'ಸೂಪರ್ ಸ್ಟಾರ್’ ಟ್ಯಾಗ್ ಯಾವಾಗಲೂ ಸಮಸ್ಯೆಯೇ: ರಜನೀಕಾಂತ್ ಅಚ್ಚರಿ ಹೇಳಿಕೆ!

'ಸೂಪರ್ ಸ್ಟಾರ್' ರಜನಿಕಾಂತ್ ನಟಿಸಿರುವ, ಸನ್ ಪಿಕ್ಚರ್ಸ್ ನಿರ್ಮಾಣದ 'ಜೈಲರ್' ಚಿತ್ರದ ಆಡಿಯೋ ಲಾಂಚ್ ಅದ್ಧೂರಿಯಾಗಿ ಚೆನ್ನೈನಲ್ಲಿ ನಡೆದಿದೆ. ರಜನಿ ಸಿನಿಮಾಗಳ ಇವೆಂಟ್‌ನಲ್ಲಿ ಅವರ ಭಾಷಣವೇ ಹೈಲೈಟ್ ಆಗಿದೆ.
ರಜನಿಕಾಂತ್
ರಜನಿಕಾಂತ್

'ಸೂಪರ್ ಸ್ಟಾರ್' ರಜನಿಕಾಂತ್ ನಟಿಸಿರುವ, ಸನ್ ಪಿಕ್ಚರ್ಸ್ ನಿರ್ಮಾಣದ 'ಜೈಲರ್' ಚಿತ್ರದ ಆಡಿಯೋ ಲಾಂಚ್ ಅದ್ಧೂರಿಯಾಗಿ ಚೆನ್ನೈನಲ್ಲಿ ನಡೆದಿದೆ. ರಜನಿ ಸಿನಿಮಾಗಳ ಇವೆಂಟ್‌ನಲ್ಲಿ ಅವರ ಭಾಷಣವೇ ಹೈಲೈಟ್ ಆಗಿದೆ.

ಸೂಪರ್ ಸ್ಟಾರ್' ಎಂದರೆ ಅದು ರಜನಿಕಾಂತ್ ಮಾತ್ರ ಎನ್ನುತ್ತಾರೆ ಅಭಿಮಾನಿಗಳು. ಅವರನ್ನು 'ಸೂಪರ್ ಸ್ಟಾರ್ ರಜನಿಕಾಂತ್' ಎಂದೇ ಎಲ್ಲರೂ ಸಂಬೋಧಿಸುತ್ತಾರೆ. ಆದರೆ ಈ 'ಸೂಪರ್ ಸ್ಟಾರ್' ಟ್ಯಾಗ್ ಅನ್ನು ತೆಗೆದುಹಾಕುವಂತೆ ಸ್ವತಃ ರಜನಿಕಾಂತ್ ಅವರೇ ಹೇಳಿದ್ದರು. ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿದ ಅವರು, 'ಈ ಸೂಪರ್ ಸ್ಟಾರ್ ಟೈಟಲ್ ಯಾವಾಗಲೂ ಸಮಸ್ಯೆಯೇ.. 'ಜೈಲರ್‌' ಚಿತ್ರದ ಹುಕುಮ್‌ ಹಾಡಿನಲ್ಲಿರುವ ಸೂಪರ್ ಸ್ಟಾರ್ ಪದವನ್ನು ತೆಗೆಯುವಂತೆ ಸಲಹೆ ಕೊಟ್ಟಿದ್ದೆ' ಎಂದು ಹೇಳಿದ್ದಾರೆ.

