ಸಿನಿಮಾ ಸುದ್ದಿ'ಚೆಫ್ ಚಿದಂಬರ' ಚಿತ್ರದ ಶೀರ್ಷಿಕೆ ಗೀತೆಗೆ ತಾವೇ ಧ್ವನಿ ನೀಡಿದ ನಟ ಅನಿರುದ್ಧ್ ಜಟ್ಕರ್
ಎಂ ಆನಂದರಾಜ್ ನಿರ್ದೇಶನದ ಚೆಫ್ ಚಿದಂಬರ ಚಿತ್ರದಲ್ಲಿ ನಟ ಅನಿರುದ್ಧ್ ಜಟ್ಕರ್ ನಾಯಕನಾಗಿ ನಟಿಸಿದ್ದು, ಇತ್ತೀಚೆಗಷ್ಟೇ ಚಿತ್ರೀಕರಣ ಪೂರ್ಣಗೊಂಡಿದೆ. ಜೊತೆ ಜೊತೆಯಲಿ ಧಾರಾವಾಹಿಯ ಮೂಲಕ ಖ್ಯಾತಿ ಗಳಿಸಿದ ನಟ ಅನಿರುದ್ಧ್ ಈಗ ಚೆಫ್ ಚಿದಂಬರ ಚಿತ್ರದಲ್ಲಿ ಗಾಯಕರಾಗಿದ್ದಾರೆ. ಚಿತ್ರದ ಶೀರ್ಷಿಕೆ ಗೀತೆಯಾದ 'ಪ್ರತಿ ಬಾರಿ ಮಿತಿ ಮೀರಿ' ಹಾಡಿಗೆ ಧ್ವನಿ ನೀಡಿದ್ದಾರೆ.