Ajith Kumar Accident: 'ವಿದಾಮುಯಾರ್ಚಿ' ಚಿತ್ರೀಕರಣದ ವೇಳೆ ನಟ ಅಜಿತ್ ಕುಮಾರ್ ಕಾರು ಅಪಘಾತ, ವಿಡಿಯೋ ವೈರಲ್!

ತಮಿಳು ಸೂಪರ್‌ಸ್ಟಾರ್ ಅಜಿತ್ ಕುಮಾರ್ ಅವರು 2023ರಲ್ಲಿ ತಮಿಳಿನ ಆಕ್ಷನ್ ಚಿತ್ರ 'ತುನಿವು' ಮೂಲಕ ಕಮ್ ಬ್ಯಾಕ್ ಮಾಡಿದ್ದರು. ಇದೀಗ ತಮ್ಮ ಮುಂದಿನ ಆಕ್ಷನ್-ಥ್ರಿಲ್ಲರ್ ಚಿತ್ರ 'ವಿದಾಮುಯಾರ್ಚಿ' ಚಿತ್ರದಿಂದಾಗಿ ಸುದ್ದಿಯಲ್ಲಿದ್ದಾರೆ.
ನಟ ಅಜಿತ್ ಕುಮಾರ್
ನಟ ಅಜಿತ್ ಕುಮಾರ್

ತಮಿಳು ಸೂಪರ್‌ಸ್ಟಾರ್ ಅಜಿತ್ ಕುಮಾರ್ ಅವರು 2023ರಲ್ಲಿ ತಮಿಳಿನ ಆಕ್ಷನ್ ಚಿತ್ರ 'ತುನಿವು' ಮೂಲಕ ಕಮ್ ಬ್ಯಾಕ್ ಮಾಡಿದ್ದರು. ಇದೀಗ ತಮ್ಮ ಮುಂದಿನ ಆಕ್ಷನ್-ಥ್ರಿಲ್ಲರ್ ಚಿತ್ರ 'ವಿದಾಮುಯಾರ್ಚಿ' ಚಿತ್ರದಿಂದಾಗಿ ಸುದ್ದಿಯಲ್ಲಿದ್ದಾರೆ.

ಈ ವರ್ಷವೇ 'ವಿದಾಮುಯಾರ್ಚಿ' ಬಿಡುಗಡೆಯಾಗಲಿದೆ. ಆದರೆ, ಚಿತ್ರದ ಬಿಡುಗಡೆ ದಿನಾಂಕ ಇನ್ನೂ ಬಹಿರಂಗವಾಗಿಲ್ಲ. ಮಾಗಿಜ್ ತಿರುಮೇನಿ ಈ 'ವಿದಾಮುಯಾರ್ಚಿ'ಯನ್ನು ನಿರ್ದೇಶಿಸಲಿದ್ದಾರೆ. ಅದೇ ಸಮಯದಲ್ಲಿ, ಚಿತ್ರ ನಿರ್ಮಾಪಕರು ಈ ಚಿತ್ರದ ಶೂಟಿಂಗ್‌ ವೇಳೆ ಅಜಿತ್ ಅವರು ಅಪಘಾತಕ್ಕೀಡಾಗಿದ್ದ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಲೈಕಾ ಪ್ರೊಡಕ್ಷನ್ಸ್ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮೂರು ಮಾರಣಾಂತಿಕ ಆಕ್ಷನ್ ಸೀಕ್ವೆನ್ಸ್‌ಗಳ ವೀಡಿಯೊಗಳನ್ನು ಹಂಚಿಕೊಂಡಿದೆ. 'ಶೌರ್ಯಕ್ಕೆ ಮಿತಿಯಿಲ್ಲ, ಯಾವುದೇ ಬಾಡಿ ಡಬಲ್ ಇಲ್ಲದೆ ವಿದಾಮುಯಾರ್ಚಿಯಲ್ಲಿ ಅಜಿತ್ ಅವರ ಡೇರಿಂಗ್ ಸ್ಟಂಟ್ ಸೀಕ್ವೆನ್ಸ್' ಎಂಬ ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ನಟ ಅಜಿತ್ ಕುಮಾರ್
ನಟ ಅಜಿತ್ ಕುಮಾರ್ ಗೆ ಬ್ರೈನ್ ಟ್ಯೂಮರ್? ಸರ್ಜರಿ ಬಗ್ಗೆ ಮ್ಯಾನೇಜರ್ ಹೇಳಿದ್ದೇನು?

ಮೊದಲ ವೀಡಿಯೊದಲ್ಲಿ, ಚಿತ್ರದ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಜಿತ್ ಗಾಯಗೊಂಡ ನಟನನ್ನು ಕಾರಿನಲ್ಲಿ ವೇಗವಾಗಿ ಹೊತ್ತೊಯ್ಯುತ್ತಿರುವುದನ್ನು ನೀವು ನೋಡುತ್ತೀರಿ. ವೇಗವಾಗಿ ಹೋಗುವ ಕಾರು ಪಲ್ಟಿಯಾಗುತ್ತದೆ. ನಂತರ ಕಾರಿನ ಬಲೂನ್‌ಗಳು ತೆರೆದುಕೊಳ್ಳುತ್ತವೆ. ಆದರೆ, ಎರಡನೇ ಮತ್ತು ಮೂರನೇ ವೀಡಿಯೊಗಳಲ್ಲಿ, ಅದೇ ದೃಶ್ಯವನ್ನು ಕಾರಿನ ಹೊರಗಿನಿಂದ ಮತ್ತು ಮೇಲಿನಿಂದ ತೆಗೆದುಕೊಳ್ಳಲಾಗಿದೆ.

220 ಕೋಟಿ ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ಅಜಿತ್ ಕುಮಾರ್ ಜೊತೆಗೆ ಅರ್ಜನ್ ಸರ್ಜಾ, ಸೌತ್ ಬ್ಯೂಟಿ ತ್ರಿಶಾ, ರೆಜಿನಾ ಕಸಾಂಡ್ರಾ ಮತ್ತು ಆರವ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ತಮಿಳು ಭಾಷೆಯಲ್ಲಿ ತಯಾರಾಗುತ್ತಿರುವ ಈ ಚಿತ್ರವು ಲೈಕಾ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿದೆ. ಚಿತ್ರಕ್ಕೆ ಅನಿರುದ್ಧ್ ರವಿಚಂದ್ರ ಸಂಗೀತ ಇರಲಿದೆ. ನೀರವ್ ಶಾ ಮತ್ತು ಓಂ ಪ್ರಕಾಶ್ ಸಿನಿಮಾಟೋಗ್ರಫಿ ಕೆಲಸ ನಿರ್ವಹಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com