ನಿಜವಾದ 'ರಾಜಯೋಗ' ಎಂದರೆ ಚಿತ್ರದ ಕಥೆ ಮತ್ತು ನಿರ್ದೇಶಕ ಲಿಂಗರಾಜ್: ನಟ ಧರ್ಮಣ್ಣ ಕಡೂರು

ಹಾಸ್ಯ ಪಾತ್ರಗಳಿಗೆ ಹೆಸರಾದ ಧರ್ಮಣ್ಣ ಕಡೂರು ಅವರು ಮುಂಬರುವ ಚಿತ್ರ 'ರಾಜಯೋಗ' ಮೂಲಕ ನಾಯಕನಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಸದ್ಯ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಚಿತ್ರತಂಡ ಟ್ರೇಲರ್ ಬಿಡುಗಡೆ ಮಾಡಿದೆ.
ರಾಜಯೋಗ ಸಿನಿಮಾದ ಸ್ಟಿಲ್-  ನಿರೀಕ್ಷಾ ರವಿ ಮತ್ತು ಧರ್ಮಣ್ಣ ಕಡೂರು
ರಾಜಯೋಗ ಸಿನಿಮಾದ ಸ್ಟಿಲ್- ನಿರೀಕ್ಷಾ ರವಿ ಮತ್ತು ಧರ್ಮಣ್ಣ ಕಡೂರು

ಹಾಸ್ಯ ಪಾತ್ರಗಳಿಗೆ ಹೆಸರಾದ ಧರ್ಮಣ್ಣ ಕಡೂರು ಅವರು ಮುಂಬರುವ ಚಿತ್ರ 'ರಾಜಯೋಗ' ಮೂಲಕ ನಾಯಕನಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಸದ್ಯ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಚಿತ್ರತಂಡ ಟ್ರೇಲರ್ ಬಿಡುಗಡೆ ಮಾಡಿದೆ.

ನಿರ್ದೇಶಕ ಲಿಂಗರಾಜ್ ಉಚ್ಚಂಗಿ ದುರ್ಗ ಅವರ ಮೂಲ ಮತ್ತು ಸಿನಿಮಾ ನಿರ್ದೇಶಿಸುವ ಆಕಾಂಕ್ಷೆಗಳು ಗ್ರಾಮೀಣ ಹಿನ್ನೆಲೆಯಲ್ಲಿ ನಡೆಯುವ 'ರಾಜಯೋಗ' ಸಿನಿಮಾದ ಹುಟ್ಟಿಗೆ ಕಾರಣವಾಗಿದೆ. 'ಇದು ನನ್ನ ಚೊಚ್ಚಲ ನಿರ್ದೇಶನದ ಚಿತ್ರ. ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮವು ಹೇಗೆ ಯಶಸ್ಸಿಗೆ ಕಾರಣವಾಗುತ್ತದೆ ಎಂಬುದೇ ಈ ಚಿತ್ರ. ರಾಮಾ ರಾಮಾ ರೇ ಚಿತ್ರದಲ್ಲಿ ಧರ್ಮಣ್ಣ ಕಡೂರು ಅವರ ಅಭಿನಯ ನೋಡಿದ ನಂತರ ನಾಯಕನ ಪಾತ್ರಕ್ಕೆ ಅವರೇ ಸೂಕ್ತ ಎಂದು ಅನಿಸಿತು. ಚಿತ್ರವು ತಂದೆ-ಮಗನ ಸಂಬಂಧದ ಕಥೆಯನ್ನು ಹೇಳುತ್ತದೆ. ಹಾಸ್ಯದೊಂದಿಗೆ ಗಂಭೀರ ವಿಷಯಗಳನ್ನು ಒಳಗೊಂಡಿದೆ' ಎನ್ನುತ್ತಾರೆ. 

