'ಜಿಮ್ಮಿ'ಯೊಂದಿಗೆ ನಟನೆ ಮತ್ತು ನಿರ್ದೇಶನಕ್ಕೆ ಕಿಚ್ಚ ಸುದೀಪ್ ಸೋದರಳಿಯ ಪದಾರ್ಪಣೆ!

ಸುದೀಪ್ ಅವರ ಸೋದರಳಿಯ ಸಂಚಿತ್ ಸಂಜೀವ್ ಅವರು ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಸಜ್ಜಾಗಿದ್ದಾರೆ. ಸಂಚಿತ್ ತಮ್ಮ ಮೊದಲ ಪ್ರಾಜೆಕ್ಟ್‌ನಲ್ಲಿ ನಟನೆ ಮತ್ತು ನಿರ್ದೇಶನದ ಎರಡು ಜವಾಬ್ದಾರಿಗಳನ್ನು ನಿಭಾಯಿಸಲು ಸಿದ್ಧರಾಗುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಂಚಿತ್ ಸಂಜೀವ್
ಸಂಚಿತ್ ಸಂಜೀವ್
Updated on

ಸುದೀಪ್ ಅವರ ಸೋದರಳಿಯ ಸಂಚಿತ್ ಸಂಜೀವ್ ಅವರು ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಸಜ್ಜಾಗಿದ್ದಾರೆ. ಸಂಚಿತ್ ತಮ್ಮ ಮೊದಲ ಪ್ರಾಜೆಕ್ಟ್‌ನಲ್ಲಿ ನಟನೆ ಮತ್ತು ನಿರ್ದೇಶನದ ಎರಡು ಜವಾಬ್ದಾರಿಗಳನ್ನು ನಿಭಾಯಿಸಲು ಸಿದ್ಧರಾಗುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸದ್ಯ ಪ್ರೀ-ಪ್ರೊಡಕ್ಷನ್ ಹಂತದಲ್ಲಿರುವ ಸಿನಿಮಾಗೆ 'ಜಿಮ್ಮಿ' ಎಂದು ಹೆಸರಿಡಲಾಗಿದೆ ಎನ್ನಲಾಗಿದೆ. ಆದರೆ, ಅಧಿಕೃತವಾಗಿ ಸ್ಪಷ್ಟವಾಗಿಲ್ಲ. ನಟನ ಚೊಚ್ಚಲ ಸಿನಿಮಾವನ್ನು ನಿರ್ದೇಶಕ ಜಯತೀರ್ಥ ನಿರ್ದೇಶಿಸಲಿದ್ದಾರೆ ಎನ್ನಲಾಗಿತ್ತು. ಆದರೆ, ಕಿರುಚಿತ್ರಗಳು, ಜಾಹೀರಾತುಗಳಲ್ಲಿ ತೆರೆಮರೆಯಲ್ಲಿ ಕೆಲಸ ಮಾಡಿರುವ, ಕಿಚ್ಚ ಪ್ರೊಡಕ್ಷನ್ ಹೌಸ್‌ನೊಂದಿಗೆ ಸಂಬಂಧ ಹೊಂದಿರುವ ಸಂಚಿತ್ ಈಗ 'ಜಿಮ್ಮಿ' ಮೇಲೆ ಗಮನ ಕೇಂದ್ರೀಕರಿಸಲಿದ್ದಾರೆ ಎಂಬುದು ಸ್ಪಷ್ಟವಾಗಿದೆ.

ಸಂಚಿತ್ ನ್ಯೂಯಾರ್ಕ್ ಅಕಾಡೆಮಿಯಲ್ಲಿ ಚಲನಚಿತ್ರ ನಿರ್ಮಾಣ, ನಟನೆ ಮತ್ತು ಛಾಯಾಗ್ರಹಣವನ್ನು ಕಲಿತಿದ್ದಾರೆ ಮತ್ತು ಎಂಎಂಎ ಫೈಟಿಂಗ್‌ನಲ್ಲಿ ತರಬೇತಿ ಪಡೆದಿದ್ದಾರೆ. ದೊಡ್ಡ ಫೈಟ್‌ಗಳು ಮತ್ತು ಸಾಕಷ್ಟು ಹಾಡುಗಳನ್ನು ಹೊಂದಿರುವ ಸಾಮಾನ್ಯ ಕಮರ್ಷಿಯಲ್ ಚಿತ್ರಗಳಲ್ಲಿ ನಟಿಸಲು ಬಯಸುವುದಿಲ್ಲ. ಬದಲಿಗೆ, ನಮಗೆ ಈ ಹಿಂದೆ ನೀಡಿದ ಸಂದರ್ಶನದಲ್ಲಿ, ತಮ್ಮ ಪಾತ್ರವು ಕಥೆಯನ್ನು ನಿರ್ಧರಿಸಬೇಕು. ಇದು ಪ್ರಸ್ತುತ ಪ್ರವೃತ್ತಿಯನ್ನು ಸೂಚಿಸುತ್ತದೆ. ಪ್ರೇಕ್ಷಕರಿಗೆ ರುಚಿಸುವಂತೆ ಮಾಡಲು ಸರಿಯಾದ ಸ್ಕ್ರಿಪ್ಟ್ ಅನ್ನು ಆಯ್ಕೆ ಮಾಡಬೇಕು ಎನ್ನುತ್ತಾರೆ.

ಯೋಜನೆಯನ್ನು ದೊಡ್ಡ ರೀತಿಯಲ್ಲಿ ಪ್ರಾರಂಭಿಸಲು ಚಿತ್ರತಂಡ ನಿರ್ಧರಿಸಿದ್ದು, ಪಾತ್ರವರ್ಗ, ಸಿಬ್ಬಂದಿ ಮತ್ತು ಪ್ರಕಾರದ ಕುರಿತು ಪ್ರಕಟಣೆಯನ್ನು ಶೀಘ್ರದಲ್ಲೇ ನಿರೀಕ್ಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com