ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಡೆವಿಲ್' ಚಿತ್ರದಲ್ಲಿ ಬಹುಭಾಷಾ ನಟ ಮಹೇಶ್ ಮಂಜ್ರೇಕರ್ ಪಾತ್ರ?

ಪ್ರಕಾಶ್ ವೀರ್ ಬರೆದು ನಿರ್ದೇಶಿಸಿರುವ ದರ್ಶನ್ ಅಭಿನಯದ ಡೆವಿಲ್- ದಿ ಹೀರೋ ಚಿತ್ರದ ಶೂಟಿಂಗ್‌ ಅನ್ನು ಕೆಲವು ಆಕ್ಷನ್-ಪ್ಯಾಕ್ಡ್ ಸೀಕ್ವೆನ್ಸ್‌ಗಳೊಂದಿಗೆ ಮಾರ್ಚ್ 22ರಂದು ಪ್ರಾರಂಭಿಸಲಾಯಿತು. ಮೊದಲ ಶೆಡ್ಯೂಲ್ ಮುಗಿಸಿರುವ ಚಿತ್ರತಂಡ ಮುಂದಿನ ಹಂತದ ಚಿತ್ರೀಕರಣಕ್ಕೆ ಸಜ್ಜಾಗುತ್ತಿದೆ. ಮೂಲಗಳ ಪ್ರಕಾರ, ಡೆವಿಲ್ ಚಿತ್ರತಂಡವು ಬಹುಭಾಷಾ ನಟ ಮಹೇಶ್ ಮಂಜ್ರೇಕರ್ ಅವರನ್ನು ಕರೆತಂದಿದೆ ಎನ್ನಲಾಗಿದೆ.
ಮಹೇಶ್ ಮಂಜ್ರೇಕರ್ - ದರ್ಶನ್
ಮಹೇಶ್ ಮಂಜ್ರೇಕರ್ - ದರ್ಶನ್
Updated on

ಪ್ರಕಾಶ್ ವೀರ್ ಬರೆದು ನಿರ್ದೇಶಿಸಿರುವ ದರ್ಶನ್ ಅಭಿನಯದ ಡೆವಿಲ್- ದಿ ಹೀರೋ ಚಿತ್ರದ ಶೂಟಿಂಗ್‌ ಅನ್ನು ಕೆಲವು ಆಕ್ಷನ್-ಪ್ಯಾಕ್ಡ್ ಸೀಕ್ವೆನ್ಸ್‌ಗಳೊಂದಿಗೆ ಮಾರ್ಚ್ 22ರಂದು ಪ್ರಾರಂಭಿಸಲಾಯಿತು. ಮೊದಲ ಶೆಡ್ಯೂಲ್ ಮುಗಿಸಿರುವ ಚಿತ್ರತಂಡ ಮುಂದಿನ ಹಂತದ ಚಿತ್ರೀಕರಣಕ್ಕೆ ಸಜ್ಜಾಗುತ್ತಿದೆ. ದರ್ಶನ್ ಅವರು ಗಾಯದಿಂದ ಚೇತರಿಸಿಕೊಂಡ ನಂತರ ಮುಂದಿನ ಚಿತ್ರೀಕರಣದಲ್ಲಿ ತೊಡಗಿಕೊಳ್ಳಲಿದೆ. ದರ್ಶನ್ ಕೈಗೆ ಗಾಯವಾಗಿದ್ದು, ಇತ್ತೀಚೆಗಷ್ಟೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಈಮಧ್ಯೆ, ಚಿತ್ರದ ತಾರಾಗಣವನ್ನು ಅಂತಿಮಗೊಳಿಸುತ್ತಿದ್ದು, ನಮ್ಮ ವಿಶ್ವಾಸಾರ್ಹ ಮೂಲಗಳ ಪ್ರಕಾರ, ಡೆವಿಲ್ ಚಿತ್ರತಂಡವು ಬಹುಭಾಷಾ ನಟ ಮಹೇಶ್ ಮಂಜ್ರೇಕರ್ ಅವರನ್ನು ಕರೆತಂದಿದೆ ಎನ್ನಲಾಗಿದೆ. ಮಂಜ್ರೇಕರ್ ಅವರು ಹಿಂದಿಯಲ್ಲಿ ರಿಯಾಲಿಟಿ ಶೋಗಳು ಮತ್ತು ವೆಬ್ ಸರಣಿಗಳು ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಜನಪ್ರಿಯರಾಗಿದ್ದಾರೆ. ಇದರೊಂದಿಗೆ ಮರಾಠಿ, ತೆಲುಗು, ತಮಿಳು, ಬೆಂಗಾಲಿ ಮತ್ತು ಭೋಜ್‌ಪುರಿ ಸೇರಿದಂತೆ ವಿವಿಧ ಭಾರತೀಯ ಭಾಷೆಗಳಲ್ಲಿ ಮತ್ತು ಅಂತರರಾಷ್ಟ್ರೀಯ ಸಿನಿಮಾಗಳಲ್ಲಿ ನಟಿಸಿದ್ದಾರೆ. 2005ರಲ್ಲಿ ಎನ್‌ಕೌಂಟರ್ ದಯಾನಾಯಕ್ ಎಂಬ ಕನ್ನಡ ಚಿತ್ರದಲ್ಲಿ ಮಹೇಶ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅದಾದ ಎರಡು ದಶಕಗಳ ನಂತರ ಅವರು ಡೆವಿಲ್ ಮೂಲಕ ಕನ್ನಡ ಚಿತ್ರರಂಗಕ್ಕೆ ಮರಳುತ್ತಿದ್ದಾರೆ.

