ಡಾಲಿ ಧನಂಜಯ ಅಭಿನಯದ 'ಗುರುದೇವ್ ಹೊಯ್ಸಳ' ಚಿತ್ರದ ಟ್ರೈಲರ್ ಬಿಡುಗಡೆ

ಡಾಲಿ ಧನಂಜಯ ನಟನೆಯ ಬಹು ನಿರೀಕ್ಷಿತ ಗುರುದೇವ್‌ ಹೊಯ್ಸಳ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ರಗಡ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಧನಂಜಯ್ ಮಿಂಚಿದ್ದಾರೆ. 
ಗುರುದೇವ್ ಹೊಯ್ಸಳ ಚಿತ್ರದ ಟ್ರೈಲರ್
ಗುರುದೇವ್ ಹೊಯ್ಸಳ ಚಿತ್ರದ ಟ್ರೈಲರ್

ಬೆಂಗಳೂರು: ಡಾಲಿ ಧನಂಜಯ ನಟನೆಯ ಬಹು ನಿರೀಕ್ಷಿತ ಗುರುದೇವ್‌ ಹೊಯ್ಸಳ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ರಗಡ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಧನಂಜಯ್ ಮಿಂಚಿದ್ದಾರೆ. 

ಡಾಲಿ ಧನಂಜಯ್ ನಟನೆಯ 25ನೇ ಸಿನಿಮಾ ಹೊಯ್ಸಳ ಟ್ರೈಲರ್ ಇಂದು ಬಿಡುಗಡೆಯಾಗಿದ್ದು, ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟ ಸುದೀಪ್ ಹಾಗೂ ಇತರೆ ಗಣ್ಯರು ಟ್ರೈಲರ್ ಬಿಡುಗಡೆ ಮಾಡಿದರು. ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್​ನಲ್ಲಿ ಟ್ರೈಲರ್ ವೀಕ್ಷಣೆಗೆ ಲಭ್ಯವಿದೆ. 

ಹೊಯ್ಸಳನಿಗೆ ಜೋಡಿಯಾಗಿ ಅಮೃತಾ ಅಯ್ಯಂಗಾರ್ ಕಾಣಿಸಿಕೊಂಡಿದ್ದು, ಅಚ್ಯುತ್ ಕುಮಾರ್, ನವೀನ್ ಶಂಕರ್, ಅವಿನಾಶ್, ಪ್ರತಾಪ್ ನಾರಾಯಣ್, ರಾಜೇಶ್ ನಟರಂಗ, ನಾಗಭೂಷಣ್ ಹಾಗೂ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.  ಈ ಮೊದಲೇ ಬಿಡುಗಡೆ ಆಗಿದ್ದ ಪೋಸ್ಟರ್, ಟೀಸರ್​ಗಳಿಂದ ಇದೊಂದು ಪೊಲೀಸ್ ಅಧಿಕಾರಿಯ ಕತೆ ಎಂಬುದು ಪ್ರೇಕ್ಷಕರಿಗೆ ತಿಳಿದಿತ್ತು. 2:22 ನಿಮಿಷದ ಟ್ರೈಲರ್ ಇದಾಗಿದ್ದು, ಟ್ರೈಲರ್​ನಲ್ಲಿ ಡಾಲಿ ಧನಂಜಯ್ ಅಬ್ಬರಿಸಿದ್ದಾರೆ. 

ಟ್ರೈಲರ್​ನಲ್ಲಿ ಡಾಲಿ ಹೇಳುವ ಖಡಕ್ ಸಂಭಾಷಣೆಗಳು ಅವರ ಅವರ ಪಾತ್ರ ಎಷ್ಟು ರಗಡ್ ಆಗಿದೆ ಎಂಬುದನ್ನು ಅಂದಾಜಿಸಬಹುದಾಗಿದೆ.  ಇದೊಂದು ಸಾಮಾನ್ಯ ಪೊಲೀಸ್-ವಿಲನ್ ಕತೆ ಮಾತ್ರವೇ ಅಲ್ಲದೆ, ಭಾಷೆ-ನೆಲದ ವಿಷಯವನ್ನೂ ಸಿನಿಮಾ ಒಳಗೊಂಡಿರುವ ಕಥೆಯಾಗಿದೆ. ಟೀಸರ್​ನಲ್ಲಿದ್ದ ಕನ್ನಡ ಧ್ವಜ, ಸಂಗೊಳ್ಳಿ ರಾಯಣ್ಣ ಪ್ರತಿಮೆಗಳು ಟ್ರೈಲರ್​ನಲ್ಲಿಯೂ ಇವೆ. ಟ್ರೈಲರ್​ನಲ್ಲಿ ನಾಯಕ ಹಾಗೂ ವಿಲನ್​ಗಳ ಹೊರತಾಗಿ ಬೇರೆ ಪಾತ್ರಗಳಿಗೆ ಪ್ರಾಮುಖ್ಯತೆ ಕಡಿಮೆ. ಅದರಲ್ಲಿಯೂ ನಾಯಕಿ ಅಮೃತಾ ಅಯ್ಯಂಗಾರ್ ಕೆಲವೇ ಕ್ಷಣಗಳಲ್ಲಿ ಬಂದು ಮರೆಯಾಗುತ್ತಾರೆ.

ಕೆ.ಆರ್.ಜಿ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಯೋಗಿ. ಜಿ. ರಾಜ್ ಹಾಗೂ ಕಾರ್ತಿಕ್ ಗೌಡ ನಿರ್ಮಿಸಿರುವ ‘ಗುರುದೇವ್ ಹೊಯ್ಸಳ’ ಸಿನಿಮಾ ಇದೇ ಮಾರ್ಚ್ 30ರಂದು ವಿಶ್ವದಾದ್ಯಂತ ಕನ್ನಡ ಭಾಷೆಯಲ್ಲಿಯೇ ಬಿಡುಗಡೆಯಾಗಲಿದೆ. ಅಜನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com