ನಿರ್ದೇಶಕನ ಜೊತೆ ಗುಟ್ಟಾಗಿ ಮದುವೆ: ವೈರಲ್ ಫೋಟೋದ ಬಗ್ಗೆ ಸಾಯಿ ಪಲ್ಲವಿ ಕೆಂಡಾಮಂಡಲ!

ನಟಿ ಸಾಯಿ ಪಲ್ಲವಿ ಇತ್ತೀಚೆಗೆ ತಮ್ಮ ಮದುವೆಯ ಸುದ್ದಿ ವೈರಲ್ ಆದ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಸಾಯಿ ಪಲ್ಲವಿ ಮತ್ತು ನಿರ್ದೇಶಕ ರಾಜ‌ಕುಮಾರ್ ಪೆರಿಯಸಾಮಿ ಕೊರಳಿಗೆ ಹಾರ ಹಾಕಿರುವ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.
ಸಾಯಿ ಪಲ್ಲವಿ
ಸಾಯಿ ಪಲ್ಲವಿ
Updated on

ನಟಿ ಸಾಯಿ ಪಲ್ಲವಿ ಇತ್ತೀಚೆಗೆ ತಮ್ಮ ಮದುವೆಯ ಸುದ್ದಿ ವೈರಲ್ ಆದ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಸಾಯಿ ಪಲ್ಲವಿ ಮತ್ತು ನಿರ್ದೇಶಕ ರಾಜ‌ಕುಮಾರ್ ಪೆರಿಯಸಾಮಿ ಕೊರಳಿಗೆ ಹಾರ ಹಾಕಿರುವ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.

ಅನೇಕ ಸಾಮಾಜಿಕ ಮಾಧ್ಯಮಗಳಲ್ಲಿ ಇಬ್ಬರೂ ಮದುವೆಯಾಗಿದ್ದಾರೆ ಎಂದು ಹೇಳಿದ್ದವು. ಈ ಸಂಬಂಧ ನಟಿ ಸಾಯಿ ಪಲ್ಲವಿ  ಟ್ವೀಟ್ ಮಾಡಿ ವೈರಲ್ ಫೋಟೋದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ರಾಜಕುಮಾರ್ ಪೆರಿಯಸಾಮಿ ಜೊತೆಗಿನ ತನ್ನ ಮದುವೆಯ ವದಂತಿಗಳಿಗೆ ಸಾಯಿ ಪಲ್ಲವಿ  ತೆರೆ ಎಳೆದಿದ್ದಾರೆ.

ಶಿವಕಾರ್ತಿಕೇಯನ್ ಅವರ ಮುಂಬರುವ ಚಿತ್ರ 'ಎಸ್‌ಕೆ 21' ನಲ್ಲಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಚಿತ್ರವನ್ನು ರಾಜಕುಮಾರ್ ಪೆರಿಯಸಾಮಿ ನಿರ್ದೇಶಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ, ಅನೇಕ ಸಾಮಾಜಿಕ ಮಾಧ್ಯಮ ಪುಟಗಳು ಸಾಯಿ ಪಲ್ಲವಿ, ರಾಜಕುಮಾರ್ ಪೆರಿಯಸಾಮಿ ಅವರನ್ನು ವಿವಾಹವಾದರು ಎಂದು ಹೇಳಿದ್ದವು.

ಇದೀಗ ಸ್ವತಃ ಈ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ಸಾಯಿ ಪಲ್ಲವಿ, ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ನಿಜ ಹೇಳಬೇಕು ಅಂದ್ರೆ, ನಾನು ವದಂತಿಗಳಿಗೆ ಹೆದರುವುದಿಲ್ಲ. ಆದರೆ ನನ್ನ ಕುಟುಂಬ ಸದಸ್ಯರನ್ನು ಸ್ನೇಹಿತರನ್ನು ಇದರಲ್ಲಿ ಸಿಲುಕಿಸುತ್ತಿರುವುದನ್ನು ನೋಡಿದಮೇಲೆ ಪ್ರತಿಕ್ರಿಯಿಸಲೇಬೇಕಾಗಿದೆ. ನಾನು ಮಾತನಾಡಬೇಕಿದೆ.

ನನ್ನ ಮುಂದಿನ ಸಿನಿಮಾ ಮುಹೂರ್ತ ಸಮಾರಂಭದ ಫೋಟೊಗಳನ್ನು ಕ್ರಾಪ್ ಮಾಡಿ ಈ ರೀತಿ ಉದ್ದೇಶಪೂರ್ವಕವಾಗಿ ಹಣ ಕೊಟ್ಟು ಕೆಟ್ಟ ಅರ್ಥದಲ್ಲಿ ತೇಲಿ ಬಿಟ್ಟಿದ್ದಾರೆ. ಇದು ಬಹಳ ಅಹಸ್ಯಕರ ಸಂಗತಿ. ನನ್ನ ಸಿನಿಮಾ ಅಪ್‌ಡೇಟ್‌ಗಾಗಿ ಬಿಟ್ಟ ಫೋಟೊಗಳನ್ನು ಬಳಸಿ ಈ ರೀತಿ ಸುದ್ದಿ ಹಬ್ಬಿಸಿರುವುದು ಬಹಳ ಬೇಸರ ತಂದಿದೆ. ಸಂತೋಷವಾಗಿ ಸಿನಿಮಾ ಶುರು ಮಾಡುವಾಗ ಇಂತದ್ದನ್ನು ಕ್ರಿಯೇಟ್ ಮಾಡುವುದು ನಮಗೆ ನಿರುತ್ಸಾಹ ತರುವಂತಿದೆ ಎಂದು ಸಾಯಿ ಪಲ್ಲವಿ ಅಸಮಾಧಾನ ಹೊರ ಹಾಕಿದ್ದಾರೆ.

ಮುಹೂರ್ತ ಸಮಾರಂಭದಲ್ಲಿ ಎಲ್ಲರೂ ಒಟ್ಟಿಗೆ ನಿಂತು ಫೋಟೊ ಕ್ಲಿಕ್ಕಿಸಿಕೊಂಡಿದ್ದರು. ಆದರೆ ನಿರ್ದೇಶಕ ಹಾಗೂ ಸಾಯಿ ಪಲ್ಲವಿ ಇಬ್ಬರು ಹಾರ ಹಾಕಿಕೊಂಡು ಅಕ್ಕ ಪಕ್ಕ ನಿಂತಂತೆ ಫೋಟೊಗಳನ್ನು ಮಾರ್ಪ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com