ಪ್ರತಿಯೊಂದು ಚಿತ್ರವೂ ನನಗೆ ಹೊಸ ಆರಂಭ: ನಟ ದರ್ಶನ್

ತಮ್ಮ ಅಭಿಮಾನಿಗಳೊಂದಿಗೆ ( ಅವರ ಸೆಲೆಬ್ರಿಟಿಗಳು) ಸ್ಟಾರ್ ಡಮ್ ನೊಂದಿಗೆ ಹೊಳೆಯುತ್ತಾ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆಲುವು ಮತ್ತು ಸೋಲಿನ ಸುಳಿಯೊಂದಿಗೆ ತಮ್ಮನ್ನು ತಾವು ಕಂಡುಕೊಂಡಿದ್ದಾರೆ.
ನಟ ದರ್ಶನ್
ನಟ ದರ್ಶನ್Express
Updated on

ತಮ್ಮ ಅಭಿಮಾನಿಗಳೊಂದಿಗೆ ( ಅವರ ಸೆಲೆಬ್ರಿಟಿಗಳು) ಸ್ಟಾರ್ ಡಮ್ ನೊಂದಿಗೆ ಹೊಳೆಯುತ್ತಾ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆಲುವು ಮತ್ತು ಸೋಲಿನ ಸುಳಿಯೊಂದಿಗೆ ತಮ್ಮನ್ನು ತಾವು ಕಂಡುಕೊಂಡಿದ್ದಾರೆ. ಈ ವರ್ಷ ಅವರು ಬಹು ಯಶಸ್ಸಿನ ಅಲೆಯಲ್ಲಿ ತೇಲಿದ್ದರಿಂದ ಭರ್ಜರಿಯಾಗಿ ಹುಟ್ಟಹಬ್ಬ ಆಚರಿಸಲಾಗಿದೆ. ಬಾಕ್ಸ್ ಆಫೀಸ್‌ನಲ್ಲಿ 50 ದಿನ ಪೂರೈಸಿದ ಬ್ಲಾಕ್‌ ಬಸ್ಟರ್ ಕಾಟೇರ ವಿಜಯದ ಹೊರತಾಗಿ ಅವರ ಮುಂಬರುವ ಸಾಹಸದ ಫಸ್ಟ್-ಲುಕ್ ಟೀಸರ್, ಡೆವಿಲ್-ದಿ ಹೀರೋ ಫೆಬ್ರವರಿ 16 ರಂದು ಹೊರಬಂದಿದೆ.

ಮೀಡಿಯಾ ಹೌಸ್ ಸ್ಟುಡಿಯೋ ನಿರ್ಮಿಸುತ್ತಿರುವ ಐತಿಹಾಸಿಕ ಸ್ವಾತಂತ್ರ್ಯ ಹೋರಾಟಗಾರ ಸಿಂಧೂರ ಲಕ್ಷ್ಮಣ ಆಧಾರಿತ ನಿರ್ದೇಶಕ ತರುಣ್ ಸುಧೀರ್ ಅವರ ಡಿ 59, ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ ಪ್ರೇಮ್ ಅವರ ಮುಂಬರುವ ಚಿತ್ರ ಸೇರಿದಂತೆ ಕೆಲವೊಂದು ಚಿತ್ರಗಳಲ್ಲಿ ಅವರು ನಟಿಸುತ್ತಿದ್ದಾರೆ. ಅಭಿಮಾನಿಗಳ ನಡುವೆ 55 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಪರದೆಯ ಮೇಲೆ ಮಿಂಚಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್, ಉದ್ಯಮದಲ್ಲಿ 25 ವರ್ಷಗಳನ್ನು ಸ್ಮರಿಸುವ ಮಹತ್ವದ ಮೈಲಿಗಲ್ಲನ್ನು ಗುರುತಿಸಿದ್ದಾರೆ. ಇದು ಅನಂತ ಸಾಧ್ಯತೆಗಳಿಂದ ತುಂಬಿದ ಅಂತ್ಯವಿಲ್ಲದ ಪಯಾಣದ ಆರಂಭ ಎಂದು ಅವರು ಭಾವಿಸುತ್ತಾರೆ.

ನಟ ದರ್ಶನ್
ದರ್ಶನ್ ಗೆ ಹುಟ್ಟುಹಬ್ಬದ ಸಂಭ್ರಮ: ಮನೆ ಬಳಿ ಜನಸಾಗರ, ಡೆವಿಲ್ ಚಿತ್ರದ ಫಸ್ಟ್ ಲುಕ್ ಬಿಡುಗಡೆ!

ಈ ಅಸಾಧಾರಣ ಪ್ರಯಾಣ ಕುರಿತು ಮನಬಿಚ್ಚಿ ಮಾತನಾಡಿದ ದರ್ಶನ್, ಇದು ಸಾಕಷ್ಟು ಎತ್ತರ ಮತ್ತು ಕೆಳಗಿಳಿದ, ವೈಭವದ ಕ್ಷಣಗಳು, ನಮ್ರತೆಯ ನಿದರ್ಶನಗಳಿಂದ ತುಂಬಿದ ಸವಾರಿಯಾಗಿದೆ. ಇವೆಲ್ಲದರ ನಡುವೆ, ನನ್ನ ಶ್ರೇಷ್ಠ ಸಾಧನೆಯು ನನ್ನ ಅಭಿಮಾನಿಗಳು, ನನ್ನ ಸೆಲೆಬ್ರಿಟಿಗಳ ಅಚಲವಾದ ಬೆಂಬಲ ಮತ್ತು ಪ್ರೀತಿಯಾಗಿ ಉಳಿದಿದೆ. ಲೂನಾದಿಂದ ವೃತ್ತಿಜೀವನ ಆರಂಭಿಸಿ, ಇಂದು ಲಂಬೋರ್ಗಿನಿಯಲ್ಲಿ ಓಡಾಡುತ್ತಿದ್ದೇನೆ ಎಂದು ಹೇಳಿದರು.

