
ಯುಐ ಸಿನಿಮಾ ಮೂಲಕ ಹೊಸ ಅವತಾರದಲ್ಲಿ ಕನ್ನಡಿಗರ ಮುಂದೆ ಬರಲು ಸಜ್ಜಾಗಿದ್ದಾರೆ ರಿಯಲ್ ಸ್ಟಾರ್ ಉಪೇಂದ್ರ, ಈ ಸಿನಿಮಾ ಬಗ್ಗೆ ಕನ್ನಡಿಗರು ಮಾತ್ರ ವಿವಿಧ ಭಾಷೆಯ ಉಪೇಂದ್ರ ಅಭಿಮಾನಿಗಳು ಕೂಡ ಕಾತುರದಿಂದ ಕಾಯುತ್ತಿದ್ದಾರೆ.
ತಮ್ಮ ವಿಭಿನ್ನವಾದ ಮೇಕಿಂಗ್‌ನಿಂದಲೇ ಹೆಸರು ಮಾಡಿರುವ ಉಪೇಂದ್ರ ಈಗ ಯಾವ ವಿಚಾರದ ಬಗ್ಗೆ ಕಥೆ ಹೆಣೆದಿದ್ದಾರೆ ಎನ್ನುವ ಕುತೂಹಲ ಇದ್ದೇ ಇದೆ. ಯುಐ ಸಿನಿಮಾ ಬಿಡುಗಡೆಗೆ ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ ಮತ್ತೊಂದು ದೊಡ್ಡ ಸಿನಿಮಾದಲ್ಲಿ ನಟಿಸಲು ಉಪೇಂದ್ರ ಸಜ್ಜಾಗಿದ್ದಾರೆ ಅದು ಕೂಡ ಸೂಪರ್ ಸ್ಟಾರ್ ರಜನಿಕಾಂತ್ ಜೊತೆಗೆ. ರಜನಿಕಾಂತ್ ಇದೀಗ ಲೋಕೇಶ್ ಕನಕರಾಜ್ ಅವರ ಜೊತೆ ಕೂಲಿ ಸಿನಿಮಾ ಮಾಡಲು ಸಜ್ಜಾಗಿದ್ದಾರೆ. ಖೈದಿ, ವಿಕ್ರಮ್, ಲಿಯೋ ಸೇರಿದಂತೆ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಲೋಕೇಶ್ ಕನಕರಾಜ್ ಇದೀಗ ರಜನಿಕಾಂತ್ ಜೊತೆ ಸಿನಿಮಾ ಮಾಡುತ್ತಿರುವುದು ಇಡೀ ಭಾರತೀಯ ಚಿತ್ರೋದ್ಯಮದ ಗಮನ ಸೆಳೆದಿದೆ.
ಈ ಸಿನಿಮಾದಲ್ಲಿ ಇದೀಗ ರಿಯಲ್ ಸ್ಟಾರ್ ಉಪೇಂದ್ರ ನಟಿಸುವುದು ಪಕ್ಕಾ ಆಗಿದೆ. ನಟ ಉಪೇಂದ್ರ ಅವರೇ ಈ ಬಗ್ಗೆ ಮಾಹಿತಿ ನೀಡಿದ್ದು, ರಜನಿಕಾಂತ್ ಜೊತೆ ನಟಿಸುತ್ತಿರುವುದು ಖುಷಿ ವಿಚಾರ ಎಂದಿದ್ದಾರೆ. ಕುತೂಹಲಕಾರಿ ಎನ್ನುವಂತೆ ಟ್ವೀಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ಅದನ್ನು ಡಿಲೀಟ್ ಮಾಡಿದ್ದಾರೆ. ಆದರೆ ಯಾವ ಕಾರಣಕ್ಕಾಗಿ ತಮ್ಮ ಟ್ವೀಟ್ ಡಿಲೀಟ್ ಮಾಡಿದ್ದಾರೆ ಎನ್ನುವ ಕುತೂಹಲ ಇದೆ. ಕೂಲಿ ಸಿನಿಮಾದಲ್ಲಿ ಯಾವ ಪಾತ್ರದಲ್ಲಿ ಉಪೇಂದ್ರ ನಟಿಸುತ್ತಾರೆ ಎನ್ನುವುದು ಇನ್ನೂ ಖಚಿತವಾಗಿಲ್ಲ. ಅವರು ಅತಿಥಿ ಪಾತ್ರದಲ್ಲಿ ಮಾಡುತ್ತಾರಾ ಅಥವಾ ಸಿನಿಮಾದ ಪ್ರಮುಖ ಪಾತ್ರವೊಂದನ್ನು ನಿಭಾಯಿಸುತ್ತಾರಾ ಎನ್ನುವ ಕುತೂಹಲ ಇದೆ.
Advertisement