ಭೂತ ಅಥವಾ ಭವಿಷ್ಯದ ಚಿಂತೆಯೊಂದಿಗೆ ವಾಸಿಸುವ ಬದಲು ವರ್ತಮಾನದಲ್ಲಿ ಬದುಕುವುದರ ಮೇಲೆ ಚಿತ್ರ ಕೇಂದ್ರೀಕರಿಸಿದೆ. ನಾನು ಸೇರಿದಂತೆ ಪ್ರತಿಯೊಬ್ಬರೂ ಭೂತ ಮತ್ತು ಭವಿಷ್ಯದ ಬಗ್ಗೆ ಆಗಾಗ್ಗೆ ಯೋಚಿಸುತ್ತೇವೆ. ಅದು ನಮ್ಮ ಸದ್ಯದ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಅದುವೇ ಈ ಚಿತ್ರದ ತಿರುಳು. ನಾವು ಈ ಚಿತ್ರದಲ್ಲಿ 45 ದಿನಗಳ ಕಾಲ ಮೂರು ಹಂತಗಳಲ್ಲಿ ಕೆಲಸ ಮಾಡಿದ್ದೇವೆ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪ್ರಗತಿಯಲ್ಲಿವೆ. ಬಿಡುಗಡೆಯ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸುತ್ತೇವೆ ಎಂದು ಹೇಳುತ್ತಾರೆ ನಿರ್ದೇಶಕ ಲಿಂಗರಾಜ್.

ಯಾವುದೇ ಚಿತ್ರದ ನಿಜವಾದ ಹೀರೋಗಳೆಂದರೆ ಕಥೆ ಮತ್ತು ನಿರ್ದೇಶಕ ಎಂದು ಪರಿಗಣಿಸುತ್ತಾರೆ ನಟ ಧರ್ಮಣ್ಣ. 'ನಾನು ಈ ಚಿತ್ರದಲ್ಲಿ ಹಾಸ್ಯ, ಎಮೋಷನ್ಸ್ ಮತ್ತು ಎಲ್ಲವನ್ನು ಸಮತೋಲನಗೊಳಿಸುವ ಪಾತ್ರವನ್ನು ಮಾತ್ರ ನಿರ್ವಹಿಸಿದ್ದೇನೆ. ಇದು ನಾನು ಹಿಂದೆಂದೂ ನಿರ್ವಹಿಸದ ಪಾತ್ರವಾಗಿದ್ದು, ಅದರ ಬಗ್ಗೆ ನನಗೆ ಸಂತೋಷವಾಗಿದೆ. ಈ ಚಿತ್ರವು ಸಂಬಂಧಗಳ ಮೌಲ್ಯಗಳನ್ನು ಹಾಸ್ಯಮಯವಾಗಿ ತಿಳಿಸುತ್ತದೆ. ಚಿತ್ರವು ಅನಂತ್ ನಾಗ್ ಮತ್ತು ಶಶಿಕುಮಾರ್ ಅವರಂತಹ ಶ್ರೇಷ್ಠ ನಟರನ್ನು ಒಳಗೊಂಡ ಚಿತ್ರಗಳನ್ನು ಎಲ್ಲರಿಗೂ ನೆನಪಿಸುತ್ತದೆ' ಎಂದು ಹೇಳುತ್ತಾರೆ.

ರಾಜಯೋಗ ಚಿತ್ರವನ್ನು ಶ್ರೀರಾಮರತ್ನ ಪ್ರೊಡಕ್ಷನ್ಸ್‌ನ ಕುಮಾರ್ ಕಂಠೀರವ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಅಕ್ಷಯ್ ರಿಷಬ್ ಸಂಗೀತ ಸಂಯೋಜಿಸಿದ್ದಾರೆ ಮತ್ತು ವಿಷ್ಣುಪ್ರಸಾದ್ ಅವರ ಛಾಯಾಗ್ರಹಣವನ್ನು ಹೊಂದಿದೆ. 

ರಾಜಯೋಗದಲ್ಲಿ ನಿರೀಕ್ಷಾ ರವಿ ನಾಯಕಿಯಾಗಿ ಕಾಣಿಸಿಕೊಂಡಿದ್ದು, ದೀಕ್ಷಿತ್ ಕೃಷ್ಣ, ಕೃಷ್ಣಮೂರ್ತಿ ಕವತ್ತಾರ, ಶ್ರೀನಿವಾಸ್ ಗೌಡ್, ಉಷಾ ರವಿಶಂಕರ್, ಮಹಾಂತೇಶ್ ಹಿರೇಮಠ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com