ಭೈರತಿ ರಣಗಲ್ ಪಾತ್ರವು ನನ್ನ ಹೃದಯಕ್ಕೆ ಹತ್ತಿರವಾಗಿದೆ: ನಟ ಶಿವರಾಜಕುಮಾರ್
ನರ್ತನ್ ನಿರ್ದೇಶನದ ಮತ್ತು ಶಿವರಾಜಕುಮಾರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಭೈರತಿ ರಣಗಲ್ ಸನಿಮಾಗೆ ಶುಕ್ರವಾರ ಅಧಿಕೃತವಾಗಿ ಸೆಟ್ಟೇರಿತು. ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸುತ್ತಿರುವ ನಿರ್ಮಾಪಕಿ ಗೀತಾ ಶಿವರಾಜಕುಮಾರ್ ಅವರು ಮುಹೂರ್ತ ಸಮಾರಂಭದಲ್ಲಿ ಪಾಲ್ಗೊಂಡರು.
Published: 27th May 2023 10:41 AM | Last Updated: 27th May 2023 10:41 AM | A+A A-

ಭೈರತಿ ರಣಗಲ್ ಮುಹೂರ್ತ ಕಾರ್ಯಕ್ರಮದಲ್ಲಿ ನಟ ಶಿವರಾಜ್‌ಕುಮಾರ್, ನಿರ್ಮಾಪಕಿ ಗೀತಾ ಶಿವರಾಜ್‌ಕುಮಾರ್, ಪುತ್ರಿ ನಿವೇದಿತಾ
ನರ್ತನ್ ನಿರ್ದೇಶನದ ಮತ್ತು ಶಿವರಾಜಕುಮಾರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಭೈರತಿ ರಣಗಲ್ ಸನಿಮಾಗೆ ಶುಕ್ರವಾರ ಅಧಿಕೃತವಾಗಿ ಸೆಟ್ಟೇರಿತು. ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸುತ್ತಿರುವ ನಿರ್ಮಾಪಕಿ ಗೀತಾ ಶಿವರಾಜಕುಮಾರ್ ಅವರು ತಮ್ಮ ಪುತ್ರಿ ನಿವೇದಿತಾ ಶಿವರಾಜಕುಮಾರ್, ಕೆಪಿ ಶ್ರೀಕಾಂತ್ ಮತ್ತು ಉಳಿದ ಚಿತ್ರತಂಡದೊಂದಿಗೆ ಮುಹೂರ್ತ ಸಮಾರಂಭದಲ್ಲಿ ಪಾಲ್ಗೊಂಡರು.
2017ರಲ್ಲಿ ಶ್ರೀಮುರಳಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ‘ಮಫ್ತಿ’ ಸಿನಿಮಾದಲ್ಲಿ ಶಿವಣ್ಣ ನಿರ್ವಹಿಸಿದ್ದ `ಭೈರತಿ ರಣಗಲ್’ ಪಾತ್ರ ಸೂಪರ್ ಹಿಟ್ ಆಗಿತ್ತು. ಈಗ ಅದೇ ಪಾತ್ರವನ್ನು ಪ್ರಧಾನವಾಗಿರಿಸಿಕೊಂಡು ಸಿನಿಮಾ ತೆರೆಗೆ ಬರುತ್ತಿದ್ದು, ಪಾತ್ರದ ಹೆಸರಾದ `ಭೈರತಿ ರಣಗಲ್’ ಅನ್ನು ಸಿನಿಮಾದ ಶೀರ್ಷಿಕೆಯನ್ನಾಗಿ ಮಾಡಲಾಗಿದೆ. ಭೈರತಿ ರಣಗಲ್ 'ಮಫ್ತಿ' ಚಿತ್ರದ ಪ್ರೀಕ್ವೆಲ್ ಆಗಿದ್ದು, ಚಿತ್ರವನ್ನು ನರ್ತನ್ ನಿರ್ದೇಶನ ಮಾಡಲಿದ್ದಾರೆ.
ಈ ಹೊಸ ಕಥೆಯು ಪಾತ್ರದ ಮೂಲದ ಸುತ್ತ ಸುತ್ತುತ್ತದೆ ಮತ್ತು ಮಫ್ತಿಗೆ ಪೂರ್ವಭಾವಿಯಾಗಿ ಕಾರ್ಯನಿರ್ವಹಿಸುತ್ತದೆ. ರವಿ ಬಸ್ರೂರ್ ಸಂಗೀತ ನಿರ್ದೇಶನ, ನವೀನ್ ಕುಮಾರ್ ಛಾಯಾಗ್ರಹಣ ಮತ್ತು ಶಿವಕುಮಾರ್ ಕಲಾ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಚಿತ್ರತಂಡ ಘೋಷಿಸಿತು.
ಇದನ್ನೂ ಓದಿ: ಮಫ್ತಿ ನಿರ್ದೇಶಕ ನರ್ತನ್ ಜೊತೆ ಕೊನೆಗೂ 'ಭೈರತಿ ರಣಗಲ್' ಅವತಾರದಲ್ಲಿ ಶಿವಣ್ಣ ಎಂಟ್ರಿಗೆ ಮುಹೂರ್ತ ಫಿಕ್ಸ್
ತಮ್ಮ ನೆಚ್ಚಿನ ಪಾತ್ರವಾದ ಭೈರತಿ ರಣಗಲ್ ಅನ್ನು ಪುನರಾವರ್ತಿಸುವ ಬಗ್ಗೆ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದ ಶಿವರಾಜ್‌ಕುಮಾರ್, 'ಮಫ್ತಿ ಸಿನಿಮಾ ತೆರೆಕಂಡು ಆರು ವರ್ಷಗಳು ಕಳೆದಿವೆ. ಆದರೆ, ಅದರಲ್ಲಿನ ಆ ಪಾತ್ರವು ನನ್ನ ಹೃದಯಕ್ಕೆ ಹತ್ತಿರವಾಗಿದೆ. ನರ್ತನ್ ಆಕರ್ಷಕ ಕಥೆಯನ್ನು ಹೆಣೆದಿದ್ದಾರೆ. ಇದು ಪ್ರೀಕ್ವೆಲ್ ಆಗಿರುವುದರಿಂದ, ನನ್ನ ನೋಟವೂ ವಿಭಿನ್ನವಾಗಿರುತ್ತದೆ ಎನ್ನುತ್ತಾರೆ.