ಕರಾವಳಿ ಭಾಗದ ನಟರೊಂದಿಗೆ ಆ ಭಾಗದಲ್ಲಿಯೇ ರಿಚರ್ಡ್ ಆಂಟನಿ ಚಿತ್ರೀಕರಣಕ್ಕೆ ರಕ್ಷಿತ್ ಶೆಟ್ಟಿ ಸಜ್ಜು

ರಿಚರ್ಡ್ ಆಂಟನಿ ನಿರ್ದೇಶನದಲ್ಲಿ ಬ್ಯುಸಿಯಾಗಿರುವ ನಟ ರಕ್ಷಿತ್ ಶೆಟ್ಟಿ, ಮೇ 1 ರಿಂದ ಸಂಪೂರ್ಣವಾಗಿ ಉಡುಪಿಗೆ ತಮ್ಮ ನೆಲೆಯನ್ನು ಬದಲಾಯಿಸಲು ಸಜ್ಜಾಗಿದ್ದಾರೆ. ತಮ್ಮ ಚೊಚ್ಚಲ ನಿರ್ದೇಶನದ ಉಳಿದವರು ಕಂಡಂತೆ (2014) ಬಳಿಕ ತಮ್ಮ ನಿರ್ದೇಶನದ ರಿಚರ್ಡ್ ಆಂಟನಿ ಚಿತ್ರವನ್ನು ಸಂಪೂರ್ಣವಾಗಿ ಪಶ್ಚಿಮ ಕರಾವಳಿ ಭಾಗದಲ್ಲಿ ಚಿತ್ರೀಕರಿಸಲು ಯೋಜಿಸಿದ್ದಾರೆ.
ರಿಚರ್ಡ್ ಆಂಟನಿ ಪೋಸ್ಟರ್ - ರಕ್ಷಿತ್ ಶೆಟ್ಟಿ
ರಿಚರ್ಡ್ ಆಂಟನಿ ಪೋಸ್ಟರ್ - ರಕ್ಷಿತ್ ಶೆಟ್ಟಿ

ವಿರಾಮದ ನಂತರ ತಮ್ಮ ಮುಂದಿನ ಚಿತ್ರ ರಿಚರ್ಡ್ ಆಂಟನಿ ನಿರ್ದೇಶನದಲ್ಲಿ ಬ್ಯುಸಿಯಾಗಿರುವ ನಟ ರಕ್ಷಿತ್ ಶೆಟ್ಟಿ, ಮೇ 1 ರಿಂದ ಸಂಪೂರ್ಣವಾಗಿ ಉಡುಪಿಗೆ ತಮ್ಮ ನೆಲೆಯನ್ನು ಬದಲಾಯಿಸಲು ಸಜ್ಜಾಗಿದ್ದಾರೆ. ಕಾರಣ, ತಮ್ಮ ಚೊಚ್ಚಲ ನಿರ್ದೇಶನದ ಉಳಿದವರು ಕಂಡಂತೆ (2014) ಬಳಿಕ ತಮ್ಮ ನಿರ್ದೇಶನದ ರಿಚರ್ಡ್ ಆಂಟನಿ ಚಿತ್ರವನ್ನು ಸಂಪೂರ್ಣವಾಗಿ ಪಶ್ಚಿಮ ಕರಾವಳಿ ಭಾಗದಲ್ಲಿ ಚಿತ್ರೀಕರಿಸಲು ಯೋಜಿಸಿದ್ದಾರೆ.

ಮತ ಚಲಾಯಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಿಚರ್ಡ್ ಆಂಟನಿ ಸಿನಿಮಾ ಸ್ಥಿತಿ ಮತ್ತು ಚಿತ್ರೀಕರಣಕ್ಕೆ ಉಡುಪಿಯನ್ನು ಆಯ್ಕೆ ಮಾಡಲು ಕಾರಣಗಳ ಬಗ್ಗೆ ಚರ್ಚಿಸಿದರು. 'ಹತ್ತು ವರ್ಷಗಳ ಹಿಂದೆ ನಾನು 'ಉಳಿದವರು ಕಂಡಂತೆ' ಚಿತ್ರಕ್ಕಾಗಿ ಸ್ಥಳಗಳನ್ನು ಹುಡುಕಲು ನನಗೆ ಕಷ್ಟವಾಗಲಿಲ್ಲ. ಈ ಚಿತ್ರವನ್ನು ಉಡುಪಿಯಲ್ಲಿ ಮಾತ್ರ ಚಿತ್ರೀಕರಣ ಮಾಡುವ ಯೋಜನೆ ನನಗಿಲ್ಲ; ನಾನು ಪಶ್ಚಿಮ ಘಟ್ಟಗಳಲ್ಲಿರುವ ಕೇರಳ ಮತ್ತು ಗೋಕರ್ಣದಂತಹ ಇತರ ಪ್ರದೇಶಗಳನ್ನು ಅನ್ವೇಷಿಸಬೇಕಾಗಿದೆ ಎಂದರು.