ಸಾಹಿತ್ಯ ಬರೆದಿರುವ ಸೂಪರ್ ಸುಬು ಅವರಿಗೆ ಹೇಳಿದ್ದೆ. ನನಗೂ ಈ ಸೂಪರ್ ಸ್ಟಾರ್ ಪದಕ್ಕೂ ಯಾಕೋ ಕೂಡಿ ಬರುತ್ತಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ಜೈಲರ್ ಸಿನಿಮಾದ ನಿರ್ದೇಶಕ ನೆಲ್ಸನ್ ಅವರನ್ನು ಈ ಸಿನಿಮಾದಿಂದ ತೆಗೆದುಹಾಕಿ ಎಂದೆಲ್ಲ ವಿರೋಧ ಬಂತು. ಅದಕ್ಕೆ ನಾನು ಒಪ್ಪಲಿಲ್ಲ ಎನ್ನುವ ಮಾತುಗಳನ್ನೂ ಅವರು ಆಡಿದರು.

ನಿರ್ದೇಶಕ ನೆಲ್ಸನ್‌ ಅವರ ಹಿಂದಿನ ಸಿನಿಮಾ 'ಬೀಸ್ಟ್‌' ಅಂದುಕೊಂಡಮಟ್ಟಿಗೆ ಯಶಸ್ಸು ಸಾಧಿಸಲಿಲ್ಲ. ಹಾಗಾಗಿ, ರಜನಿಕಾಂತ್ ಸಿನಿಮಾದಿಂದ ನೆಲ್ಸನ್‌ಗೆ ಕೋಕ್ ನೀಡುವುದು ಉತ್ತಮ ಎಂಬ ಸಲಹೆಗಳು ಬಂದಿದ್ದವು. ಅದರ ಬಗ್ಗೆ ಮಾತಾಡಿರುವ ರಜನಿಕಾಂತ್, 'ನಾವು ಸನ್ ಪಿಕ್ಚರ್ಸ್ ಆಫೀಸ್‌ನಲ್ಲಿ ಒಂದು ಅಂತರಿಕ ಸಭೆ ಮಾಡಿದೆವು. 'ಬೀಸ್ಟ್‌' ಸಿನಿಮಾವು ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳದಿದ್ದರೂ, ವಿತರಕರಿಗೆ ನಷ್ಟ ಉಂಟಾಗಿಲ್ಲ ಎಂಬ ವಿಚಾರ ಚರ್ಚೆಗೆ ಬಂತು..' ಎಂದು ರಜನಿಕಾಂತ್ ಹೇಳಿದರು. ಕೊನೆಗೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ, ನೆಲ್ಸನ್‌ರನ್ನೇ ಫೈನಲ್ ಮಾಡಿದ್ದರು ತಲೈವಾ.

ನಾನು 'ಅಣ್ಣಾಥೆ' ಚಿತ್ರದ ನಂತರ ತುಂಬ ಕಥೆಗಳನ್ನು ಕೇಳಿದೆ. ಬಹುತೇಕ ಎಲ್ಲವೂ ಕೂಡ 'ಬಾಷಾ', 'ಅಣ್ಣಾಮಲೈ' ರೀತಿಯಲ್ಲೇ ಇದ್ದವು. ಅವರೆಲ್ಲರೂ ದೊಡ್ಡ ಪ್ರಮಾಣದಲ್ಲಿ ಪ್ರಯತ್ನಿಸುತ್ತಿದ್ದರು. ನಾನು ತುಂಬಾ ಸ್ಕ್ರಿಪ್ಟ್‌ಗಳನ್ನು ತಿರಸ್ಕರಿಸಿದ್ದೇನೆ, ನನಗೆ ಆಗ ಬೇಸರವಾಯಿತು. ಕೊನೆಗೆ ಸ್ಕ್ರಿಪ್ಟ್‌ಗಳನ್ನು ಕೇಳುವುದನ್ನೇ ನಿಲ್ಲಿಸಿದೆ. ಆದ್ರೆ ನೆಲ್ಸನ್ ದಿಲೀಪ್‌ಕುಮಾರ್ ಒಮ್ಮೆ ಒನ್‌ಲೈನ್ ಹೇಳಿದ್ದರು. ಅದನ್ನು ಇನ್ನಷ್ಟು ಇಂಪ್ರೂವ್ ಮಾಡಿಕೊಂಡು ಬರಲು ಹೇಳಿದೆ. ಅವರು ಬೀಸ್ಟ್ ಶೂಟಿಂಗ್ ಮುಗಿಸಿ, 10 ದಿನಗಳ ನಂತರ ಬಂದು ನನಗೆ ಕಥೆ ಹೇಳಿದರು. ಅದು ಅದ್ಭುತವಾಗಿತ್ತು..' ಎಂದು ರಜನಿಕಾಂತ್ ಹೇಳಿದ್ದಾರೆ.

