ಮಳೆ ಹುಡುಗಿಗೆ ಕೂಡಿ ಬಂದ ಕಂಕಣ ಭಾಗ್ಯ: ಪ್ರೀತಿಸಿದ ಯುವಕನ ಜೊತೆ ಹಸೆಮಣೆ ಏರಲಿದ್ದಾರೆ ಪೂಜಾ ಗಾಂಧಿ!

ಮುಂಗಾರು ಮಳೆ ಖ್ಯಾತಿಯ ನಟಿ ಪೂಜಾ ಗಾಂಧಿ ಮದುವೆ ಆಗುತ್ತಿದ್ದಾರೆ. ತಾನು ಪ್ರೀತಿಸಿದ ಯುವಕನ ಜೊತೆಗೆ ಹಸೆಮಣೆ ಏರಲು ಮುಂದಾಗಿದ್ದಾರೆ.
ನಟಿ ಪೂಜಾ ಗಾಂಧಿ ವಿವಾಹ
ನಟಿ ಪೂಜಾ ಗಾಂಧಿ ವಿವಾಹ

ಮುಂಗಾರು ಮಳೆ ಖ್ಯಾತಿಯ ನಟಿ ಪೂಜಾ ಗಾಂಧಿ ಮದುವೆ ಆಗುತ್ತಿದ್ದಾರೆ. ತಾನು ಪ್ರೀತಿಸಿದ ಯುವಕನ ಜೊತೆಗೆ ಹಸೆಮಣೆ ಏರಲು ಮುಂದಾಗಿದ್ದಾರೆ.

ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಮನಗೆದ್ದಿರುವ ನಟಿ ಪೂಜಾ ಗಾಂಧಿ, ಕನ್ನಡವನ್ನು ಕಲಿತು ಭೇಷ್ ಎನಿಸಿಕೊಂಡಿದ್ದಾರೆ. ಒಂದು ಸಮಯದಲ್ಲಿ ಕನ್ನಡದಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಹೆಚ್ಚಿಸಿಕೊಂಡಿದ್ದ ನಟಿಮಣಿ ಮತ್ತು ರಾಜಕಾರಣಕ್ಕೂ ಎಂಟ್ರಿ ಕೊಟ್ಟಿದ್ದರು. ಇದೀಗ ಕನ್ನಡಿಗನ ಕೈ ಹಿಡಿದು ಕರ್ನಾಟಕದ ಸೊಸೆ‌ ಆಗಲು ಉತ್ತರ ಭಾರತದ ಬೆಡಗಿ ಪೂಜಾ ಗಾಂಧಿ ಮುಂದಾಗಿದ್ದಾರೆ.

ಮುಂಗಾರು ಮಳೆ ಖ್ಯಾತಿಯ ನಟಿ ಪೂಜಾ ಗಾಂಧಿ ಮದುವೆ ಆಗುತ್ತಿದ್ದಾರೆ ಎಂಬ ಬ್ರೇಕಿಂಗ್ ನ್ಯೂಸ್ ವೈರಲ್ ಆಗುತ್ತಿದೆ. ಹುಡುಗ ಬೆಂಗಳೂರಿನಲ್ಲಿ ಲಾಜೆಸ್ಟಿಕ್ ಕಂಪನಿ ಓನರ್ ವಿಜಯ್ ಎಂಬುವರ ಜೊತೆ 29 ನವೆಂಬರ್ 2023ರಂದು ಬೆಂಗಳೂರಿನ ಯಲಹಂಕದಲ್ಲಿ ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಮದುವೆಯಾಗಲಿದ್ದಾರೆ. ಈ ವಿಷಯವನ್ನು ಸ್ವತಃ ಪೂಜಾ ಗಾಂಧಿಯವರೇ ಪತ್ರದ ಮೂಲಕ ಬಹಿರಂಗ ಪಡಿಸಿದ್ದಾರೆ.

ವಿಜಯ್ ಅವರೇ ಪೂಜಾ ಗಾಂಧಿಯವರಿಗೆ ಕನ್ನಡ ಕಲಿಸಿದ್ದು ಎಂಬ ಮಾಹಿತಿಯೂ ಲಭ್ಯವಾಗಿದೆ. ಕನ್ನಡದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಮನಗೆದ್ದಿರುವ ನಟಿ ಪೂಜಾ ಗಾಂಧಿ, ಕನ್ನಡವನ್ನು ಕಲಿತು ಭೇಷ್ ಎನಿಸಿಕೊಂಡಿದ್ದಾರೆ.

ಪೂಜಾ ಗಾಂಧಿ ಮೂಲತಃ ಬೆಂಗಾಲಿ ಕುಟುಂಬದವರು. ಹುಟ್ಟಿದ್ದು ಉತ್ತರ ಪ್ರದೇಶದ ಮೀರತ್‌, ಬೆಳೆದಿದ್ದು ಓದಿದ್ದು  ದೆಹಲಿಯಲ್ಲಿ ಎನ್ನಲಾಗಿದೆ. ಮುಂಗಾರು ಮಳೆ ಸಿನಿಮಾ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ನಟಿ ಪೂಜಾ ಗಾಂಧಿ, ಇಲ್ಲಿ ಸಕ್ಸಸ್‌ ಪಡೆದುಕೊಂಡು ನೆಲೆ ನಿಂತವರು. ಕನ್ನಡ ಸೇರಿದಂತೆ ಮಲಯಾಳಂ, ಬೆಂಗಾಲಿ ಸಿನಿಮಾರಂಗಗಳಲ್ಲಿ ನಟಿ ಪೂಜಾ ಗಾಂಧಿ ಕೆಲಸ ಮಾಡಿದವರು. ಅವರ ಮೊದಲ ಹೆಸರು ಸಂಜನಾ ಗಾಂಧಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com