ಅರವಿಂದ್ ಕುಪ್ಲಿಕರ್ ನಿರ್ದೇಶನದ ಚಿತ್ರಕ್ಕೆ ಯೋಗಿ ದ್ವಾರಕೀಶ್ ಬಂಡವಾಳ ಹೂಡಿಕೆ, ಶರಣ್- ಅಮೃತಾ ಅಯ್ಯಂಗಾರ್ ಜೋಡಿ

2021ರ 'ಪುಕ್ಸಟ್ಟೆ ಲೈಫು ಪುರ್‌ಸೊತ್ತೇ ಇಲ್ಲ' ಚಿತ್ರದ ನಿರ್ದೇಶಕ ಅರವಿಂದ್ ಕುಪ್ಲಿಕರ್ ಅವರ ಮುಂದಿನ ಸಿನಿಮಾಗೆ ಚೌಕ ಚಿತ್ರದ ನಿರ್ಮಾಪಕ ಯೋಗಿ ದ್ವಾರಕೀಶ್ ಬಂಗಲೆ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. ಚಿತ್ರದಲ್ಲಿ ಶರಣ್ ಮತ್ತು ಅಮೃತಾ ಅಯ್ಯಂಗಾರ್ ನಟಿಸಲಿದ್ದಾರೆ.
ಯೋಗಿ ದ್ವಾರಕೀಶ್- ಅರವಿಂದ್ ಕುಪ್ಲಿಕರ್- ಶರಣ್
ಯೋಗಿ ದ್ವಾರಕೀಶ್- ಅರವಿಂದ್ ಕುಪ್ಲಿಕರ್- ಶರಣ್

2021ರ 'ಪುಕ್ಸಟ್ಟೆ ಲೈಫು ಪುರ್‌ಸೊತ್ತೇ ಇಲ್ಲ' ಚಿತ್ರದ ನಿರ್ದೇಶಕ ಅರವಿಂದ್ ಕುಪ್ಲಿಕರ್ ಅವರೊಂದಿಗೆ ನಟ ಶರಣ್ ಕೆಲಸ ಮಾಡುತ್ತಿದ್ದಾರೆ ಎಂದು ನಾವು ಈ ಹಿಂದೆ ವರದಿ ಮಾಡಿದ್ದೆವು. ಇತ್ತೀಚಿನ ಸುದ್ದಿ ಏನೆಂದರೆ, ಚೌಕ ಚಿತ್ರದ ನಿರ್ಮಾಪಕ ಯೋಗಿ ದ್ವಾರಕೀಶ್ ಬಂಗಲೆ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ.

ಯೋಗಿ ದ್ವಾರಕೀಶ್ ಅವರು ಈ ಯೋಜನೆಯನ್ನು ನಿರ್ಮಿಸಲು ಉತ್ಸುಕರಾಗಿದ್ದು, ಈ ಅವಕಾಶವನ್ನು ತರುಣ್ ಕಿಶೋರ್ ಸುಧೀರ್ (ಶರಣ್ ಅವರ ಚಲನಚಿತ್ರಗಳ ಕ್ರಿಯೇಟಿವ್ ಹೆಡ್) ತಮಗೆ ನೀಡಿದ್ದಾರೆ ಎಂದು ಹೇಳಿದ್ದಾರೆ. 'ನಿರ್ದೇಶಕರಿಂದ ಕಥೆಯನ್ನು ಕೇಳಿದ ನಂತರ, ಇದು ಸುಂದರವಾಗಿ ಬರೆದ ಕಥಾವಸ್ತು ಮತ್ತು ಉತ್ತಮ ಹಾಸ್ಯದೊಂದಿಗೆ ವಿಶಿಷ್ಟ ಮತ್ತು ವಿಭಿನ್ನವಾಗಿದೆ ಎಂದು ನನಗೆ ಅನಿಸಿತು. ಹಾಗಾಗಿ ಸಿನಿಮಾ ನಿರ್ಮಾಣ ಮಾಡಲು ನಿರ್ಧರಿಸಿದ್ದೇನೆ' ಎಂದು ಹೇಳಿದ್ದಾರೆ.

