ರಿಷಭ್ ಶೆಟ್ಟಿಗೆ ಹುಟ್ಟುಹಬ್ಬದ ಸಂಭ್ರಮ: ವಿಶೇಷವಾಗಿ ಶುಭ ಕೋರಿದ ಪತ್ನಿ ಪ್ರಗತಿ! ವಿಡಿಯೋ

ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಹಂಚಿಕೊಂಡಿರುವ ಪ್ರಗತಿ, ರಿಷಭ್ ಶೆಟ್ಟಿಯಿಂದ ಹೇಗೆ ಶಕ್ತಿ ಪಡೆಯುತ್ತಾರೆ ಎಂಬುದನ್ನು ಬರೆದಿದ್ದಾರೆ.
ಪ್ರಗತಿ, ರಿಷಭ್ ಶೆಟ್ಟಿ
ಪ್ರಗತಿ, ರಿಷಭ್ ಶೆಟ್ಟಿ
Updated on: 

ಕನ್ನಡ ಚಿತ್ರರಂಗದ ನಟ, ನಿರ್ದೇಶಕ, ಕಥೆಗಾರ ರಿಷಭ್ ಶೆಟ್ಟಿಗೆ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ಶುಭ ಸಂದರ್ಭದಲ್ಲಿ ಅತ್ಯಂತ ಆಕರ್ಷಿತವಾದ ವಿಡಿಯೋವೊಂದನ್ನು ಹಂಚಿಕೊಳ್ಳುವ ಮೂಲಕ ಅವರ ಪತ್ನಿ ಪ್ರಗತಿ ವಿಶೇಷ ರೀತಿಯಲ್ಲಿ ಶುಭಾಶಯ ಕೋರಿದ್ದಾರೆ. ಫೆಬ್ರವರಿ 9, 2017 ರಂದು ವಿವಾಹವಾದ ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಪ್ರಗತಿ, ರಿಷಭ್ ಶೆಟ್ಟಿ
ರಿಷಭ್ ಶೆಟ್ಟಿ ಮುಂದಿನ ಆಕ್ಷನ್-ಕಾಮಿಡಿ ಸಿನಿಮಾ 'ಹಿರೋ'

ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಹಂಚಿಕೊಂಡಿರುವ ಪ್ರಗತಿ, ರಿಷಭ್ ಶೆಟ್ಟಿಯಿಂದ ಹೇಗೆ ಶಕ್ತಿ ಪಡೆಯುತ್ತಾರೆ ಎಂಬುದನ್ನು ಬರೆದಿದ್ದಾರೆ. ತನ್ನ ಜೀವನದಲ್ಲಿ ಅವರನ್ನು ಪತಿಯಾಗಿ ಪಡೆದಿದ್ದಕ್ಕಾಗಿ ಕೃತಜ್ಞಳಾಗಿರುವುದಾಗಿ ಹೇಳಿದ್ದಾರೆ. ನನ್ನ ಜೀವನದ ಆಧಾರಸ್ತಂಭಕ್ಕೆ ಜನ್ಮದಿನದ ಶುಭಾಶಯಗಳು. ನೀವು ಎಂತಹ ಅದ್ಭುತ ವ್ಯಕ್ತಿ ಎಂದು ಜಗತ್ತಿಗೆ ತಿಳಿಸಲು ಬಯಸುತ್ತೇನೆ. ನಿಮ್ಮನ್ನು ನಿಜವಾಗಿಯೂ ತಿಳಿದಿರುವವರು ಅದೃಷ್ಟವಂತರು. ನಿಮ್ಮ ಶಕ್ತಿ, ಬುದ್ಧಿವಂತಿಕೆ ಮತ್ತು ಪ್ರೀತಿ ನಮಗೆಲ್ಲರಿಗೂ ಸ್ಫೂರ್ತಿ ನಾವು ಒಟ್ಟಿಗೆ ಇರುವುದಕ್ಕಾಗಿ ನಾನು ಪ್ರತಿದಿನ ದೇವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಅವರು ಬರೆದುಕೊಂಡಿದ್ದಾರೆ.

ಈ ವೀಡಿಯೊದಲ್ಲಿ, ರಿಷಭ್ ಶೆಟ್ಟಿ ತನ್ನ ಕುಟುಂಬ, ಸ್ನೇಹಿತರು, ಹೆಂಡತಿ ಮತ್ತು ಮಕ್ಕಳೊಂದಿಗೆ ಆನಂದಿಸುತ್ತಿರುವ ಕ್ಷಣವನ್ನು ಕಾಣಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com