ಅನಿರುದ್ಧ್ ನಟನೆಯ 'ಚೆಫ್ ಚಿದಂಬರ' ಟ್ರೈಲರ್ ಬಿಡುಗಡೆ; ಚಿತ್ರಕ್ಕೆ ಶುಭಕೋರಿದ ನಟ ರಮೇಶ್ ಅರವಿಂದ್

ಅನಿರುದ್ಧ ಜೊತೆಗೆ, ಚಿತ್ರದಲ್ಲಿ ರಾಚೆಲ್ ಡೇವಿಡ್ ಮತ್ತು ನಿಧಿ ಸುಬ್ಬಯ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ನಟರಾದ ಶರತ್ ಲೋಹಿತಾಶ್ವ, ಶಿವಮಣಿ, ಕೆಎಸ್ ಶ್ರೀಧರ್ ಮತ್ತು ಇತರರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.
ಚೆಫ್ ಚಿದಂಬರ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ ನಟ ರಮೇಶ್ ಅರವಿಂದ್
ಚೆಫ್ ಚಿದಂಬರ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ ನಟ ರಮೇಶ್ ಅರವಿಂದ್
Updated on

ಎಂ ಆನಂದರಾಜ್ ನಿರ್ದೇಶನದ ಅನಿರುದ್ಧ ಜಟ್ಕರ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಚೆಫ್ ಚಿದಂಬರ ಚಿತ್ರದ ಟ್ರೇಲರ್ ಅನ್ನು ನಟ ರಮೇಶ್ ಅರವಿಂದ್ ಅವರು ಅದ್ಧೂರಿ ಸಮಾರಂಭದಲ್ಲಿ ಬಿಡುಗಡೆ ಮಾಡಿದರು. ಸಮಾರಂಭದಲ್ಲಿ ಇತರ ಪ್ರಮುಖ ಗಣ್ಯರು ಭಾಗವಹಿಸಿದ್ದರು. ಟ್ರೈಲರ್ ಬಿಡುಗಡೆಯ ನಂತರ, ರಮೇಶ್ ಅರವಿಂದ್ ಅವರು ನಟ ಅನಿರುದ್ಧ್ ಅವರೊಂದಿಗಿನ ಸಹಯೋಗವನ್ನು ನೆನಪಿಸಿಕೊಂಡರು ಮತ್ತು ಚಿತ್ರತಂಡಕ್ಕೆ ಶುಭ ಕೋರಿದರು. ಚೆಫ್ ಚಿದಂಬರ ಚಿತ್ರವು ಜೂನ್ 14 ರಂದು ಬಿಡುಗಡೆಗೆ ಸಜ್ಜಾಗಿದೆ.

ಅನಿರುದ್ಧ ಜೊತೆಗೆ, ಚಿತ್ರದಲ್ಲಿ ರಾಚೆಲ್ ಡೇವಿಡ್ ಮತ್ತು ನಿಧಿ ಸುಬ್ಬಯ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ನಟರಾದ ಶರತ್ ಲೋಹಿತಾಶ್ವ, ಶಿವಮಣಿ, ಕೆಎಸ್ ಶ್ರೀಧರ್ ಮತ್ತು ಇತರರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಡಾರ್ಕ್ ಕಾಮಿಡಿ ಕ್ರೈಮ್ ಥ್ರಿಲ್ಲರ್ ಎಂದು ಬಿಂಬಿಸಲಾದ ಚೆಫ್ ಚಿದಂಬರ ಚಿತ್ರವು ಮೃತದೇಹದ ಸುತ್ತ ಸುತ್ತುತ್ತದೆ ಟ್ರೈಲರ್ ಸುಳಿವು ನೀಡುತ್ತದೆ.

'ಚಿತ್ರವು ಚಿದಂಬರ ಅಪರಾಧದ ಹಿಂದಿನ ಮಾಸ್ಟರ್‌ಮೈಂಡ್ ಆಗಿದ್ದಾನೆಯೇ ಅಥವಾ ಅದರಲ್ಲಿ ಸಿಕ್ಕಿಬಿದ್ದಿದ್ದಾನೆಯೇ ಎಂಬುದನ್ನು ಅನ್ವೇಷಿಸುತ್ತದೆ. ಶರತ್ ಲೋಹಿತಾಶ್ವ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ' ಎಂದು ಆನಂದ್ ರಾಜ್ ವಿವರಿಸುತ್ತಾರೆ.

ಚೆಫ್ ಚಿದಂಬರ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ ನಟ ರಮೇಶ್ ಅರವಿಂದ್
'ಚೆಫ್ ಚಿದಂಬರ' ಚಿತ್ರದ ಶೀರ್ಷಿಕೆ ಗೀತೆಗೆ ತಾವೇ ಧ್ವನಿ ನೀಡಿದ ನಟ ಅನಿರುದ್ಧ್ ಜಟ್ಕರ್

ರೂಪಾ ಡಿ ಎನ್ ಅವರು ದಮ್ತಿ ಪಿಕ್ಚರ್ಸ್ ಲಾಂಛನದಲ್ಲಿ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಈ ಸಿನಿಮಾಕ್ಕೆ ನಿರ್ದೇಶಕರೇ ಕಥೆ ಬರೆದಿದ್ದು, ಚಿತ್ರಕಥೆ, ಸಂಭಾಷಣೆ ಗಣೇಶ್ ಪರಶುರಾಮ್ ಬರೆದಿದ್ದಾರೆ. ಚಿತ್ರಕ್ಕೆ ಉದಯ್ ಲೀಲಾ ಅವರ ಛಾಯಾಗ್ರಹಣ, ರಿತ್ವಿಕ್ ಮುರಳೀಧರ್ ಅವರ ಸಂಗೀತ ಸಂಯೋಜನೆ, ಚಂದ್ರು ಅವರ ಸಂಕಲನವಿದೆ.

ಚೆಫ್ ಚಿದಂಬರ ಚಿತ್ರವು ಡಾಲಿ ಧನಂಜಯ್ ನಟನೆಯ ಕೋಟಿ ಮತ್ತು ವಸಿಷ್ಠ ಸಿಂಹ ನಟನೆಯ ಲವ್ LI ಜೊತೆಗೆ ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಿದ್ಧವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com