ಅರವಿಂದ್ ಕುಪ್ಲಿಕರ್ ಅವರ ಚೊಚ್ಚಲ ಚಿತ್ರವಾದ ಪುಕ್ಸಟ್ಟೆ ಲೈಫು ಪುರ್‌ಸೊತ್ತೇ ಇಲ್ಲ ಅನ್ನು ಯೋಗಿ ವೀಕ್ಷಿಸಿದ್ದರು ಮತ್ತು ಸರಳ ಕಥೆಯಾಗಿದ್ದರೂ ಅದರ ಬುದ್ಧಿವಂತ ಪರಿಕಲ್ಪನೆ ಮತ್ತು ಚಿತ್ರಕಥೆಯಿಂದ ಪ್ರಭಾವಿತರಾಗಿದ್ದರು. ಈ ಆಸಕ್ತಿದಾಯಕ ಸಿನಿಮಾಗೆ ನಿರ್ದೇಶಕರೊಂದಿಗೆ ಸಹಕರಿಸಲು ತಾವೀಗ ಸಂತೋಷಗೊಂಡಿರುವುದಾಗಿ ತಿಳಿಸಿದ್ದಾರೆ.

ಸಿನಿಮಾ ಎಕ್ಸ್‌ಪ್ರೆಸ್‌ ಜೊತೆಗಿನ ಹಿಂದಿನ ಸಂದರ್ಶನದಲ್ಲಿ, ಇನ್ನೂ ಹೆಸರಿಸದ ಚಲನಚಿತ್ರವು ನೈಜ ಘಟನೆಯ ಸುತ್ತ ಸುತ್ತುತ್ತದೆ. ಶರಣ್ ಚಿತ್ರದಲ್ಲಿ ಎಲೆಕ್ಟ್ರಿಷಿಯನ್ ಪಾತ್ರದಲ್ಲಿ ನಟಿಸಿದ್ದಾರೆ ಮತ್ತು ಅಮೃತಾ ಅಯ್ಯಂಗಾರ್ ನಾಯಕಿಯಾಗಿದ್ದಾರೆ ಎಂದು ಅರವಿಂದ್ ಬಹಿರಂಗಪಡಿಸಿದ್ದರು. ಚಿತ್ರದಲ್ಲಿ ಶರಣ್ ಎಲೆಕ್ಟ್ರೀಷಿಯನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದು ರಾಜಕೀಯ ವಿಡಂಬನೆಯಾಗಿದ್ದು, ಉತ್ತರ ಕರ್ನಾಟಕದ ಬಾಗಲಕೋಟೆಯ ಭೌಗೋಳಿಕತೆಯಲ್ಲಿನ ಸಾಮಾಜಿಕ ಸಮಸ್ಯೆಯನ್ನು ಆಧರಿಸಿದೆ. ಇದೊಂದು ಕಾಲ್ಪನಿಕ ಕಥಾವಸ್ತುವಾಗಿದ್ದು, ಕೃಷ್ಣಾ ಮೇಲ್ದಂಡೆ ಯೋಜನೆಯ ಪರಿಣಾಮವಾಗಿ ಸುಮಾರು 20 ಹಳ್ಳಿಗಳು ಮುಳುಗಡೆ ಪ್ರದೇಶಕ್ಕೆ ಬಂದವು ಮತ್ತು ಕೃಷಿ ಭೂಮಿಯನ್ನು ಹೊಂದಿದ್ದ ಜನರ ಮೇಲೆ ಅದರ ಪ್ರಭಾವದ ಕುರಿತಾದ ಕಥೆಯನ್ನು ಚಿತ್ರ ಹೊಂದಿದೆ ಎಂದಿದ್ದರು. 

ಚಿತ್ರದಲ್ಲಿ ಅಚ್ಯುತ್ ಕುಮಾರ್, ರಂಗಾಯಣ ರಘು ಮತ್ತು ರಾಜು ತಾಳಿಕೋಟೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅದ್ವೈತ ಗುರುಮೂರ್ತಿ ಛಾಯಾಗ್ರಹಣವನ್ನು ನಿಭಾಯಿಸುತ್ತಿದ್ದಾರೆ ಮತ್ತು ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com