ಇನ್ಮುಂದೆ ಪುಷ್ಪ ಸಿನಿಮಾದ 'ಸಾಮಿ ಸಾಮಿ' ಹಾಡಿಗೆ ನೃತ್ಯ ಮಾಡುವುದಿಲ್ಲ ಎಂದ ರಶ್ಮಿಕಾ ಮಂದಣ್ಣ
ಇನ್ಮುಂದೆ 'ಪುಷ್ಪ: ದಿ ರೈಸ್' ಚಿತ್ರದ ಜನಪ್ರಿಯ 'ಸಾಮಿ ಸಾಮಿ' ಹಾಡಿಗೆ ನೃತ್ಯ ಮಾಡುವುದಿಲ್ಲ ಎಂದು ನಟಿ ರಶ್ಮಿಕಾ ಮಂದಣ್ಣ ರಶ್ಮಿಕಾ ತಮ್ಮ ಅಭಿಮಾನಿಗಳೊಂದಿಗೆ ಸಂವಾದ ನಡೆಸುವ ವೇಳೆ ಹೇಳಿದ್ದಾರೆ.
Published: 24th March 2023 11:18 AM | Last Updated: 24th March 2023 04:08 PM | A+A A-

ಪುಷ್ಫ ಸಿನಿಮಾದ ಸಾಮಿ ಸಾಮಿ ಹಾಡಿನ ದೃಶ್ಯ
ಮುಂಬೈ: ಇನ್ಮುಂದೆ 'ಪುಷ್ಪ: ದಿ ರೈಸ್' ಚಿತ್ರದ ಜನಪ್ರಿಯ 'ಸಾಮಿ ಸಾಮಿ' ಹಾಡಿಗೆ ನೃತ್ಯ ಮಾಡುವುದಿಲ್ಲ ಎಂದು ನಟಿ ರಶ್ಮಿಕಾ ಮಂದಣ್ಣ ರಶ್ಮಿಕಾ ತಮ್ಮ ಅಭಿಮಾನಿಗಳೊಂದಿಗೆ ಸಂವಾದ ನಡೆಸುವ ವೇಳೆ ಹೇಳಿದ್ದಾರೆ.
ತಮ್ಮ ಪ್ರಸಿದ್ಧ 'ಸಾಮಿ ಸಾಮಿ' ಹಾಡಿಗೆ ರಶ್ಮಿಕಾರೊಂದಿಗೆ ತಾನು ಡ್ಯಾನ್ಸ್ ಮಾಡಲು ಇಷ್ಟಪಡುತ್ತೇನೆ ಎಂದು ಅಭಿಮಾನಿಯೊಬ್ಬರು ಹೇಳಿದಾಗ, ರಶ್ಮಿಕಾ ಅವರು ತಾವು ಈ ಹಾಡಿಗೆ ಹಲವಾರು ಬಾರಿ ನೃತ್ಯ ಮಾಡಿದ್ದಾಗಿ ತಿಳಿಸಿದ್ದಾರೆ.
'ನಾನು ಸಾಮಿ ಸಾಮಿ ಸ್ಟೆಪ್ ಅನ್ನು ಹಲವು ಬಾರಿ ಮಾಡಿದ್ದೇನೆ.. ಈಗ ನನಗೆ ವಯಸ್ಸಾದಂತೆ, ನನ್ನ ಬೆನ್ನಿಗೆ ಸಮಸ್ಯೆಗಳಾಗುತ್ತವೆ ಎಂದು ನನಗೆ ಅನಿಸುತ್ತದೆ.. ನೀವು ಇದನ್ನೇ ಏಕೆ ನನಗೆ ಕೇಳುತ್ತೀರಿ.. ?? ಇಲ್ಲವೆಂದರೆ ನಾನು ಭೇಟಿಯಾದಾಗ ಬೇರೆ ಏನಾದರೂ ಮಾಡೋಣ' ಎಂದು ರಶ್ಮಿಕಾ ಉತ್ತರಿಸಿದ್ದಾರೆ.
ನೀವು ದಳಪತಿ ವಿಜಯ್ ಅವರೊಂದಿಗೆ ಕೆಲಸ ಮಾಡುತ್ತಿದ್ದೀರಾ ಎಂದು ಅವರನ್ನು ಕೇಳಲಾಯಿತು. ಅದಕ್ಕೆ ರಶ್ಮಿಕಾ ಅವರು ಅದನ್ನು ಎದುರು ನೋಡುತ್ತಿರುವುದಾಗಿ ತಿಳಿಸಿದರು.
ಇದನ್ನೂ ಓದಿ: ರಶ್ಮಿಕಾ ಇಷ್ಟ ಅಂತ ನಾನು ಯಾವಾಗ ಹೇಳಿದೆ? ವೈರಲ್ ಸುದ್ದಿಗೆ ಕ್ರಿಕೆಟಿಗ ಶುಭ್‍ಮನ್ ಗಿಲ್ ಸಿಟ್ಟು
ನೀವು ಮಲಯಾಳಂ ಸಿನಿಮಾವನ್ನು ಇಷ್ಟಪಡುತ್ತೀರಾ ಎಂದು ಒಬ್ಬರು ಕೇಳಿದ್ದಕ್ಕೆ ಉತ್ತರಿಸಿದ ರಶ್ಮಿಕಾ, 'ನೀವು ತಮಾಷೆ ಮಾಡುತ್ತಿದ್ದೀರಾ.. ಲವ್ ಮಲಯಾಳಂ ಸಿನಿಮಾ.. ಮಲಯಾಳಂ ಚಿತ್ರಗಳು ತುಂಬಾ ಪರಿಶುದ್ಧವಾಗಿವೆ ಮತ್ತು ಜನರು ಸಂಪೂರ್ಣವಾಗಿ ಪ್ರೀತಿಸುತ್ತಾರೆ' ಎಂದರು.
ಪ್ರಶಸ್ತಿ ಸಮಾರಂಭವೊಂದರಲ್ಲಿ ಲಾವಣಿ ಪ್ರದರ್ಶನದ ಬಗ್ಗೆ ಕೇಳಿದ ಅಭಿಮಾನಿಯೊಬ್ಬರಿಗೆ ಉತ್ತರಿಸಿದ ಅವರು, ಮರಾಠಿಯನ್ನು ಸ್ವಲ್ಪ ಸ್ವಲ್ಪ ಮಾತನಾಡುವುದಾಗಿ ತಿಳಿಸಿದರು.
'ಇದು ಅತಿವಾಸ್ತವಿಕವಾಗಿತ್ತು. ಕೆಲವು ಹೊಸ ಮರಾಠಿ ಪದಗುಚ್ಛಗಳನ್ನು ಚೆನ್ನಾಗಿ ಕಲಿತಿದ್ದೇನೆ.. ಶೀಘ್ರದಲ್ಲೇ ನಾನು ಸ್ವಲ್ಪ ಸ್ವಲ್ಪ ಮಾತನಾಡಲು ಪ್ರಯತ್ನಿಸುತ್ತೇನೆ.. ?? ಆಶಾದಾಯಕವಾಗಿ!' ಎಂದು ರಶ್ಮಿಕಾ ಹೇಳಿದರು.
ರಶ್ಮಿಕಾ ಈಗ ಅಲ್ಲು ಅರ್ಜುನ್ ಅಭಿನಯದ 'ಪುಷ್ಪ: ದಿ ರೂಲ್' ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.