ದರ್ಶನ್ ಪ್ರಯಾಣ ಪರಿಶ್ರಮ ಮತ್ತು ಸಮರ್ಪಣಾ ಶಕ್ತಿಯ ಪರಿವರ್ತಕ ಶಕ್ತಿಯ ಬಗ್ಗೆ ಹೇಳುತ್ತದೆ. ಯಾರೊಬ್ಬರ ಪ್ರಯಾಣದಲ್ಲಿ ಅದೃಷ್ಟವು ಯಾವುದೇ ಪಾತ್ರವನ್ನು ವಹಿಸುವುದಿಲ್ಲ ಎಂದು ಅವರು ಪ್ರತಿಪಾದಿಸಿದರು. ಯಾವುದೇ ಕ್ಷೇತ್ರದಲ್ಲೂ ಕಠಿಣ ಪರಿಶ್ರಮ ಮಾತ್ರ ಮುಂದಕ್ಕೆ ಬೆಳಸುತ್ತದೆ ಎಂದರು.

ನಟ ದರ್ಶನ್
ಪ್ರೇಮ್ ನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಂದಿನ ಚಿತ್ರಕ್ಕೆ ತೆಲುಗು ನಟ ಚಿರಂಜೀವಿ ಎಂಟ್ರಿ?

ಮೆಜೆಸ್ಟಿಕ್‌ನಿಂದ ಕಾಟೇರವರೆಗಿನ ತಮ್ಮ ಚಿತ್ರಗಳ ಬಗ್ಗೆ ಹೆಮ್ಮೆಪಡುವ ದರ್ಶನ್ “ನಾನು ನಟಿಸುವ ಪ್ರತಿಯೊಂದು ಪಾತ್ರವೂ ಹೊಸ ಪಾತ್ರದಂತೆ ನಟಿಸುತ್ತೇನೆ. ನಿರ್ದೇಶಕರ ದೃಷ್ಟಿಯಲ್ಲಿ ಅಭಿನಯಿಸಲು ಕಾಯುತ್ತಿರುತ್ತೇನೆ ಎಂದು ಅವರು ವಿವರಿಸಿದರು.

ಪ್ರತಿಯೊಂದು ಪಾತ್ರವನ್ನು ಮುಕ್ತ ಮನಸ್ಸು ಮತ್ತು ಹೊಸತನ ಇಚ್ಛೆಯೊಂದಿಗೆ ಅಭಿನಯಿಸಲು ಬಯಸುತ್ತೇನೆ. ಪ್ರತಿ ಚಿತ್ರವು ತನ್ನದೇ ಆದ ಅರ್ಹತೆಯ ಮೇಲೆ ನಿಂತಿದೆ. ನಾನು ಎಂದಿಗೂ ಹಿಂದಿನ ಗೆಲುವುಗಳ ನೆರಳನ್ನು ಬೆನ್ನಟ್ಟುವುದಿಲ್ಲ. ಬದಲಾಗಿ ಪ್ರತಿ ಪ್ರಾಜೆಕ್ಟ್‌ನಲ್ಲಿ ನನ್ನ ಅತ್ಯುತ್ತಮವಾದದ್ದನ್ನು ನೀಡುವುದರತ್ತ ಗಮನಹರಿಸುತ್ತೇನೆ, ನಿರ್ಮಾಪಕರು ಮತ್ತು ಪ್ರೇಕ್ಷಕರು ಇಬ್ಬರೂ ತೃಪ್ತರಾಗುತ್ತಾರೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳುತ್ತೇನೆ ಎಂದು ಕಾಟೇರ ಜಯಭೇರಿ ಮತ್ತು ಡೇವಿಲ್ ಚಿತ್ರದ ನಿರೀಕ್ಷೆ ನಡುವೆ ಯಶಸ್ಸಿನ ಸ್ವರೂಪ ಕುರಿತು ಹೇಳಿದರು.

ಪ್ರತಿಯೊಂದು ಚಿತ್ರದ ಯಶಸ್ಸಿನೊಂದಿಗೆ ಶೈನ್ ಆಗುವ ದರ್ಶನ್, ಆಗಾಗ್ಗೆ ತಮ್ಮ ವೈಯಕ್ತಿಕ ವಿಚಾರಗಳಿಂದಲೂ ಸುದ್ದಿಯಾಗುತ್ತಾರೆ. ಆದರೆ, ಅಭಿನಯದ ಮೂಲಕ ಮಾಡುವ ಪ್ರಭಾವವು ನನಗೆ ಮುಖ್ಯವಾಗಿದೆ. ಉಳಿದೆದೆಲ್ಲಾ ಬರೀ ಶಬ್ದ ಎಂದು ಅವರು ಹೇಳುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com