'ಚೆಫ್ ಚಿದಂಬರ' ಚಿತ್ರದ ಶೀರ್ಷಿಕೆ ಗೀತೆಗೆ ತಾವೇ ಧ್ವನಿ ನೀಡಿದ ನಟ ಅನಿರುದ್ಧ್ ಜಟ್ಕರ್

ಎಂ ಆನಂದರಾಜ್ ನಿರ್ದೇಶನದ ಚೆಫ್ ಚಿದಂಬರ ಚಿತ್ರದಲ್ಲಿ ನಟ ಅನಿರುದ್ಧ್ ಜಟ್ಕರ್ ನಾಯಕನಾಗಿ ನಟಿಸಿದ್ದು, ಇತ್ತೀಚೆಗಷ್ಟೇ ಚಿತ್ರೀಕರಣ ಪೂರ್ಣಗೊಂಡಿದೆ. ಜೊತೆ ಜೊತೆಯಲಿ ಧಾರಾವಾಹಿಯ ಮೂಲಕ ಖ್ಯಾತಿ ಗಳಿಸಿದ ನಟ ಅನಿರುದ್ಧ್ ಈಗ ಚೆಫ್ ಚಿದಂಬರ ಚಿತ್ರದಲ್ಲಿ ಗಾಯಕರಾಗಿದ್ದಾರೆ. ಚಿತ್ರದ ಶೀರ್ಷಿಕೆ ಗೀತೆಯಾದ 'ಪ್ರತಿ ಬಾರಿ ಮಿತಿ ಮೀರಿ' ಹಾಡಿಗೆ ಧ್ವನಿ ನೀಡಿದ್ದಾರೆ.
ಚೆಫ್ ಚಿದಂಬರ ಚಿತ್ರಕ್ಕಾಗಿ ಗಾಯಕರಾದ ನಟ ಅನಿರುದ್ಧ್ ಜಟ್ಕರ್
ಚೆಫ್ ಚಿದಂಬರ ಚಿತ್ರಕ್ಕಾಗಿ ಗಾಯಕರಾದ ನಟ ಅನಿರುದ್ಧ್ ಜಟ್ಕರ್
Updated on

ಎಂ ಆನಂದರಾಜ್ ನಿರ್ದೇಶನದ ಚೆಫ್ ಚಿದಂಬರ ಚಿತ್ರದಲ್ಲಿ ನಟ ಅನಿರುದ್ಧ್ ಜಟ್ಕರ್ ನಾಯಕನಾಗಿ ನಟಿಸಿದ್ದು, ಇತ್ತೀಚೆಗಷ್ಟೇ ಚಿತ್ರೀಕರಣ ಪೂರ್ಣಗೊಂಡಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಶೀಘ್ರದಲ್ಲೇ ಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ. ಕಿಚ್ಚ ಸುದೀಪ್ ಈ ಹಿಂದೆ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದು, ಅನಿರುದ್ಧ್ ಅವರು ಚೆಫ್ ಆಗಿ ಕಾಣಿಸಿಕೊಂಡಿದ್ದಾರೆ. ಇದು ಈಗಾಗಲೇ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ.

ಜೊತೆ ಜೊತೆಯಲಿ ಧಾರಾವಾಹಿಯ ಮೂಲಕ ಖ್ಯಾತಿ ಗಳಿಸಿದ ನಟ ಅನಿರುದ್ಧ್ ಈಗ ಚೆಫ್ ಚಿದಂಬರ ಚಿತ್ರದಲ್ಲಿ ಗಾಯಕರಾಗಿದ್ದಾರೆ. ಚಿತ್ರದ ಶೀರ್ಷಿಕೆ ಗೀತೆಯಾದ 'ಪ್ರತಿ ಬಾರಿ ಮಿತಿ ಮೀರಿ' ಹಾಡಿಗೆ ಧ್ವನಿ ನೀಡಿದ್ದಾರೆ. ಈ ಹಾಡು ಇದೀಗ A2 ಮ್ಯೂಸಿಕ್ ಚಾನೆಲ್‌ನಲ್ಲಿ ಲಭ್ಯವಿದೆ. ರಿತ್ವಿಕ್ ಮುರಳೀಧರ್ ಸಂಗೀತ ಸಂಯೋಜಿಸಿದ ಮತ್ತು ಶ್ರೀ ಗಣೇಶ್ ಪರಶುರಾಮ್ ಬರೆದಿರುವ ಈ ಹಾಡಿನಲ್ಲಿ ಮೋಹಿತ್ ಗೌಡ ಅವರು ರ್ಯಾಪ್ ಪೋರ್ಶನ್ ಅನ್ನು ಸಹ ನೀಡಿದ್ದಾರೆ. ಅನಿರುದ್ಧ್ ಈ ಹಿಂದೆ ಸಹ ಇತರ ಮೂರು ಹಾಡುಗಳಿಗೆ ಧ್ವನಿ ನೀಡಿದ್ದು, ಅದರಲ್ಲಿ ಎರಡು ಇತರ ಚಿತ್ರಗಳ ಹಾಡಾಗಿವೆ.

ರೂಪಾ ಡಿ ಎನ್ ಅವರು ದಮ್ತಿ ಪಿಕ್ಚರ್ಸ್ ಲಾಂಛನದಲ್ಲಿ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಈ ಸಿನಿಮಾಕ್ಕೆ ನಿರ್ದೇಶಕರೇ ಕಥೆ ಬರೆದಿದ್ದು, ಚಿತ್ರಕಥೆ, ಸಂಭಾಷಣೆ ಗಣೇಶ್ ಪರಶುರಾಮ್ ಬರೆದಿದ್ದಾರೆ. ಚಿತ್ರಕ್ಕೆ ಉದಯ್ ಲೀಲಾ ಅವರ ಛಾಯಾಗ್ರಹಣವಿದೆ.

ಚೆಫ್ ಚಿದಂಬರ ಚಿತ್ರಕ್ಕಾಗಿ ಗಾಯಕರಾದ ನಟ ಅನಿರುದ್ಧ್ ಜಟ್ಕರ್
ಚೆಫ್ ಚಿದಂಬರನಾಗಿ ಅನಿರುದ್ಧ್ ಜಟ್ಕರ್: ಶೀರ್ಷಿಕೆ ಬಿಡುಗಡೆ ಮಾಡಿದ ಸುದೀಪ್

ಚಿತ್ರದಲ್ಲಿ ರಾಚೆಲ್ ಡೇವಿಡ್ ಮತ್ತು ನಿಧಿ ಸುಬ್ಬಯ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ನಟರಾದ ಶರತ್ ಲೋಹಿತಾಶ್ವ, ಶಿವಮಣಿ, ಕೆಎಸ್ ಶ್ರೀಧರ್ ಮತ್ತು ಇತರರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com