ಸೆಪ್ಟೆಂಬರ್ 6ಕ್ಕೆ 'ಡಾಲರ್ಸ್ ಪೇಟೆ' ಸಿನಿಮಾ ಬಿಡುಗಡೆ

ತಮಿಳುನಾಡಿನ ಬ್ಯಾಂಕ್‌ವೊಂದರ ಮ್ಯಾನೇಜರ್‌ನಿಂದ 13 ಕೋಟಿ ರೂ. 100 ಜನಕ್ಕೆ ಮಿಸ್‌ ಆಗಿ ಡೆಪಾಸಿಟ್‌ ಆಗುತ್ತದೆ. ಅದು ಹೇಗೆ, ಏನು ಅನ್ನುವದರ ಸುತ್ತ ಸಿನಿಮಾ ಕಥೆ ಸಾಗುತ್ತದೆ.
ಡಾಲರ್ಸ್ ಪೇಟೆ ಚಿತ್ರದ ಸ್ಟಿಲ್
ಡಾಲರ್ಸ್ ಪೇಟೆ ಚಿತ್ರದ ಸ್ಟಿಲ್
Updated on

ಸತ್ಯ ಘಟನೆ ಆಧರಿತ ಚಿತ್ರ ಡಾಲರ್ಸ್‌ ಪೇಟೆ ಸಿನಿಮಾ ಸೆಪ್ಟಂಬರ್ 6ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ತಮಿಳುನಾಡಿನ ಬ್ಯಾಂಕ್‌ವೊಂದರ ಮ್ಯಾನೇಜರ್‌ನಿಂದ 13 ಕೋಟಿ ರೂ. 100 ಜನಕ್ಕೆ ಮಿಸ್‌ ಆಗಿ ಡೆಪಾಸಿಟ್‌ ಆಗುತ್ತದೆ. ಅದು ಹೇಗೆ, ಏನು ಅನ್ನುವದರ ಸುತ್ತ ಸಿನಿಮಾ ಕಥೆ ಸಾಗುತ್ತದೆ.

ಡಾಲರ್ಸ್ ಪೇಟೆ ಮೂಲಕ ಮಾರ್ಫಿ, ಮದಗಜ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ಮೋಹನ್ ಎನ್ ಮುನಿನಾರಾಯಣಪ್ಪ ಸ್ವಾತಂತ್ರ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ.

ಹೈಪರ್ ಲಿಂಕ್ ಥ್ರಿಲ್ಲರ್ ‌ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ಲೂಸಿಯಾ ಪವನ್ ಪತ್ನಿ ಸೌಮ್ಯ ಜಗನ್ ಮೂರ್ತಿ, ಮೆಟ್ರೋ ಸಾಗಾ ಖ್ಯಾತಿಯ ಆಕರ್ಷ್ ಕಮಲ, ವೆಂಕಟ್ ರಾಜ್, ಕುಶಾಲ್ಸ್ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದು, ದಿಯಾ ಪೃಥ್ವಿ ಅಂಬರ್ ಗೆಸ್ಟ್ ಅಪಿಯರೆನ್ಸ್ ಚಿತ್ರದಲ್ಲಿದೆ.

ಡಾಲರ್ಸ್ ಪೇಟೆ ಚಿತ್ರದ ಸ್ಟಿಲ್
ಆಗಸ್ಟ್ 30ಕ್ಕೆ ದರ್ಶನ್​ ನಟನೆಯ 'ಕರಿಯ' ಸಿನಿಮಾ ರೀ-ರಿಲೀಸ್!

ಉಳಿದಂತೆ ದತ್ತು ಬಣಕರ್, ಕೌಶಿಕ್, ರಾಘು ರಾಮಕೊಪ್ಪ, ಹೊನ್ನವಳ್ಳಿ ಕೃಷ್ಣ, ಡ್ರಾಮಾ ಜೂನಿಯರ್ಸ್ ಮಹೇಂದ್ರ ಒಳಗೊಂಡ ಕಲಾಬಳಗ ಚಿತ್ರದಲ್ಲಿದೆ.

ಸೂರಜ್ ಜೋಯಿಸ್ ಸಂಗೀತ ನಿರ್ದೇಶನ, ಆನಂದ್ ಸುಂದರೇಶ ಛಾಯಾಗ್ರಹಣ, ಮಹೇಶ್ ತೊಗಟ್ಟ ಸಂಕಲನ, ಅರ್ಜುನ್ ರಾಜ್ ಮತ್ತು ನರಸಿಂಹ ಸಾಹಸ ನಿರ್ದೇಶನ, ರಮೇಶ್ ಎಸ್, ಮನೋಹರ ಸಹಬರವಣಿಗೆ ಸಿನಿಮಾಕ್ಕಿದೆ. ಪೆಂಟ್ರಿಕ್ಸ್ ಎಂಟಟೈನ್ಮೆಂಟ್ ಬ್ಯಾನರ್ ನಡಿ ಪೂಜಾ ಟಿ.ವೈ ಚಿತ್ರ ನಿರ್ಮಾಣ ಮಾಡಿದ್ದಾರೆ. ಬೆಂಗಳೂರು, ಮಂಗಳೂರು ಸುತ್ತಮುತ್ತ ಡಾಲರ್ಸ್ ಪೇಟೆ ಸಿನಿಮಾ ಚಿತ್ರೀಕರಣ ನಡೆಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com