ಕುತೂಹಲಕಾರಿಯಾಗಿ, ರಕ್ಷಿತ್ ಶೆಟ್ಟಿ ಕರಾವಳಿ ಭಾಗದ ಸ್ಥಳೀಯ ಪ್ರತಿಭೆಗಳನ್ನು ಚಿತ್ರದ ಪಾತ್ರಗಳಿಗೆ ಪರಿಗಣಿಸಲು ಯೋಜಿಸಿದ್ದಾರೆ. 'ನಮ್ಮಲ್ಲಿ ಬೆಂಗಳೂರಿನ ಕೆಲವು ಉತ್ತಮ ಕಲಾವಿದರಿದ್ದಾರೆ, ಅವರು ಪಾತ್ರಗಳಿಗಾಗಿ ಸಂಪರ್ಕಿಸಿದ್ದಾರೆ. ಆದರೆ ನಾನು ಅವರನ್ನು ಯೋಜನೆಗೆ ಪರಿಗಣಿಸಲು ಸಾಧ್ಯವಿಲ್ಲ. ರಿಚರ್ಡ್ ಆಂಟನಿಯಲ್ಲಿ ಕೆಲಸ ಮಾಡುವ ಕಲಾವಿದರು ಉಡುಪಿಯ ಆಡುಭಾಷೆ ಮತ್ತು ಕನ್ನಡದ ಕಂಪು ಹೊಂದಿರುವುದು ಅತ್ಯಗತ್ಯ. ನಾನು ಬೇರೆ ಕಲಾವಿದರನ್ನು ಕರೆತರಲು ಪ್ರಯತ್ನಿಸಿದರೂ, ಅದು ಅನುಕರಣೆಯಂತೆ ಕಾಣುತ್ತದೆ. ಇದು ವಾಸ್ತವ ಮತ್ತು ಮುಕ್ತವಾಗಿ ಹರಿಯಬೇಕೆಂದು ನಾವು ಬಯಸುತ್ತೇವೆ. ಹಾಗಾಗಿ, ಕರಾವಳಿ ಭಾಗದಲ್ಲಿ ಚಿತ್ರೀಕರಣದ ಹೊರತಾಗಿ, ರಿಚರ್ಡ್ ಆಂಟನಿಗಾಗಿ ಪ್ರತಿಯೊಬ್ಬ ನಟರೂ ಸಹ ಆ ಪ್ರದೇಶದವರೇ ಆಗಿರುತ್ತಾರೆ ಎಂದರು.

ರಿಚರ್ಡ್ ಆಂಟನಿ ಪೋಸ್ಟರ್ - ರಕ್ಷಿತ್ ಶೆಟ್ಟಿ
'ಮೊದಲು ನಮ್ಮ ಕೆಲಸ ಮಾತಾಡಲಿ, ಉಳಿದವೆಲ್ಲ ತದನಂತರ. 'ರಿಚರ್ಡ್ ಆಂಟನಿ' ಮೂಲಕ ರಕ್ಷಿತ್ ಶೆಟ್ಟಿ ಉತ್ತರ!

ಸ್ಕ್ರಿಪ್ಟ್ ಪೂರ್ಣಗೊಳ್ಳಳು ಇನ್ನೂ ಒಂದು ತಿಂಗಳು ಬೇಕಾಗಿದ್ದು, ರಕ್ಷಿತ್ ಸದ್ಯ ಕ್ಲೈಮ್ಯಾಕ್ಸ್ ಭಾಗಗಳನ್ನು ಬರೆಯುತ್ತಿದ್ದಾರೆ. ಚಿತ್ರಕಥೆಯನ್ನು ಪೂರ್ಣಗೊಳಿಸಿದ ನಂತರ, ನಟ-ನಿರ್ದೇಶಕ ಹೊಂಬಾಳೆ ಫಿಲ್ಮ್ಸ್‌ನ ನಿರ್ಮಾಪಕ ವಿಜಯ್ ಕಿರಗಂದೂರು ಅವರೊಂದಿಗೆ ನಿರ್ಮಾಣ ಯೋಜನೆಗಳನ್ನು ಚರ್ಚಿಸುವ ನಿರೀಕ್ಷೆಯಿದೆ.

'ನಾನು ಸ್ಕ್ರಿಪ್ಟ್, ಪ್ರಿ-ಪ್ರೊಡಕ್ಷನ್‌ನೊಂದಿಗೆ ಸಿದ್ಧನಾಗಿದ್ದೇನೆ ಮತ್ತು ಶೀಘ್ರದಲ್ಲೇ ಚಿತ್ರ ಸೆಟ್ಟೇರಲು ಕೆಲಸ ಮಾಡಲಾಗುತ್ತಿದೆ' ಎಂದು ಅವರು ಸೇರಿಸುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com