ಶಿವರಾಜಕುಮಾರ್-ನರ್ತನ್ ಕಾಂಬಿನೇಶನ್ ನ 'ಭೈರತಿ ರಣಗಲ್'ಗೆ ನಾಳೆ ಅದ್ಧೂರಿ ಮೂಹೂರ್ತ
ಶಿವರಾಜ್‌ಕುಮಾರ್ ಮತ್ತು ನರ್ತನ್ ಕಾಂಬಿನೇಶನಲ್ಲಿ ಮತ್ತೊಂದು ಚಿತ್ರದ ನಿರ್ಮಾಣವಾಗುತ್ತಿದೆ ಎಂಬ ಸುದ್ದಿ ಕೆಲವು ಸಮಯದಿಂದ ಸುದ್ದಿಯಲ್ಲಿದೆ. ಈ ಚಿತ್ರವನ್ನು ಗೀತಾ ಪಿಕ್ಚರ್ಸ್ ಅಡಿಯಲ್ಲಿ ನಿರ್ಮಾಣವಾಗಲಿದ್ದು ಚಿತ್ರತಂಡದಿಂದ ಹೊಸ ಅಪ್ ಡೇಟ್ ಹೊರಬಂದಿದೆ.
Published: 25th May 2023 11:12 AM | Last Updated: 25th May 2023 06:15 PM | A+A A-

ಭೈರತಿ ರಣಗಲ್
ಶಿವರಾಜ್‌ಕುಮಾರ್ ಮತ್ತು ನರ್ತನ್ ಕಾಂಬಿನೇಶನಲ್ಲಿ ಮತ್ತೊಂದು ಚಿತ್ರದ ನಿರ್ಮಾಣವಾಗುತ್ತಿದೆ ಎಂಬ ಸುದ್ದಿ ಕೆಲವು ಸಮಯದಿಂದ ಸುದ್ದಿಯಲ್ಲಿದೆ. ಈ ಚಿತ್ರವನ್ನು ಗೀತಾ ಪಿಕ್ಚರ್ಸ್ ಅಡಿಯಲ್ಲಿ ನಿರ್ಮಾಣವಾಗಲಿದ್ದು ಚಿತ್ರತಂಡದಿಂದ ಹೊಸ ಅಪ್ ಡೇಟ್ ಹೊರಬಂದಿದೆ.
2017ರ ಬ್ಲಾಕ್ ಬಸ್ಟರ್ ಚಿತ್ರ ಮುಫ್ತಿ ಮುಂದುವರಿದ ಭಾಗವಾಗಿರುವ ಈ ಚಿತ್ರವು ನಾಳೆ (ಮೇ 26) ಅದ್ಧೂರಿ ಮುಹೂರ್ತದೊಂದಿಗೆ ಅಧಿಕೃತವಾಗಿ ಲಾಂಚ್ ಆಗಲಿದೆ. ಮುಂದುವರಿದ ಭಾಗಕ್ಕೆ ಶಿವರಾಜ್‌ಕುಮಾರ್ ಪಾತ್ರದ ಹೆಸರನ್ನು ಇಡಲಾಗಿದೆ. ಭೈರತಿ ರಣಗಲ್‌ನ ಮೂಲ ಕಥೆಯನ್ನು ಕೇಂದ್ರೀಕರಿಸುತ್ತದೆ. ಮುಫ್ತಿಯಲ್ಲಿ ತಮ್ಮ ಪಾತ್ರಗಳನ್ನು ಪುನರಾವರ್ತಿಸಲು ದೇವರಾಜ್, ಮಧು ಗುರುಸ್ವಾಮಿ, ವಸಿಷ್ಟ ಸಿಂಹ ಮತ್ತು ಬಾಬು ಹಿರಣ್ಣಯ್ಯ ಅವರು ಮತ್ತೆ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಹಿಂದೆ ಮಫ್ತಿಯಲ್ಲಿ ಕೆಲಸ ಮಾಡಿದ್ದ ಸಂಗೀತ ನಿರ್ದೇಶಕ ರವಿ ಬಸ್ರೂರ್ ಮತ್ತು ಛಾಯಾಗ್ರಾಹಕ ನವೀನ್ ಕುಮಾರ್ ಅವರು ನರ್ತನ್ ಅವರ ಎರಡನೇ ಚಿತ್ರಕ್ಕೆ ಕೈಜೋಡಿಸಲಿದ್ದಾರೆ. ಸ್ಯಾಂಡಲ್‌ವುಡ್‌ನ ಅತ್ಯಂತ ಬ್ಯುಸಿ ನಟರಲ್ಲಿ ಒಬ್ಬರಾದ ಶಿವರಾಜ್‌ಕುಮಾರ್ ಪ್ರಸ್ತುತ ಶ್ರೀನಿ ನಿರ್ದೇಶನದ ಘೋಸ್ಟ್ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸುತ್ತಿದ್ದಾರೆ. ಅವರು ಜೂನ್ 10ರಿಂದ ಭೈರತಿ ರಣಗಲ್ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದನ್ನೂ ಓದಿ: ಸುದೀಪ್ ಅಭಿಮಾನಿಗಳಿಗೆ ಗುಡ್ ನ್ಯೂಸ್: 'ಕಬಾಲಿ' ನಿರ್ಮಾಪಕರ ಜೊತೆ ಕಿಚ್ಚನ 46ನೇ ಸಿನಿಮಾ!
ಶಿವರಾಜ್ ಕುಮಾರ್ ಅವರು ಯೋಗರಾಜ್ ಭಟ್ ನಿರ್ದೇಶನದ ಕರಟಕ ಧಮನಕ ಮತ್ತು ಚೊಚ್ಚಲ ನಿರ್ದೇಶಕ ಅರ್ಜುನ್ ಜನ್ಯ ಅವರ 45 ರಲ್ಲೂ ಅಭಿನಯಿಸುತ್ತಿದ್ದಾರೆ. ಇದೇ ಅಲ್ಲದೆ ರಜನಿಕಾಂತ್ ಜೊತೆಗಿನ ಜೈಲರ್ ಮತ್ತು ಧನುಷ್ ಅವರೊಂದಿಗೆ ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಈ ಚಿತ್ರಗಳ ನಿರ್ಮಾಣ ವಿವಿಧ ಹಂತಗಳಲ್ಲಿದೆ. ಶಿವಣ್ಣ ಇತ್ತೀಚೆಗೆ ತೆಲುಗು ಸೂಪರ್‌ಸ್ಟಾರ್ ಬಾಲಕೃಷ್ಣ ಅವರೊಂದಿಗೆ ಪ್ರಾಜೆಕ್ಟ್‌ಗಾಗಿ ತಮ್ಮ ಸಹಯೋಗವನ್ನು ಘೋಷಿಸಿದರು.