
ಚೆನ್ನೈ: ನಟ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಅರ್ಜುನ್ ಮತ್ತು ನಟ ತಂಬಿ ರಾಮಯ್ಯ ಅವರ ಪುತ್ರ ಉಮಾಪತಿ ರಾಮಯ್ಯ ಜೂನ್ 10ರಂದು ಚೆನ್ನೈನ ಗೇರುಗಂಬಾಕ್ಕಂನಲ್ಲಿರುವ ಶ್ರೀ ಯೋಗಾ ಆಂಜನೇಯ ದೇವಸ್ಥಾನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಂಬಂಧಿಕರು ಮತ್ತು ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ವಿವಾಹ ನೆರವೇರಿತು.
ವಿವಾಹ ಸಮಾರಂಭದಲ್ಲಿ ಐಶ್ವರ್ಯಾ ಅವರೊಂದಿಗೆ ಪಟ್ಟತ್ತು ಯಾನೈ ಚಿತ್ರದಲ್ಲಿ ಕೆಲಸ ಮಾಡಿದ ನಟ ವಿಶಾಲ್ ಸೇರಿದಂತೆ ನಟರಾದ ಕಾರ್ತಿ, ಧ್ರುವ ಸರ್ಜಾ, ಜಗಪತಿ ಬಾಬು, ಸಮುದ್ರಕನಿ, ವಿಜಯಕುಮಾರ್ ಮತ್ತು ಸೆಂಥಿಲ್ ಭಾಗವಹಿಸಿದ್ದರು.
ಇದರೊಂದಿಗೆ ಕೆಎಸ್ ರವಿಕುಮಾರ್, ಜಿಕೆ ರೆಡ್ಡಿ, ಎಸ್ಆರ್ ಪ್ರಭು ಮತ್ತು ಕೆಇ ಜ್ಞಾನವೇಲ್ ರಾಜಾ ಕೂಡ ಭಾಗವಹಿಸಿದ್ದರು. ನಟಿ ಐಶ್ವರ್ಯಾ ಅವರು ತಮ್ಮ ವಿವಾಹದ ಫೋಟೊಗಳನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಕಳೆದ ವರ್ಷವಷ್ಟೇ ಇಬ್ಬರ ಡೇಟಿಂಗ್ ಸುದ್ದಿ ಹೊರಬಿದ್ದಿತ್ತು. ಬಳಿಕ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಈ ಯುವ ಯೋಡಿ ಕುಟುಂಬಸ್ಥರ ಒಪ್ಪಿಗೆ ಪಡೆದು ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿತ್ತು.
ದಂಪತಿಯ ಆರತಕ್ಷತೆ ಜೂನ್ 14 ರಂದು ಜನಪ್ರಿಯ ಹೋಟೆಲ್‌ನಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದ್ದು, ದಕ್ಷಿಣದ ಚಲನಚಿತ್ರೋದ್ಯಮದ ಸೆಲೆಬ್ರಿಟಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
Advertisement