ಸಿನಿಮಾ ಸುದ್ದಿನಟ ಧನ್ವೀರ್ ಅಭಿನಯದ ಬಹು ನಿರೀಕ್ಷಿತ ಹಯಗ್ರೀವ ಚಿತ್ರತಂಡಕ್ಕೆ ಸುನೀಲ್ ರಾವ್ ಎಂಟ್ರಿ
ನಟ ಧನ್ವೀರ್ ಸದ್ಯ ತಮ್ಮ ಮುಂಬರುವ ಚಿತ್ರ ಹಯಗ್ರೀವದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಮೂಲಕ ರಘುಕುಮಾರ್ ಮೊದಲ ಬಾರಿಗೆ ನಿರ್ದೇಶಕರಾಗಿ ಸ್ಯಾಂಡಲ್ವುಡ್ಗೆ ಎಂಟ್ರಿ ಪಡೆಯುತ್ತಿದ್ದು, ಈಗ ನಿರ್ಮಾಣ ಹಂತದಲ್ಲಿರುವ ಈ ಚಿತ್ರದಲ್ಲಿ ಸಂಜನಾ ಆನಂದ್ ನಾಯಕಿಯಾಗಿದ್ದಾರೆ. ಇದೀಗ ನಟ ಸುನೀಲ್ ರಾವ್ ಚಿತ್ರತಂಡ ಸೇರಿದ್ದಾರೆ ಮತ್ತು ಮಹತ್ವದ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ತಿಳಿದುಬಂದಿದೆ.