ನಿರ್ದೇಶಕ ಪ್ರಕಾಶ್ ವೀರ್ ಅವರು ಹೊಸ ಪ್ರಯೋಗಗಳಿಗೆ ಹೆಸರಾಗಿದ್ದು, ದರ್ಶನ್ ಮತ್ತು ಮಹೇಶ್ ಮಂಜ್ರೇಕರ್ ಜೋಡಿಯು ತಾಜಾ ಮತ್ತು ಕಮರ್ಷಿಯಲ್ ಅಂಶಗಳೊಂದಿಗೆ ಚಿತ್ರಕ್ಕೆ ಹೊಸ ಆಯಾಮ ತರುತ್ತದೆ ಎಂದು ಚಿತ್ರತಂಡ ಭರವಸೆ ವ್ಯಕ್ತಪಡಿಸಿದೆ. ಸದ್ಯ ಮಹೇಶ್ ಅವರ ಪಾತ್ರದ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾಗಬೇಕಿದೆ. ಚಿತ್ರತಂಡ ಇದೀಗ ನಾಯಕಿ ಮತ್ತು ಪೋಷಕ ಪಾತ್ರಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಹೇಶ್ ಮಂಜ್ರೇಕರ್ - ದರ್ಶನ್
ದರ್ಶನ್ ಗೆ ಹುಟ್ಟುಹಬ್ಬದ ಸಂಭ್ರಮ: ಮನೆ ಬಳಿ ಜನಸಾಗರ, ಡೆವಿಲ್ ಚಿತ್ರದ ಫಸ್ಟ್ ಲುಕ್ ಬಿಡುಗಡೆ!

ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ಡೆವಿಲ್ ಚಿತ್ರದ ಫಸ್ಟ್ ಲುಕ್ ಟೀಸರ್, ಅಭಿಮಾನಿಗಳಲ್ಲಿ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಚಿತ್ರವನ್ನು ಜೈ ಮಠ ಕಂಬೈನ್ಸ್ ಪ್ರಸ್ತುತಪಡಿಸುತ್ತಿದ್ದು, ವೈಷ್ಣೋ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಜೆ ಜಯಣ್ಣ ಮತ್ತು ಪ್ರಕಾಶ್ ವೀರ್ ನಿರ್ಮಿಸಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆಯಿದೆ. ಡಿಒಪಿ ಸುಧಾಕರ್ ಎಸ್ ರಾಜ್ ಚಿತ್ರಕ್ಕೆ ಛಾಯಾಗ್ರಹಣವನ್ನು ನಿರ್ವಹಿಸಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com