ಚಿತ್ರರಂಗಕ್ಕೆ ಬರುವ ವರ್ಷಗಳ ಹಿಂದೆ ನಡೆದ ಘಟನೆಯೊಂದರ ಕುರಿತು ಮಾತನಾಡಿದ ರಜನಿಕಾಂತ್, ನಾಟಕವೊಂದರ ಯಶಸ್ವಿ ಪ್ರದರ್ಶನದ ನಂತರ ರಾತ್ರಿ 2 ಗಂಟೆಗೆ ಕುಡಿದು ಮನೆಗೆ ಬಂದದ್ದನ್ನು ನೆನಪಿಸಿಕೊಂಡರು. ಸಂಭ್ರಮ ಆಚರಿಸಲು ಮಾತ್ರ ಕುಡಿಯಿರಿ ಮತ್ತು ಆ ಅಭ್ಯಾಸವನ್ನು ಯಾವಾಗಲು ಮಾಡಬೇಡಿ ಎಂದು ಅವರ ಸಹೋದರ ಸಲಹೆ ನೀಡಿದ್ದರಂತೆ. 

ನಂತರ ರಜನಿ ತಮ್ಮ ಅಭಿಮಾನಿಗಳಿಗೆ ತಮ್ಮ ಕುಟುಂಬದ ಪ್ರತಿಯೊಬ್ಬರಿಗೂ ಮದ್ಯಪಾನವು ಅನಾರೋಗ್ಯ ಮತ್ತು ದುಃಖವನ್ನು ಹೇಗೆ ತರುತ್ತದೆ ಎಂಬ ಬಗ್ಗೆ ಉದಾಹರಣೆ ನೀಡಿದರು. "ನಾನು ಮಾಡಿದ ದೊಡ್ಡ ತಪ್ಪುಗಳಲ್ಲಿ ಮದ್ಯಪಾನವು ಒಂದು" ಎಂದು ಅವರು ಒಪ್ಪಿಕೊಂಡರು.

ನಟ ಮೋಹನ್‌ಲಾಲ್‌ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತ ಪಡಿಸಿದ ನಂತರ, ನಟಿ ತಮನ್ನಾ ಹೇಗೆ ಆಧ್ಯಾತ್ಮಿಕ ವ್ಯಕ್ತಿಯಾಗಿದ್ದಾರೆ ಎಂದು ರಜಿನಿಕಾಂತ್ ವಿವರಿಸಿದರು. ಸನ್ ಪಿಕ್ಚರ್ಸ್ ಮಾಲೀಕ ಕಲಾನಿಧಿ ಮಾರನ್‌ ಅವರ ಪುತ್ರಿ ಕಾವ್ಯಾ ಮಾರನ್ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ರಜನಿಕಾಂತ್, 'ಕಲಾನಿಧಿ ಮಾರನ್ ಅವರು ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಉತ್ತಮ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬೇಕು. ಕ್ರೀಡಾಂಗಣದಲ್ಲಿ ಕಾವ್ಯಾ ಮಾರನ್‌ ಬೇಸರದಿಂದ ಇರುವುದನ್ನು ನೋಡುವುದಕ್ಕೆ ನನಗೆ ಇಷ್ಟವಿಲ್ಲ' ಎಂದು ರಜನಿಕಾಂತ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com