ನಟ ಧನ್ವೀರ್ ಅಭಿನಯದ ಬಹು ನಿರೀಕ್ಷಿತ ಹಯಗ್ರೀವ ಚಿತ್ರತಂಡಕ್ಕೆ ಸುನೀಲ್ ರಾವ್ ಎಂಟ್ರಿ
ನಟ ಧನ್ವೀರ್ ಸದ್ಯ ತಮ್ಮ ಮುಂಬರುವ ಚಿತ್ರ ಹಯಗ್ರೀವದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಮೂಲಕ ರಘುಕುಮಾರ್ ಮೊದಲ ಬಾರಿಗೆ ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಪಡೆಯುತ್ತಿದ್ದು, ಈಗ ನಿರ್ಮಾಣ ಹಂತದಲ್ಲಿರುವ ಈ ಚಿತ್ರದಲ್ಲಿ ಸಂಜನಾ ಆನಂದ್ ನಾಯಕಿಯಾಗಿದ್ದಾರೆ. ಪ್ರಮುಖ ನಟರನ್ನು ಹೊರತುಪಡಿಸಿ, ಚಿತ್ರದ ಉಳಿದ ಪಾತ್ರವರ್ಗವನ್ನು ಗೌಪ್ಯವಾಗಿಡಲಾಗಿದ್ದು, ಇದೀಗ ನಟ ಸುನೀಲ್ ರಾವ್ ಚಿತ್ರತಂಡ ಸೇರಿದ್ದಾರೆ ಮತ್ತು ಮಹತ್ವದ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ತಿಳಿದುಬಂದಿದೆ. ಅವರು ಈಗಾಗಲೇ ಚಿತ್ರದಲ್ಲಿ ತಮ್ಮ ಕೆಲವು ಭಾಗಗಳನ್ನು ಚಿತ್ರೀಕರಿಸಿದ್ದಾರೆ ಎನ್ನಲಾಗಿದೆ.
ಚಿತ್ರತಂಡದ ಪ್ರಕಾರ, ಹಯಗ್ರೀವ ಪ್ರಾಚೀನ ಕಥೆಗಳು ಮತ್ತು ಸಮಕಾಲೀನ ಅಂಶಗಳ ಮಿಶ್ರಣವಾಗಿದೆ. ಚಿತ್ರವು ರೊಮ್ಯಾಂಟಿಕ್ ಅಂಶಗಳೊಂದಿಗೆ ಫ್ಯಾಮಿಲಿ ಎಂಟರ್ಟನರ್ ಎನ್ನಲಾಗಿದೆ. ಚಿತ್ರವು ಪ್ರೇಕ್ಷಕರನ್ನು 40 ವರ್ಷಗಳ ಭವಿಷ್ಯ ಕಾಲಕ್ಕೆ ಕರೆದೊಯ್ಯುತ್ತದೆ ಮತ್ತು ಕ್ರೈಮ್ ಅಂಶಗಳನ್ನು ಅನ್ವೇಷಿಸುತ್ತದೆ ಎಂದು ನಿರ್ದೇಶಕರು ಹಿಂದಿನ ಸಂದರ್ಶನದಲ್ಲಿ ಹಂಚಿಕೊಂಡಿದ್ದರು.
ಚಿತ್ರದಲ್ಲಿ ಸುನೀಲ್ ರಾವ್ ನಟಿಸಲಿರುವ ಪಾತ್ರ ಏನೆಂಬುದನ್ನು ಸದ್ಯಕ್ಕೆ ಮುಚ್ಚಿಡಲಾಗಿದೆ. ಹೆಚ್ಚಿನ ವಿವರಗಳನ್ನು ಚಿತ್ರತಂಡ ಶೀಘ್ರದಲ್ಲೇ ಅಧಿಕೃತವಾಗಿ ಘೋಷಿಸುವ ನಿರೀಕ್ಷೆಯಿದೆ.
ಈ ಹಿಂದೆ ಲೈಫ್ ಜೊತೆ ಒಂದು ಸೆಲ್ಫಿಯಲ್ಲಿ ಕೆಲಸ ಮಾಡಿದ್ದ ವಿತರಕ ಮಂಜುನಾಥ್ ತಮ್ಮ ಕೆವಿಸಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಹಯಗ್ರೀವ ಚಿತ್ರ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ರವಿಶಂಕರ್, ರಂಗಾಯಣ ರಘು, ಸಾಧು ಕೋಕಿಲಾ, ತಾರಾ ಮತ್ತು ಶ್ರುತಿ ಸಹ ಕಾಣಿಸಿಕೊಂಡಿದ್ದಾರೆ.
ಹಯಗ್ರೀವ ಚಿತ್ರಕ್ಕೆ ಜೂಡಾ ಸ್ಯಾಂಡಿ ಅವರ ಸಂಗೀತ ಸಂಯೋಜನೆ ಮತ್ತು ಕಾರ್ತಿಕ್ ಎಸ್ ಅವರ ಛಾಯಾಗ್ರಹಣವಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