ಗಜರಾಮ ಚಿತ್ರದ ಶೂಟಿಂಗ್ ಮುಕ್ತಾಯ, ವಿಶೇಷ ಹಾಡಿಗೆ ರಾಜವರ್ಧನ್ ಜೊತೆ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಹೆಜ್ಜೆ!
ಸುನೀಲ್ ಕುಮಾರ್ ವಿಎ ಅವರ ಚೊಚ್ಚಲ ನಿರ್ದೇಶನದ ಗಜರಾಮ ಚಿತ್ರದ ಶೂಟಿಂಗ್ ರಾಜವರ್ದನ್ ಮತ್ತು ನಟಿ ರಾಗಿಣಿ ದ್ವಿವೇದಿ ಒಳಗೊಂಡ ವಿಶೇಷ ಹಾಡಿನೊಂದಿಗೆ ಮುಕ್ತಾಯಗೊಂಡಿದೆ. ಪಕ್ಕಾ ಆ್ಯಕ್ಷನ್ ಕಮ್ ಲವ್ ಸ್ಟೋರಿಯಿರುವ ಈ ಚಿತ್ರದಲ್ಲಿ ರಾಜವರ್ಧನ್ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.
Published: 02nd October 2023 12:02 PM | Last Updated: 02nd October 2023 05:29 PM | A+A A-

ಗಜರಾಮ ಚಿತ್ರದ ವಿಶೇಷ ಹಾಡೊಂದರಲ್ಲಿ ರಾಜವರ್ಧನ್ ಮತ್ತು ನಟಿ ರಾಗಿಣಿ ದ್ವಿವೇದಿ
ಸುನೀಲ್ ಕುಮಾರ್ ವಿಎ ಅವರ ಚೊಚ್ಚಲ ನಿರ್ದೇಶನದ ಗಜರಾಮ ಚಿತ್ರದ ಶೂಟಿಂಗ್ ರಾಜವರ್ದನ್ ಮತ್ತು ನಟಿ ರಾಗಿಣಿ ದ್ವಿವೇದಿ ಒಳಗೊಂಡ ವಿಶೇಷ ಹಾಡಿನೊಂದಿಗೆ ಮುಕ್ತಾಯಗೊಂಡಿದೆ. ಪಕ್ಕಾ ಆ್ಯಕ್ಷನ್ ಕಮ್ ಲವ್ ಸ್ಟೋರಿಯಿರುವ ಈ ಚಿತ್ರದಲ್ಲಿ ರಾಜವರ್ಧನ್ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.
ಕಳೆದೆರಡು ದಿನಗಳಿಂದ ಚಿತ್ರೀಕರಿಸಲಾದ ಹಾಡಿನ ಚಿತ್ರೀಕರಣ ಮುಗಿದಿದ್ದು, ಹಾಡಿಗೆ ಮನೋ ಮೂರ್ತಿಯವರ ಆಕರ್ಷಕ ಟ್ಯೂನ್‌ಗಳಿದ್ದು, ಚಿನ್ಮಯ್ ಭಾವಿಕೇರಿ ಬರೆದ ಸಾಹಿತ್ಯ ಮತ್ತು ಮಾಸ್ಟರ್ ಧನಂಜಯ್ ಅವರ ನೃತ್ಯ ಸಂಯೋಜನೆ ಇದೆ. ವಿಶೇಷ ಹಾಡಿನಲ್ಲಿ ರಾಗಿಣಿ ಸಖತ್ ಸ್ಟೆಪ್ಸ್ ಹಾಕಿದ್ದಾರೆ.
ರಾಜವರ್ಧನ್ ಜೊತೆ ರಾಗಿಣಿ ಹೆಜ್ಜೆ ಹಾಕಿದ್ದು, ಚಿತ್ರೀಕರಣದ ಸುಂದರ ಫೋಟೊಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ನರಸಿಂಹ ಮೂರ್ತಿ ನಿರ್ಮಿಸಿರುವ ಗಜರಾಮ ಚಿತ್ರದಲ್ಲಿ ಶಿಷ್ಯ ದೀಪಕ್, ಶರತ್ ಲೋಹಿತಾಶ್ವ ಮತ್ತು ಶೋಬ್ರಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಕೆಎಸ್ ಚಂದ್ರಶೇಖರ್ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದಾರೆ.