Tharun Sudheer: ತರುಣ್‌ ಸುಧೀರ್‌- ಸೋನಲ್‌ ಮೊಂಥೆರೋ ವಿವಾಹ, ವೈವಾಹಿಕ ಜೀವನ ಪ್ರವೇಶ

ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ತರುಣ್‌ ಸುಧೀರ್‌ (Tharun Sudhir) ಹಾಗೂ ಸೋನಲ್‌ ಮೊಂಥೆರೋ ಸಪ್ತಪದಿ ತುಳಿದಿದ್ದಾರೆ.
Tharun Sudheer ties the knot with Actress Sonal Monteiro
ತರುಣ್ ಸುಧೀರ್-ಸೋನ್ ಮೊಂಥೆರೋ ಮದುವೆ
Updated on

ಬೆಂಗಳೂರು: ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ತರುಣ್‌ ಸುಧೀರ್‌ (Tharun Sudhir) ಹಾಗೂ ಸೋನಲ್‌ ಮೊಂಥೆರೋ ಸಪ್ತಪದಿ ತುಳಿದಿದ್ದಾರೆ.

ಆಗಸ್ಟ್-11 ಅಂದರೆ ಇಂದು ಭಾನುವಾರ ಬೆಳಗ್ಗೆ 10:50 ರಿಂದ 11:35 ಸಮಯದ ತುಲಾ ಲಗ್ನದಲ್ಲಿ ಮಾಂಗಲ್ಯ ಧಾರಣೆ ನೆರವೇರಿದೆ.

ಹಿಂದೂ ಸಂಪ್ರದಾಯದಂತೆ ನಡೆದ ಈ ಮದುವೆಗೆ ಗಣ್ಯಾತಿ ಗಣ್ಯರು ಹಾಗೂ ಸಿನಿಮಾ ಗಣ್ಯರು ಆಗಮಿಸಿದ್ದರು. ಬೆಂಗಳೂರಿನ ಕೆಂಗೇರಿ ಬಳಿಯ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ತರುಣ್ ಮತ್ತು ಸೋನಲ್ ಮದುವೆ ನೆರವೇರಿದೆ.

ಮದುವೆಗೆ ವಿಶೇಷ ಅಲಂಕಾರ

ತರುಣ್ ಸುಧೀರ್ ಹಾಗೂ ಸೋನಲ್ ಮದುವೆ ಅದ್ಧೂರಿಯಾಗಿಯೇ ಪ್ಲಾನ್ ಆಗಿದ್ದು, ಮದುವೆ ಹಾಲ್‌ ಎಂಟ್ರನ್ಸ್‌ ವಿಶೇಷವಾಗಿ ಡಿಸೈನ್ ಮಾಡಲಾಗಿದೆ. ಮದುವೆ ಹಾಲ್‌ನ ಔಟ್ ಡೋರ್ ಫಿಲ್ಮ್‌ ಕಾನ್ಸೆಪ್ಟ್‌ನಲ್ಲಿ ತಯಾರಾಗಿದ್ದು, ಇಡೀ ಮದುವೆ ಕಾರ್ಯಕ್ರಮವನ್ನು ಯೂಟ್ಯೂಬ್ ನಲ್ಲಿ ಲೈವ್ ಟೆಲಿಕಾಸ್ಟ್ ಮಾಡಲಾಗುತ್ತಿದೆ.

ಇಂದು ಕೂಡ ಹಲವಾರು ಸೆಲೆಬ್ರಿಟಿಗಳು ತರುಣ್‌ ಸುಧೀರ್‌ ಹಾಗೂ ಸೋನಲ್ ಮದುವೆಯಲ್ಲಿ ಭಾಗಿಯಾಗಿದ್ದಾರೆ. ನಟ ಶರಣ್​ ದಂಪತಿ, ನಟಿ ಶೃತಿ ಕುಟುಂಬಸ್ಥರು, ನೆನಪಿರಲಿ ಪ್ರೇಮ್ ದಂಪತಿ ಸೇರಿದಂತೆ ಇನ್ನೂ ಹಲವಾರು ಸ್ಟಾರ್​ ನಟ ನಟಿಯರು ಬಂದಿದ್ದಾರೆ. ಸದ್ಯ ಸ್ಟಾರ್​ ಜೋಡಿಯ ಮದುವೆಯ ಫೋಟೋಗಳು ಸಾಮಾಜಿಕಲ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. ಇದೇ ಫೋಟೋಗಳನ್ನು ನೋಡಿದ ಅಭಿಮಾನಿಗಳು ನವಜೋಡಿಗೆ ಶುಭ ಹಾರೈಸಿದ್ದಾರೆ. ಸದ್ಯ ತರುಣ್‌ ಸುಧೀರ್‌ ಅವರ ಮನೆಯಲ್ಲಿ ಸಂಭ್ರಮ ಮನೆಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com