ಬೆಂಗಳೂರು: ಸಿನಿಮಾದಲ್ಲಿ ಅವಕಾಶ ಕೊಡಿಸುವ ನೆಪದಲ್ಲಿ ಸೆಕ್ಸ್, ವಂಚನೆ; ನಟನ ವಿರುದ್ಧ ದೂರು ದಾಖಲು

27 ವರ್ಷದ ಬ್ಯೂಟಿಷಿಯನ್ ಒಬ್ಬರು, ಕೆಲವು ಕನ್ನಡ ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿರುವ ಸಂತೋಷ್ ವಿರುದ್ಧ ದೂರು ದಾಖಲಿಸಿದ್ದಾರೆ.
ಆರೋಪಿ ಸಂತೋಷ್
ಆರೋಪಿ ಸಂತೋಷ್

ಬೆಂಗಳೂರು: ಸಿನಿಮಾದಲ್ಲಿ ಅವಕಾಶ ಕೊಡಿಸುವ ನೆಪದಲ್ಲಿ ಯುವತಿಯನ್ನು ಪರಿಚಯಿಸಿಕೊಂಡು, ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡು ವಂಚಿಸಿರುವ ಸಂಬಂಧ ಜ್ಞಾನಭಾರತಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

27 ವರ್ಷದ ಬ್ಯೂಟಿಷಿಯನ್ ಒಬ್ಬರು, ಕೆಲವು ಕನ್ನಡ ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿರುವ ಸಂತೋಷ್ ವಿರುದ್ಧ ದೂರು ದಾಖಲಿಸಿದ್ದಾರೆ, ಉಳ್ಳಾಲ ಮುಖ್ಯರಸ್ತೆ ನಿವಾಸಿಯಾಗಿರುವ ಮಹಿಳೆ, ಮದುವೆಯ ಭರವಸೆ ನೀಡಿ ಸಂತೋಷ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.

ಖಾಸಗಿ ಛಾಯಾಚಿತ್ರಗಳು ಮತ್ತು ವಿಡಿಯೋಗಳ ಮೂಲಕ ಆಕೆಯನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾನೆ ಎಂದು ಆರೋಪಿಸಲಾಗಿದೆ. ಆತನಿಗೆ ವಿವಾಹವಾಗಿದೆ ಎಂದು ತಿಳಿದ ಮಹಿಳೆ ಪೊಲೀಸರನ್ನು ಸಂಪರ್ಕಿಸಿದ್ದಾಳೆ.

ಆರೋಪಿ ಸಂತೋಷ್
ಬೆಂಗಳೂರು: ಗಿಫ್ಟ್ ಡೀಡ್ ಮೂಲಕ ವೃದ್ಧೆಯ ಆಸ್ತಿ ಕಬಳಿಕೆಗೆ ಸಂಚು; ಬಾಡಿಗೆದಾರರ ನೆಪದಲ್ಲಿ ವಂಚನೆ ಯತ್ನ!

ಸಂತೋಷ್‌ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ. ರಾಯಚೂರಿನ ಯುವತಿ, ತಂದೆ– ತಾಯಿ ಜೊತೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. 2019ರಲ್ಲಿ ಯುವತಿಗೆ ಸಂತೋಷ್‌ ಪರಿಚಯವಾಗಿತ್ತು.

ಸಿನಿಮಾ ನಟನೆಂದು ಆರೋಪಿ ಹೇಳಿಕೊಂಡಿದ್ದ. ಕನ್ನಡ ಹಾಗೂ ತಮಿಳು ಸಿನಿಮಾದಲ್ಲಿ ನಟಿಯಾಗಿ ಅಭಿನಯಿಸಲು ಅವಕಾಶ ಕೊಡಿಸುವುದಾಗಿ ಯುವತಿಗೆ ತಿಳಿಸಿದ್ದ. ಅದನ್ನು ನಂಬಿದ್ದ ಯುವತಿ, ಆರೋಪಿಗೆ ತಮ್ಮ ಮೊಬೈಲ್ ನಂಬರ್ ನೀಡಿದ್ದರು. ಆಕೆಯನ್ನು ನಗರದ ವಿವಿಧ ಲಾಡ್ಜ್‌ಗಳಿಗೆ ಕರೆದೊಯ್ದು ದೈಹಿಕ ಸಂಬಂಧ ಬೆಳೆಸಿದ್ದ ಎನ್ನಲಾಗಿದೆ.

ಸಂತೋಷ್ ಖಾಸಗಿ ಮತ್ತು ಆತ್ಮೀಯ ಕ್ಷಣಗಳನ್ನು ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಮೂರು ವರ್ಷಗಳ ನಂತರ ಯಾವುದೇ ಸಿನಿಮಾ ಪಾತ್ರಗಳು ಸಿಗದ ಕಾರಣ ಆತನಿಂದ ದೂರ ಉಳಿದಿದ್ದಾಗಿ ದೂರುದಾರರು ತಿಳಿಸಿದ್ದಾರೆ.

ಆರೋಪಿ ಸಂತೋಷ್
ಮದುವೆಯಾಗುವುದಾಗಿ ನಂಬಿಸಿ ನಟಿಗೆ ವಂಚನೆ: ತಮಿಳುನಾಡು ಮಾಜಿ ಸಚಿವ ಮಣಿಕಂದನ್ ವಿರುದ್ಧ ಕೇಸ್ ದಾಖಲು

ಫೆಬ್ರವರಿ 14 ರಂದು ಆರೋಪಿಯು ಜ್ಞಾನಭಾರತಿಯಲ್ಲಿರುವ ಆಕೆಯ ಮನೆಗೆ ಹೋಗಿ ಆಕೆಯ ಮೇಲೆ ದೌರ್ಜನ್ಯ ನಡೆಸಿದ್ದ ಎನ್ನಲಾಗಿದೆ. ತನ್ನನ್ನು ಅವಾಯ್ಡ್ ಮಾಡಿದರೇ ಹಾಗೂ ನಿಯಮಿತವಾಗಿ ಭೇಟಿಯಾಗದಿದ್ದರೆ ಆಕೆಯ ಚಿತ್ರಗಳು ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿ, ಆಕೆ ಮೇಲೆ ಹಲ್ಲೆ ಮಾಡಿದ್ದಾನೆ. ನಂತರ ಸಂತ್ರಸ್ತೆ ಚಿಕಿತ್ಸೆ ಪಡೆದು ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

ಕಳೆದ ವರ್ಷ ಜೂನ್‌ನಲ್ಲಿ ಸಂತ್ರಸ್ತೆ ಆರೋಪಿಯ ವಿರುದ್ಧ ದೂರು ದಾಖಲಿಸಿದ್ದರು. ಪ್ರಕರಣವನ್ನು ಬೆಂಗಳೂರು ಗ್ರಾಮಾಂತರಕ್ಕೆ ವರ್ಗಾಯಿಸಲಾಗಿತ್ತು. ಸಂತ್ರಸ್ತೆ ಫೆಬ್ರವರಿ 15 ರಂದು ಮತ್ತೊಂದು ದೂರು ದಾಖಲಿಸಿದ್ದಾರೆ. ಪ್ರಕರಣವು ತನಿಖೆಯಲ್ಲಿದೆ ಎಂದು ಡಿಸಿಪಿ (ಪಶ್ಚಿಮ) ಎಸ್ ಗಿರೀಶ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com