ತಾಯಿಗೆ Max ನೋಡುವ ಆಸೆ ಇತ್ತು: ಚಿತ್ರದ ಮಾತುಕತೆ ವೇಳೆ ಕಿಚ್ಚ ಸುದೀಪ್ ಭಾವುಕ

ಸಿನಿಮಾ ಬಿಡುಗಡೆಗೆ ಸಜ್ಜಾಗಿರುವ ಚಿತ್ರತಂಡ ಸೋಮವಾರ ಸುದ್ದಿಗೋಷ್ಠಿ ನಡೆಸಿದ್ದು, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುದೀಪ್ ಅವರು ತಾಯಿಯ ನೆನೆದು ಭಾವುಕರಾದರು.
ನಟ ಸುದೀಪ್
ನಟ ಸುದೀಪ್
Updated on

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ಮ್ಯಾಕ್ಸ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಡಿಸೆಂಬರ್ 25ರಂದು ಚಿತ್ರ ತೆರೆಗೆ ಬರುತ್ತಿದೆ.

ಸಿನಿಮಾ ಬಿಡುಗಡೆಗೆ ಸಜ್ಜಾಗಿರುವ ಚಿತ್ರತಂಡ ಸೋಮವಾರ ಸುದ್ದಿಗೋಷ್ಠಿ ನಡೆಸಿದ್ದು, ಸುದ್ದಿಗೋಷ್ಠಿಯಲ್ಲಿ ಸುದೀಪ್ ಅವರು ತಾಯಿಯ ನೆನೆದು ಭಾವುಕರಾದರು.

ತಾಯಿಗೆ ಮ್ಯಾಕ್ಸ್ ನೋಡುವ ಆಸೆ ಇತ್ತು. ಅವರ ಕೊನೆಯ ಆಸೆ ಈಡೇರಿಸಲಾಗಲಿಲ್ಲ ಎಂದು ಭಾವುಕರಾದರು.

ಈ ಚಿತ್ರವನ್ನು ನೋಡಬೇಕು ಎಂದು ತಾಯಿ ಹೇಳಿದ್ದರು. ಆ ಆಸೆ ಈಡೇರಲಿಲ್ಲ. ಅವರ ಆಶೀರ್ವಾದ ಚಿತ್ರದ ಮೇಲೆ ಸದಾ ಇರುತ್ತದೆ. ಆಗಾಗ ಅವರಿಗೆ ಕೆಲವು ತುಣುಕುಗಳನ್ನು ತೋರಿಸುತ್ತಿದ್ದೆ. ಅದು ಬಿಟ್ಟರೆ, ಅವರು ಪೂರ್ತಿ ಚಿತ್ರವನ್ನು ನೋಡುವುದಕ್ಕೆ ಸಾಧ್ಯವೇ ಆಗಲಿಲ್ಲ ಎಂದು ಹೇಳಿದರು.

ಚಿತ್ರ ಬಿಡುಗಡೆಯನ್ನು ಮುಂದಿನ ವರ್ಷಕ್ಕೆ ಮುಂದೂಡಿದ್ದರೆ, ನನಗೆ ತೀವ್ರ ನಿರಾಶೆಯಾಗುತ್ತಿತ್ತು. ನನ್ನ ಕೊನೆಯ ಚಿತ್ರ ಬಿಡುಗಡೆಯಾಗಿ ಎರಡೂವರೆ ವರ್ಷಗಳು ಕಳೆದಿವೆ, ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವರ್ಷ ಮ್ಯಾಕ್ಸ್ ಬಿಡುಗಡೆಯಾಗುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.

ನಟ ಸುದೀಪ್
ಯಾವ ಭಿನ್ನಾಭಿಪ್ರಾಯಗಳೂ ಇಲ್ಲ: 'ಮ್ಯಾಕ್ಸ್' ಬಿಡುಗಡೆ ಬಗ್ಗೆ ಕಿಚ್ಚ ಸುದೀಪ್ ಸ್ಪಷ್ಟನೆ

ಮ್ಯಾಕ್ಸ್ ಒಂದು ರಾತ್ರಿಯಲ್ಲಿ ತೆರೆದುಕೊಳ್ಳುವ ಕಥೆಯಾಗಿದ್ದು, ಸುದೀಪ್ ಅವರು ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಸುದೀಪ್‍ಗೆ ನಾಯಕಿಯಾಗಿ ಯಾರೂ ನಟಿಸಿಲ್ಲದಿದ್ದರೂ, ಸಂಯುಕ್ತಾ ಹೊರ್ನಾಡ್ ಮತ್ತು ಸುಕೃತಾ ವಾಗ್ಲೆ ಅವರು ಪೊಲೀಸ್ ಅಧಿಕಾರಿಗಳಾಗಿ ನಟಿಸಿದ್ದಾರೆ.

ಚಿತ್ರದಲ್ಲಿ ಸುದೀಪ್ ಅವರ ತಾಯಿಯಾಗಿ ಸುಧಾ ಬೆಳವಾಡಿಯವರು ನಟಿಸಿದ್ದಾರೆ. ಉಳಿದಂತೆ ಕರಿಸುಬ್ಬು, ವಿಜಯ್‍ ಚೆಂದೂರು, ಪ್ರಮೋದ್‍ ಶೆಟ್ಟಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರದಲ್ಲಿ ಸುದೀಪ್ ಅವರಿಗೆ ತಾಯಿಯಾಗಿ ನಟಿಲಿಪುವುಗು ನಿಜಕ್ಕೂ ಸ್ಫೂರ್ತಿದಾಯಕ. ಚಿತ್ರ ಕಮರ್ಷಿಯಲ್ ಎಂಟರ್‌ಟೈನರ್ ಆಗಿದ್ದು, ಆಕ್ಷನ್‌ನಿಂದ ಕೂಡಿದೆ. ಚಿತ್ರದ ಭಾಗವಾಗಿರಲು ನಾನು ಕೃತಜ್ಞಳಾಗಿದ್ದೇನೆಂದು ಸುಧಾಸುಧಾ ಬೆಳವಾಡಿಯವರು ಹೇಳಿದ್ದಾರೆ.

