ಕಪೂರ್ 'ಆರ್‌ಆರ್‌ಆರ್' ಖ್ಯಾತಿಯ ಜೂನಿಯರ್ ಎನ್‌ಟಿಆರ್ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ ಎಂದು ಚಿತ್ರತಂಡ ಸೋಮವಾರ ಘೋಷಿಸಿದ್ದಾರೆ.
Published: 06th March 2023 12:51 PM | Last Updated: 04th April 2023 02:05 PM | A+A A-

ಜಾಹ್ನವಿ ಕಪೂರ್- ಜೂನಿಯರ್ ಎನ್‌ಟಿಆರ್
ಹೈದರಾಬಾದ್: ನಿರ್ದೇಶಕ ಕೊರಟಾಲ ಶಿವ ಅವರ ಮುಂಬರುವ ಪ್ಯಾನ್-ಇಂಡಿಯಾ ಚಿತ್ರದಲ್ಲಿ ನಟಿ ಜಾಹ್ನವಿ ಕಪೂರ್ 'ಆರ್‌ಆರ್‌ಆರ್' ಖ್ಯಾತಿಯ ಜೂನಿಯರ್ ಎನ್‌ಟಿಆರ್ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ ಎಂದು ಚಿತ್ರತಂಡ ಸೋಮವಾರ ಘೋಷಿಸಿದ್ದಾರೆ.
ದಕ್ಷಿಣ ಭಾರತದ ಚಿತ್ರರಂಗದಲ್ಲಿ ಜಾಹ್ನವಿ ಕಪೂರ್ ಅವರು ಇದೇ ಮೊದಲ ಬಾರಿಗೆ ಪದಾರ್ಪಣೆ ಮಾಡುತ್ತಿದ್ದು, ಇನ್ನೂ ಹೆಸರಿಸದ ಈ ಸಿನಿಮಾ 2024ರ ಏಪ್ರಿಲ್ 5 ರಂದು ಬಿಡುಗಡೆಯಾಗಲಿದೆ.
ಪತ್ರಿಕಾ ಪ್ರಕಟಣೆ ಪ್ರಕಾರ, 'ಎನ್‌ಟಿಆರ್ 30' ಸಿನಿಮಾದಲ್ಲಿ 'ನಟಿ ಜಾನ್ವಿ ಕಪೂರ್' ತಮ್ಮ ಪ್ರತಿಭೆಯನ್ನು ದಕ್ಷಿಣ ಭಾರತದ ಸಿನಿಮಾಗಳಲ್ಲಿ ತೋರಿಸಲು ಸಿದ್ಧರಾಗಿದ್ದಾರೆ.
ಇಂದು 26ನೇ ವರ್ಷಕ್ಕೆ ಕಾಲಿಟ್ಟಿರುವ ನಟಿ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಪುಟದಲ್ಲಿ ಈ ಕುರಿತು ಖಚಿತಪಡಿಸಿದ್ದಾರೆ.
'ಇದು ಅಂತಿಮವಾಗಿ ನಡೆಯುತ್ತಿದೆ. ನನ್ನ ನೆಚ್ಚಿನ ಜೂನಿಯರ್ ಎನ್‌ಟಿಆರ್ ಜೊತೆಗೆ ಪ್ರಯಾಣಿಸಲು ಕಾಯಲು ಇನ್ನು ಸಾಧ್ಯವಿಲ್ಲ' ಎಂದು ಅವರು ಬರೆದಿದ್ದಾರೆ.
ಈ ಚಿತ್ರವು ಜೂನಿಯರ್ ಎನ್‌ಟಿಆರ್ ಅವರ 30ನೇ ಸಿನಿಮಾವಾಗಿದ್ದು, ಇದನ್ನು ಎನ್‌ಟಿಆರ್ ಆರ್ಟ್ಸ್‌ನ ಹರಿಕೃಷ್ಣ ಕೆ ಮತ್ತು ಯುವಸುಧಾ ಆರ್ಟ್ಸ್‌ನ ಸುಧಾಕರ್ ಮಿಕ್ಕಿಲಿನೇನಿ ನಿರ್ಮಿಸಲಿದ್ದಾರೆ.
ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಲಿದ್ದಾರೆ. ಆರ್ ರತ್ನವೇಲು ಛಾಯಾಗ್ರಹಣ, ಸಾಬು ಸಿರಿಲ್ ಕಲಾ ನಿರ್ದೇಶಕ ಮತ್ತು ಶ್ರೀಕರ್ ಪ್ರಸಾದ್ ಸಂಕಲನ ಚಿತ್ರಕ್ಕಿದೆ.
ಮಲಯಾಳಂ ಚಲನಚಿತ್ರ 'ಹೆಲೆನ್'ನ ಅಧಿಕೃತ ಹಿಂದಿ ರೂಪಾಂತರವಾದ 'ಮಿಲಿ' ನಲ್ಲಿ ಜಾಹ್ನವಿ ಕೊನೆಯದಾಗಿ ಕಾಣಿಸಿಕೊಂಡಿದ್ದರು.