ಹಿರಿಯ ನಟ ಕರಿ ಸುಬ್ಬು ಮಾತನಾಡಿ, ನನ್ನ ಪಾತ್ರದ ಬಗ್ಗೆ ತಿಳಿಯಲು ಚಿತ್ರವನ್ನು ನೋಡಲೇಬೇಕು. ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ದಿಗ್ಗಜ ನಿರ್ಮಾಪಕರೊಂದಿಗೆ ಕೆಲಸ ಮಾಡಿರುವುದು ಗೌರವ ತಂದಿದೆ. ಮ್ಯಾಕ್ಸ್ ದೊಡ್ಡ ಯಶಸ್ಸನ್ನು ಪಡೆಯುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ತಿಳಿಸಿದರು.

ನಟಿಸಿರುವ ಸಂಯುಕ್ತಾ ಹೊರ್ನಾಡ್ ಮಾತನಾಡಿ, ಇದು ನನ್ನ ಕನಸ್ಸಾಗಿತ್ತು. ಎಲ್ಲರಂತೆ, ನಾನೂ ಸುದೀಪ್ ಸರ್ ಅವರೊಂದಿಗೆ ನಟಿಸಲು, ಅವರೊಂದಿಗೆ ತೆರೆ ಮೇಲೆ ಬರಲು ಬಯಸಿದ್ದೆ. ಅಂತಿಮವಾಗಿ ಆ ಕನಸು ನನಗಾಗಿದೆ. ಬೆಳಗಿನ ಜಾವ 3 ಗಂಟೆಯಾದರೂ, ಸಂಜೆಯಾದರೂ ಅವರ ಶಕ್ತಿ ಒಂದೇ ರೀತಿ ಇರುತ್ತದೆ. ಆವರ ಸಮರ್ಪಣಾ ಭಾವ ನಮಗೆ ಪ್ರೇರಣೆ ನೀಡುತ್ತದೆ ಎಂದರು.

ನಟ ಸುದೀಪ್
ಸುದೀಪ್ ನಟನೆಯ 'ಮ್ಯಾಕ್ಸ್' ಚಿತ್ರದ ಟೀಸರ್ ರಿಲೀಸ್: 'ಬಾ ಬಾ ಬ್ಲ್ಯಾಕ್ ಶೀಪ್' ರೈಮ್ ಗೆ ಹೊಸ ಟಚ್!

ಸುಕೃತಾ ವಾಗ್ಲೆ ಮಾತನಾಡಿ, 2017 ರಲ್ಲಿ, ಸುದೀಪ್ ಸರ್ ಅವರೊಂದಿಗೆ ಕೆಲಸ ಮಾಡುವ ಇಂಗಿತ ವತ್ಯಕ್ತಪಡಿಸಿದ್ದೆ. ಅದು ನಿಜವಾಗಿದೆ. ಸುದೀಪ್ ಅವರು ಸರಸ್ವತಿಯ ವ್ಯಕ್ತಿತ್ವದಂತಿದ್ದಾರೆ, ಪ್ರತಿಯೊಂದು ಕಲೆಯನ್ನು ಕರಗತ ಮಾಡಿಕೊಳ್ಳುತ್ತಾರೆಂದು ಹೇಳಿದರು.

ವಿಜಯ್‍ ಚೆಂದೂರು, ಅವರು ಮಾತನಾಡಿ, ಇದು ನನ್ನ ವೃತ್ತಿಜೀವನದ ಅತ್ಯುತ್ತಮ ಅಧ್ಯಾಯಗಳಲ್ಲಿ ಒಂದಾಗಿದೆ. ಪ್ರತಿಯೊಂದು ಪಾತ್ರವೂ, ಚೌಕಟ್ಟಿನ ಹೊರಗಿದ್ದರೂ ಸಹ ನಿರ್ಣಾಯಕವಾಗಿದೆ.. ಡಿಸೆಂಬರ್ 25 ಮರೆಯಲಾಗದು ಎಂದು ಹೇಳಿದರು.

ವಿ ಕ್ರಿಯೇಷನ್ಸ್ ಬ್ಯಾನರ್‌ನಡಿ ಕಲೈಪುಲಿ ಎಸ್ ಧನು ಮತ್ತು ಕಿಚ್ಚ ಕ್ರಿಯೇಷನ್ಸ್ ಸಂಸ್ಥೆಯಡಿ ಸುದೀಪ್‍ ನಿರ್ಮಿಸಿರುವ ಈ ಚಿತ್ರಕ್ಕೆ ವಿಜಯ್‍ ಕಾರ್ತಿಕೇಯ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಬಿ.ಅಜನೀಶ್ ಲೋಕನಾಥ್ ಅವರ ಸಂಗೀತ ಈ ಚಿತ್ರಕ್ಕಿದೆ.

ಈ ಚಿತ್ರದಲ್ಲಿ ಸುದೀಪ್ ಜೊತೆ ವರಲಕ್ಷ್ಮೀ ಶರತ್‌ಕುಮಾರ್, ತೆಲುಗು ನಟ ಸುನೀಲ್, ಶರತ್ ಲೋಹಿತಾಶ್ವ, 'ಕಾಲಕೇಯ' ಪ್ರಭಾಕರ್, ಪ್ರಮೊದ್ ಶೆಟ್ಟಿ, ನರೇನ್, ಮುಂತಾದವರು ನಟಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com